ಬಿದ್ದಾತಂಡ ಮೇರಿ ಚಿಟ್ಟಿಯಪ್ಪ ಸಹಕಾರಿ ಮಹಿಳಾ ಸಮಾಜದ ನೂತನ ಅಧ್ಯಕ್ಷ

KannadaprabhaNewsNetwork |  
Published : Feb 26, 2026, 03:00 AM IST
25-ಎನ್ ಪಿ ಕೆ-1ನಾಪೋಕ್ಲು ಸಹಕಾರಿ ಮಹಿಳಾ ಸಮಾಜದ  ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳು ಜೊತೆ ಚುನಾವಣಾ ಅಧಿಕಾರಿ.  | Kannada Prabha

ಸಾರಾಂಶ

ಸಮಾಜದ ಸಭಾಂಗಣದಲ್ಲಿ ಜರುಗಿದ ಪದಾಧಿಕಾರಿಗಳ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕೇಲೆಟ್ಟೀರ ಬಿ. ಮುತ್ತಮ್ಮ ಆಯ್ಕೆಯಾದರು.

ನಾಪೋಕ್ಲು: ಸಹಕಾರಿ ಮಹಿಳಾ ಸಮಾಜದ (ನಂ. 393ನೇ) ನಾಪೋಕ್ಲು ಇದರ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಿದ್ದಾತಂಡ ಮೇರಿ ಚಿಟ್ಟಿಯಪ್ಪ ಆಯ್ಕೆಯಾದರು. ಸಮಾಜದ ಸಭಾಂಗಣದಲ್ಲಿ ಜರುಗಿದ ಪದಾಧಿಕಾರಿಗಳ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕೇಲೆಟ್ಟೀರ ಬಿ. ಮುತ್ತಮ್ಮ ಆಯ್ಕೆಯಾದರು. ನಿರ್ದೇಶಕರಾಗಿ ಕುಲ್ಲೇಟಿರ ಹೇಮಾವತಿ ಅರುಣ್, ಕೇಲೇಟಿರ ದಿವ್ಯ ಮುತ್ತಪ್ಪ, ಕುಟ್ಟನ್ಜಟ್ಟಿರ ವಿನಿತಾ ಸೋಮಣ್ಣ, ಕಾಂಡಂಡ ಲೀಲಾವತಿ ಪೊನ್ನಣ್ಣ, ಹೇಮಾವತಿ ರಾಮಕೃಷ್ಣ, ಮಣವಟ್ಟಿರ ಜಾನ್ಸಿ ತಿಮ್ಮಯ್ಯ, ಮುಂಡಂಡ ಕವಿತಾ ಅಯ್ಯಣ್ಣ , ಬಿದ್ದಾತಂಡ ಗಿರಿಜಾ ಬೋಪಣ್ಣ, ಬೊಪ್ಪಂಡ ಶೈಲಾ ಬೋಪಯ್ಯ ಆಯ್ಕೆಯಾದರು. ರಾಜೇಶ್ವರಿ ಲೋಕೇಶ್ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಚುನಾವಣಾ ಅಧಿಕಾರಿಯಾಗಿ ಎಆರ್ ರಿಟರ್ನರ್ ಆಫೀಸರ್ ಪ್ರದೀಪ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌