ಬೈಕ್ ಡಿಕ್ಕಿ: ಎಂಬಿಬಿಎಸ್ ವಿದ್ಯಾರ್ಥಿ ಸಾವು

KannadaprabhaNewsNetwork | Published : Oct 31, 2023 1:16 AM

ಸಾರಾಂಶ

ದಾಬಸ್‌ಪೇಟೆ: ಜಾಲಿರೈಡ್ ಗೆ ಬಂದು ವಾಪಸ್ ಹೋಗುತ್ತಿದ್ದಾಗ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಎಂಬಿಬಿಎಸ್ ವಿದ್ಯಾರ್ಥಿ ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಂಪುರ ಹೋಬಳಿಯ ರಾಷ್ಟ್ರೀಯ ಹೆದ್ದಾರಿ ೪೮ರ ಹೊಸನಿಜಗಲ್ ಬಳಿಯ ಹೆಚ್ ಪಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ದಾಬಸ್‌ಪೇಟೆ: ಜಾಲಿರೈಡ್ ಗೆ ಬಂದು ವಾಪಸ್ ಹೋಗುತ್ತಿದ್ದಾಗ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಎಂಬಿಬಿಎಸ್ ವಿದ್ಯಾರ್ಥಿ ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಂಪುರ ಹೋಬಳಿಯ ರಾಷ್ಟ್ರೀಯ ಹೆದ್ದಾರಿ ೪೮ರ ಹೊಸನಿಜಗಲ್ ಬಳಿಯ ಹೆಚ್ ಪಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ತುಮಕೂರು ಸಿದ್ದಾರ್ಥ ಕಾಲೇಜಿನಲ್ಲಿ ದ್ವಿತೀಯ ಎಂಬಿಬಿಎಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಉಸ್ಮಾನ್(20) ಮೃತಪಟ್ಟ ದುರ್ದೈವಿ. ಅಬ್ದುಲ್‌ಹಾದಿ (17) ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ. ಭಾನುವಾರ ಮಧ್ಯಾಹ್ನ ಉಸ್ಮಾನ್ ಹಾಗೂ ಆತನ ಸ್ನೇಹಿತರು 4 ಬೈಕ್ ಗಳಲ್ಲಿ ಜಾಲಿರೈಡ್ ಗೆ ದಾಬಸ್ ಪೇಟೆಗೆ ಬಂದಿದ್ದು, ಪೆಮ್ಮನಹಳ್ಳಿ ಸಮೀಪದ ಹೋಟೆಲ್ ಜೈಹಿಂದ್ ನಲ್ಲಿ ಊಟ ಮಾಡಿ ವಾಪಸ್‌ ಹೋಗುತ್ತಿದ್ದ ವೇಳೆ ಹೊಸನಿಜಗಲ್ ಸಮೀಪ ಎಚ್ ಪಿ ಪೆಟ್ರೋಲ್ ಬಂಕ್ ಬಳಿ ಅಪರಿಚಿತ ವಾಹನ ಉಸ್ಮಾನ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ದಾಬಸ್ ಪೇಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share this article