ಕಾಡಾನೆ ದಾಳಿ ಬೈಕ್ ಜಖಂ

KannadaprabhaNewsNetwork |  
Published : Feb 26, 2026, 03:00 AM IST
ಕಾಡಾನೆ ದಾಳಿ ಬೈಕ್ ಜಖಂ | Kannada Prabha

ಸಾರಾಂಶ

ಒಂಟಿ ಸಲಗವೊಂದು ಬೈಕ್ ಮೇಲೆ ದಾಳಿ ನಡೆಸಿದ ಪರಿಣಾಮ ಬೈಕ್ ಜಖಂಗೊಂಡಿದ್ದು, ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಮಾಲ್ದಾರೆ ವ್ಯಾಪ್ತಿಯ ಚೌಡಿಕಾಡುವಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಒಂಟಿ ಸಲಗವೊಂದು ಬೈಕ್ ಮೇಲೆ ದಾಳಿ ನಡೆಸಿದ ಪರಿಣಾಮ ಬೈಕ್ ಜಖಂಗೊಂಡಿದ್ದು, ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಮಾಲ್ದಾರೆ ವ್ಯಾಪ್ತಿಯ ಚೌಡಿಕಾಡುವಿನಲ್ಲಿ ನಡೆದಿದೆ.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಇವೊಲ್ವ್ ಬ್ಯಾಕ್ ಸಂಸ್ಥೆಯ ಹಿಲ್ ಕಿಲ್ ಗ್ರೂಪ್ಸ್ ಗೆ ಸೇರಿದ ಚೌಡಿ ಕಾಡ್ ಕಾಫಿ ತೋಟದಿಂದ ಕರ್ತವ್ಯ ಮುಗಿಸಿ ತಮ್ಮ ವಸತಿ ಗೃಹಕ್ಕೆ ತೆರಳುತ್ತಿದ್ದ ಸಿಬ್ಬಂದಿಗಳ ಬೈಕ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಸಿಬ್ಬಂದಿಗಳು ಬೈಕ್ ಬಿಟ್ಟು ಓಡಿದ್ದಾರೆ. ಈ ವೇಳೆ ಆನೆ ದಾಳಿಗೆ ಬೈಕ್ ಜಖಂಗೊಂಡಿದ್ದು, ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿರಂತರ ಕಾಡಾನೆ ಭೀತಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ಅರಣ್ಯ ಇಲಾಖೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಲ್ಲದೆ ಪದೇ ಪದೇ ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾರ್ಮಿಕರು ಹಾಗೂ ವಾಹನ ಸವಾರರ ಮೇಲೆ ದಾಳಿ ನಡೆಸುತ್ತಿರುವ ಮಾಹಿತಿ ಇದ್ದರೂ ಕೂಡ ಇಲಾಖೆ ಈವರೆಗೂ ಶಾಶ್ವತ ಪರಿಹಾರ ಕಲ್ಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಶೀಘ್ರ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರು, ಸಂಘಸಂಸ್ಥೆಗಳ ಸಹಕಾರದೊಂದಿಗೆ ಅರಣ್ಯ ಇಲಾಖೆ ವಿರುದ್ಧ ತೀವ್ರ ಹೋರಾಟ ನಡೆಸಲು ಮುಂದಾಗುವುದಾಗಿ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಪ್ರದೇಶದ ಅಭಿವೃದ್ಧಿ ಅವಶ್ಯ: ಕ್ಯಾ.ಬ್ರಿಜೇಶ್ ಚೌಟ
ಕುಂದಲ್ಪಾಡಿ ಶಾಲೆಗೆ ಎಸ್ ಡಿಎಂಸಿ ಎಕ್ಸ್ ಪೋಷರ್ ತಂಡ ಭೇಟಿ