ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ವಿರುದ್ಧ ನಡೆದ ಧರಣಿಯಲ್ಲಿ ಮಾತನಾಡಿದ ಅವರು, ನಮ್ಮ ನಮ್ಮಲ್ಲೇ (ಹಿಂದೂಗಳಲ್ಲಿ) ಒಡೆದು ಹೀಗೆ ಮಾಡಿದ್ದಾರೆ. ನಾವು ಹಿಂದೂಗಳೆಲ್ಲ ಒಂದೇ ಎಂದು ಭಾವನೆ ಬರಬೇಕು. ಸುಮ್ಮನೆ ಬ್ರಾಹ್ಮಣರು, ಲಿಂಗಾಯತರು, ದಲಿತರು ಎಂಬ ಬೇಧಭಾವ ಕಿತ್ತೊಗೆದು ನಾವು ಹಿಂದೂಗಳು ಒಗ್ಗಟ್ಟಾಗಬೇಕು. ರಾವಣ ಬ್ರಾಹ್ಮಣ ಇದ್ದ, ರಾಮ ಕ್ಷತ್ರೀಯ, ಕೃಷ್ಣ ಗೊಲ್ಲನಿದ್ದ. ಆದರೆ ಅವರನ್ನು ಪೂಜೆ ಮಾಡುವವರು ಬ್ರಾಹ್ಮಣರು. ನಮ್ಮ ನಮ್ಮಲ್ಲಿ ಜಾತಿಗಳು ಇರಬಾರದು ಎಂದು ಹೇಳಿದರು.ಈ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ, ಇದು ಈಗಷ್ಟೆ ಆರಂಭವಾಗಿದೆ. ಕಾಂಗ್ರೆಸ್ ಸಂಸದರ ಮನೆಗೆ ಹೋಗಿ ಕೇಳಬೇಕು. ಯಾಕಪಾ? ನಾವು ಓಟ್ ಹಾಕಿಲ್ಲವಾ? ಯಾಕೆ ಹೀಗೆ ಹಿಂದೂಗಳ ಮೇಲೆ ಕುತಂತ್ರ ಮಾಡುತ್ತಿದ್ದೀರಿ ಎಂದು ಕೇಳಬೇಕು ಎಂದರು. ಸಚಿವ ಜಮೀರ್ ಅಹಮ್ಮದನಿಂದ ಈಗ ಅವರಲ್ಲೇ (ಕಾಂಗ್ರೆಸ್‌ನಲ್ಲಿ) ಹೇಗೆ ಬೆಂಕಿ ಹೊತ್ತಿದೆ ನೋಡಿ, ಅವರಲ್ಲೇ 30 ಶಾಸಕರು ಅವನ ವಿರುದ್ಧ ನಿಯೋಗ ಹೊರಟಿದ್ದಾರೆ ಎಂದು ತಿಳಿಸಿದರು.ನಾನು ಅಶ್ವಮೇಧ ಕಟ್ಟಿಹಾಕಿದೆ
ಹಿಂದೆಲ್ಲ ರಾಜರು ಯುದ್ಧ ಸಾರುವ ಮೊದಲು ತಮ್ಮ ಅಶ್ವಮೇಧ ಕುದುರೆ ಬಿಡುತ್ತಿದ್ದರು. ಅದು ಎಲ್ಲೆಡೆ ಹೋಗುತ್ತಿತ್ತು, ಹಾಗೆ ಬಂದ ಅಶ್ವಮೇಧವನ್ನು ಯಾರು ಕಟ್ಟಿಹಾಕುತ್ತಾರೋ ಅವರ ಜೊತೆ ಯುದ್ಧ ಎಂಬ ನಿಯಮವಿತ್ತು. ಹಾಗೇ ಈ ರಾಜಕೀಯದ ಕುದುರೆ ಈ (ಜಮೀರ್ ಅಹಮ್ಮದ ಖಾನ್) ಬೀದರ, ಕಲಬುರಗಿಗೆ ಹೋಗಿ ವಕ್ಫ್ ಆಸ್ತಿ ಕೊಳ್ಳೆ ಹೊಡೆಯಲು ಸೂಚಿಸಿತ್ತು. ಆ ಸಮಯದಲ್ಲಿ ಅಲ್ಲಿಯವರು ಅದನ್ನು ಕಟ್ಟಿ ಹಾಕಿರಲಿಲ್ಲ. ಆದರೆ ವಿಜಯಪುರಕ್ಕೆ ಬಂದ ತಕ್ಷಣ ನಾವು ಮುಂದೆ ಬಿಡದೆ ಅದನ್ನು ಕಟ್ಟಿ ಹಾಕಿದ್ದೀವಿ ಎಂದರು.ಪಾಕಿಸ್ತಾನದಲ್ಲಿ ಹಿಂದೂಗಳ ಗರ್ಭಗುಡಿಯಲ್ಲಿ ದನ ಕಡಿಯುತ್ತಾರೆ. ಹಾಗೆಯೇ ಭಾರತವೂ ಸಹ ಪಾಕಿಸ್ತಾನ ಆಗಿದೆ. ಪಾಕಿಸ್ತಾನದಂತೆ ಭಾರತದಲ್ಲಿಯೂ ಸಹ ವಕ್ಫ್‌ಬೋರ್ಡ್ ಆಸ್ತಿ 9.5 ಲಕ್ಷ ಚದರ್ ಕಿಲೊಮೀಟರ್ ಎಂದು ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯ ಬಂದಮೇಲೆ ವಕ್ಫ್‌ಬೋರ್ಡ್ ಆಸ್ತಿ 3500 ಎಕರೆ ಇತ್ತು, ಅದೇ 2019 ರಲ್ಲಿ 5.81 ಲಕ್ಷ ಎಕರೆ ಆಯಿತು. ಇಂದು ದೇಶದಲ್ಲಿ 9.5 ಲಕ್ಷ ಎಕರೆ ಆಗಿದೆ. ಇದೆಲ್ಲ ಹೇಗೆ ಆಯಿತು? ಎಂದು ಪ್ರಶ್ನಿಸಿದರು.
ವಕ್ಫ್ ವಿರುದ್ಧದ ಹೋರಾಟಕ್ಕೆ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಬಂದು ಧರಣಿ ಕೂಡುತ್ತಾರೆ ಎಂದರೆ ಅದು ಸಾಮಾನ್ಯ ಅಲ್ಲ. ಅವರಂತೆ ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಾಸಕರಾದ ರಮೇಶ ಜಾರಕಿಹೊಳಿ, ಹರೀಶ ಪಾಟೀಲ ಸೇರಿದಂತೆ ಎಲ್ಲರು ಬಂದರು. ದೇಶಾಭಿಮಾನ ಇದ್ದವರು ಎಲ್ಲರೂ ಈ ಹೋರಾಟಕ್ಕೆ ಬರುತ್ತಾರೆ, ಇಲ್ಲದಿದ್ದವರು ಬರುವುದಿಲ್ಲ ಎಂದರು.ಬಾಕ್ಸ್‌ಸಿಎಂ ವಿರುದ್ಧ ಏಕವಚನದಲ್ಲೇ ವಾಗ್ದಾಳಿ
ಒಂದಲ್ಲ ಒಂದಿನ ಧರ್ಮಯುದ್ಧ ಆಗುವುದು ಖಚಿತ. ಧರ್ಮವು ಉಳಿಯಬೇಕಾದರೆ ಯುದ್ಧ ಆಗುವುದೇ. ಹಿಂದೂಗಳು ಉಳಿಯಬೇಕು, ನಮ್ಮ ಆಸ್ತಿಗಳು ಉಳಿಯಬೇಕು, ದೇಶ, ದೇಶದ ಸಂಸ್ಕ್ರತಿ ಉಳಿಯಬೇಕಾದರೆ ಧರ್ಮಯುದ್ಧ ನಿಶ್ಚಿತ.ಬಸನಗೌಡ ಪಾಟೀಲ, ಶಾಸಕ