ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೋಟೆಲ್ ರಾಮದಾಸ್ ಆವರಣದ ಸುಲೋಚನಮ್ಮ ಪಾರ್ಟಿಹಾಲ್‌ನಲ್ಲಿ ಕಾರ್ಯಕ್ರಮದ ಪ್ರಚಾರ ಕರಪತ್ರ ಮತ್ತು ಭಿತ್ತಿ ಪತ್ರ ಬಿಡುಗಡೆ ಮಾಡಿ, ಸಮಾಜೋತ್ಸವದಲ್ಲಿ ತಾಲೂಕಿನ ಎಲ್ಲಾ ಹಿಂದೂಗಳು ಭಾಗವಹಿಸಿ ಧರ್ಮ ಜಾಗೃತಿ, ರಕ್ಷಣೆ ಕಾರ್ಯದಲ್ಲಿ ಕೈಜೋಡಿಸುವಂತೆ ಕೋರಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರುವರ್ಷ ತುಂಬಿದ ಹಿನ್ನೆಲೆಯಲ್ಲಿ ಆರ್.ಎಸ್.ಎಸ್ ದೇಶದಾದ್ಯಂತ ಹಿಂದೂ ಸಮಾಜೋತ್ಸವವನ್ನು ಪ್ರತಿ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಮಂಡಲವಾರು ನಡೆಸುತ್ತಿದೆ ಎಂದರು.ಹಿಂದೂ ಸಮಾಜದಲ್ಲಿ ಭಾಷೆ, ವೇಷ, ಆಹಾರ, ಸಂಪ್ರದಾಯ, ಆಚರಣೆ, ಆರಾಧನೆಗಳು ವೈವಿದ್ಯಮಯವಾಗಿದ್ದರೂ ಏಕತೆಯಿಂದ ಇದೆ. ಭಾರತೀಯ ಸಂಸ್ಕೃತಿ ಮೌಲ್ಯಗಳು ಮತ್ತು ಹಿರಿಯರ ಜೀವನ ಮೌಲ್ಯ ಜಾಗೃತಗೊಳಿಸಿ ಶಾಂತಿಯುತ ಸಾಮಾಜಿಕ ಸಾಮರಸ್ಯದ ಬದುಕನ್ನು ಮುಂದಿನ ಪೀಳಿಗೆಗೆ ಸಾರಬೇಕಾಗಿದೆ ಎಂದರು.
ಈಗಾಗಲೇ ತಾಲೂಕಿನ ತೆಂಡೇಕೆ ಮತ್ತು ಕಿಕ್ಕೇರಿ ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಯಶಸ್ವಿಯಾಗಿ ನಡೆದಿದೆ. ಫೆ.4 ಪಟ್ಟಣದ ಕೆರೆ ಬೀದಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಂದಿ ಪೂಜೆ ಮೂಲಕ ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ಬೃಹತ್ ಹಿಂದೂ ಶೋಭಾಯಾತ್ರೆ ಪುರಸಭಾ ಆವರಣ ತಲುಪಲಿದೆ. ಸಂಜೆ 4.30ಕ್ಕೆ ಪುರಸಭಾ ಮೈದಾನದ ಆವರಣದಲ್ಲಿ ಬೃಹತ್ ಧಾರ್ಮಿಕ ಸಭೆ ನಡೆಯಲಿದೆ ಎಂದರು.
ಈ ವೇಳೆ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಅರವಿಂದ ಕಾರಂತ, ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ, ಹಿಂದೂ ಸಂಘಟನೆ ಪ್ರಮುಖರಾದ ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಸಂತೇಬಾಚಹಳ್ಳಿ ಮಂಜುನಾಥ, ಜನಾರ್ದನ, ಪ್ರವೀಣ್, ಹರೀಶ್, ನಿವೃತ್ತ ಶಿಕ್ಷಕ ಬಿ.ಸಿ.ಎಸ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಆಸರೆ ಎಚ್.ಬಿ. ಮಂಜುನಾಥ್ ಸೇರಿದಂತೆ ಹಲವರಿದ್ದರು.