ಕುಶಾಲನಗರ: ಬೃಹತ್ ಚಿತ್ರಪಟ ಅನಾವರಣ

KannadaprabhaNewsNetwork |  
Published : Feb 25, 2024, 01:49 AM IST
ಬೃಹತ್ ಚಿತ್ರಪಟ ಅನಾವರಣ | Kannada Prabha

ಸಾರಾಂಶ

ಅಮಿತಾಯುಶ್ ಚಿತ್ರ ಪರದೆಯನ್ನು ಅರ್ಧ ಗಂಟೆಗಳ ಕಾಲ ಅನಾವರಣಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರಸಮೀಪದ ಬೈಲುಕೊಪ್ಪೆ ನಿರಾಶ್ರಿತ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಪರದೆ ಎನ್ನುವ ಖ್ಯಾತಿ ಹೊಂದಿರುವ ಅಮಿತಾಯುಶ್ ಚಿತ್ರ ಪರದೆಯನ್ನು ಅರ್ಧ ಗಂಟೆಗಳ ಕಾಲ ಅನಾವರಣಗೊಳಿಸಲಾಯಿತು. ಟಿಬೆಟಿಯನ್ ನಾಗರಿಕರ ನೂತನ ವರ್ಷದ ಲೋಸಾರ್ ಅಂಗವಾಗಿ ಈ ವಿಶೇಷ ಚಿತ್ರಪಟ ಪ್ರದರ್ಶನ ವರ್ಷಂಪ್ರತಿ ನಡೆಯುತ್ತಿದ್ದು ಈ ಸಂದರ್ಭ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.

ಶನಿವಾರ ಬೆಳಗ್ಗೆ ಏಳು ಮೂವತ್ತರಿಂದ ಎಂಟು ಗಂಟೆ ತನಕ ಪ್ರದರ್ಶನಕ್ಕೆ ಇಡಲಾದ ಈ ಚಿತ್ರ ಪರದೆಗೆ ಸಾವಿರಾರು ಸಂಖ್ಯೆಯ ಟಿಬೆಟಿಯನ್ ಬೌದ್ಧ ಭಿಕ್ಷುಗಳು ಮತ್ತು ನಾಗರಿಕರು ಪೂಜೆ ಸಲ್ಲಿಸಿ ಪುನೀತ ಭಾವ ತಳೆದರು.

ಸುಮಾರು 200 ಅಡಿ ಎತ್ತರ ಹಾಗೂ 170 ಅಗಲದ ಈ ಬೃಹತ್ ಚಿತ್ರಪರದೆಯನ್ನು ಆವರಣದಲ್ಲಿರುವ ಏಳು ಅಂತಸ್ತಿನ ಕಟ್ಟಡದ ಮೇಲೆ ಅಳವಡಿಸಿರುವ ಗೋಪುರದಲ್ಲಿ ಅಳವಡಿಸಿ ಪ್ರದರ್ಶನ ಮಾಡಲಾಯಿತು.

ಗೋಲ್ಡನ್ ಟೆಂಪಲ್ ನಿಂಗ್ಮಾಫ ದೇವಾಲಯದ ಧರ್ಮ ಗುರುಗಳ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.

ಬೈಲುಕೊಪ್ಪೆ ಸೇರಿದಂತೆ ವಿಶ್ವದ ಎಲ್ಲೆಡೆ ಇರುವ ಟಿಬೆಟಿಯನ್ ನಾಗರಿಕರು ಸೇರಿದಂತೆ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಟಿಬೆಟಿಯನ್ ನಾಗರಿಕರು ತಮ್ಮ ಸಾಂಪ್ರದಾಯಿಕ ಉಡುಗೆ ಕೊಡುಗೆ ಉಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.

ಈ ಬಾರಿ ಟಿಬೆಟ್ ನೂತನ ವರ್ಷ ಫೆ. 10 ರಿಂದ ಆರಂಭಗೊಂಡಿದ್ದು ಈ ನಡುವೆ ಪದ್ಮ ಶಾಂಭವ ಹಾಗೂ ಅಮಿತಾಯುಶ್ ಚಿತ್ರ ಪಟಗಳನ್ನು ಪ್ರದರ್ಶನ ಮಾಡಲಾಗುತ್ತದೆ.

24 ವರ್ಷಗಳಿಂದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಸಂರಕ್ಷಣೆ ಮಾಡಿ ಇರಿಸಲಾಗುವ ಈ ಬೃಹತ್ ಚಿತ್ರಪಟವನ್ನು ನೂರಾರು ಬೌದ್ಧ ಭಿಕ್ಷುಗಳು ಹೊತ್ತು ತಂದು

ಬೃಹತ್ ಗೋಪುರದಲ್ಲಿ ಅಳವಡಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ನಿರಂತರವಾಗಿ ನಡೆಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಠಗಳು ಸಮಾಜಕ್ಕೆ ಜ್ಞಾನದೀಪವಾಗಲಿ: ಸುತ್ತೂರು ಶ್ರೀ
ಪರಿಶಿಷ್ಟರಿಗೆ ವಿವಿಧ ಮೀಸಲಾತಿ, ಹಣ ಕೊಟ್ಟಿದ್ದೇ ನಾವು: ಸಿಎಂ