ಕನ್ನಡಪ್ರಭ ವಾರ್ತೆ ತುರುವೇಕೆರೆ
ತುರುವೇಕೆರೆ ತಾಲೂಕು ಸೊರವನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹೊಣೆಕೆರೆಯಲ್ಲಿ ನಡೆದ ಗ್ರಾಮ ಸಭೆಯೂ ಗೊಂದಲದ ಗೂಡಾಗಿ ನಿರ್ಮಾಣವಾಗಿತ್ತು. ಈ ಹಿಂದೆ ನಡೆದ ಗ್ರಾಮ ಸಭೆಯು ಅನಿವಾರ್ಯ ಕಾರಣಗಳಿಂದಾಗಿ ರದ್ದಾಗಿದ್ದವು. ಈ ವೇಳೆ ಅನೇಕರು, ತಮ್ಮ ಊರಿನಲ್ಲಿ ಕಾಮಗಾರಿಗಳನ್ನು ಮಾಡದೆ ಲಕ್ಷಾಂತರ ರು.ಗಳನ್ನು ವಂಚಿಸಲಾಗಿದೆ ಎಂದು ಆರೋಪಿಸಿದರು. ಈ ಬೆನ್ನಲ್ಲೇ ಅಲ್ಲಿನ ಸದಸ್ಯರುಗಳು ಕಾಮಗಾರಿಯನ್ನು ಬೇರೆಡೆ ಮಾಡಲಾಗಿದ್ದು ಗ್ರಾಮ ಪಂಚಾಯಿತಿಯಿಂದ ಡ್ರಾ ಮಾಡಲಾಗಿರುವ ಹಣವನ್ನು ಸರಿದೂಗಿಸಲಾಗಿದೆ ಎಂದು ಸಮಜಾಯಿಸಿ ನೀಡಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿ ಕೊನೆಗೆ ಯಾರು ಮಾತು ಯಾರು ಕೇಳದ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಸದಸ್ಯರೊಬ್ಬರು ಕಾಮಗಾರಿ ಮಾಡದೆ ಹಣ ನೀಡಿರುವುದನ್ನು ದಾಖಲೆ ಸಮೇತ ವಿವರಿಸಿದರು. ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಗಳ ಪರವಾಗಿ ಜಗದೀಶ್ ಆಗಮಿಸಿದ್ದರು. ಉದ್ಯೋಗ ಖಾತರಿ ಯೋಜನೆಯ ನೋಡಲ್ ಸಂಯೋಜಕರಾದ ಹೇಮಾವತಿ ಸೊರವನಹಳ್ಳಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಹನುಮಂತರಾಜು, ಸೊರವನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷ ಮಂಜುನಾಥ, ಸದಸ್ಯರಾದ ಗೋವಿಂದಯ್ಯ, ಇಂದಿರಾ ಕೃಷ್ಣ ಸ್ವಾಮಿ, ಸಿದ್ದಗಂಗಮ್ಮ, ಮಹಾಲಕ್ಷ್ಮಮ್ಮ, ಶಶಿಕಲಾ, ಮಹೇಶ್, ಮಹಾಲಿಂಗಪ್ಪ, ಜಾಬೀರ್ ಹುಸೇನ್, ಸುರೇಶ್ , ಸಂದೇಶ್ ಉಪಸ್ಥಿತರಿದ್ದರು.ಆಗ್ರಹ: ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಗ್ರಾಮದ ಮುಖಂಡರಾದ ಮೂಡಲಗಿರಿಗೌಡ, ಕುಮಾರ್, ವೇಣುಗೋಪಾಲ್, ರಾಮು, ಮನು, ಕಪನಿಗೌಡ, ಮಂಜೇಗೌಡ, ಬಸವರಾಜು, ಲಿಂಗರಾಜು ಸೇರಿದಂತೆ ಹಲವಾರು ಮಂದಿ ಆಗ್ರಹಿಸಿದರು.
ಗ್ರಾಮದ ಮುಖಂಡರಾದ ಕೋನೇಗೌಡ, ಸಂತೋಷ್, ಹೇಮಂತ್, ಅರುಣ್ ಕುಮಾರ್, ಗಂಗಾಧರ್, ಲಕ್ಷ್ಮಣ್ ಕುಮಾರ್, ಪದ್ಮನಾಭ, ಲಕ್ಷ್ಮೀರಾಜಶೇಖರ್, ಶರತ್, ರೂಪಾ, ನೇತ್ರಾವತಿ, ಶಾರದಾ ಮತ್ತಿತರರು, ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳೇ ನಡೆದಿರಲಿಲ್ಲ. ಈಗ ಗ್ರಾಮದಲ್ಲಿ ಒಂದಿಷ್ಟು ಕಾಮಗಾರಿಗಳು ಆಗಿವೆ. ಇದನ್ನು ಸಹಿಸದೇ ತಗಾದೆ ತೆಗೆದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.