ಜೀವನೋಪಾಯದೊಂದಿಗೆ ನಾರಿಯರ ಸ್ವಾವಲಂಬನೆ ಅಭಿಯಾನ

KannadaprabhaNewsNetwork |  
Published : Feb 26, 2026, 03:00 AM IST
ನಿದರ್ಶನ‌. | Kannada Prabha

ಸಾರಾಂಶ

ಗ್ರಾಮೀಣ ಮಹಿಳೆಯ ಜೀವನೋಪಾಯಕ್ಕೆ ಆಶಾಕಿರಣವಾಗುವ ಸಂಕಲ್ಪದೊಂದಿಗೆ ಹುಟ್ಟಿಕೊಂಡ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವು, ಕಡೇಶ್ವಾಲ್ಯದಲ್ಲಿ ತನ್ನ ಕನಸುಗಳನ್ನು‌ ನನಸು ಮಾಡುವ ದಿಟ್ಟ ಹೆಜ್ಜೆಗಳನ್ನಿರಿಸಿದೆ.

ಮೌನೇಶ ವಿಶ್ವಕರ್ಮಕನ್ನಡಪ್ರಭ ವಾರ್ತೆ ಬಂಟ್ವಾಳ

ಇಚ್ಛಾಶಕ್ತಿ, ಕ್ರಿಯಾಶಕ್ತಿ ಇದ್ದಾಗ ಮಾತ್ರ ಯೋಜಿತ ಉದ್ಧೇಶಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂಬುವುದಕ್ಕೆ ಕಡೇಶಿವಾಲಯ ಗ್ರಾಮ ಪಂಚಾಯಿತಿ ಮಟ್ಟದ ಮಾತೃ ಸಂಜೀವಿನಿ ಒಕ್ಕೂಟವೇ ಸ್ಪಷ್ಟ ನಿದರ್ಶನ‌.ಗ್ರಾಮೀಣ ಮಹಿಳೆಯ ಜೀವನೋಪಾಯಕ್ಕೆ ಆಶಾಕಿರಣವಾಗುವ ಸಂಕಲ್ಪದೊಂದಿಗೆ ಹುಟ್ಟಿಕೊಂಡ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವು, ಕಡೇಶ್ವಾಲ್ಯದಲ್ಲಿ ತನ್ನ ಕನಸುಗಳನ್ನು‌ ನನಸು ಮಾಡುವ ದಿಟ್ಟ ಹೆಜ್ಜೆಗಳನ್ನಿರಿಸಿದೆ.

ಗ್ರಾಮಪಂಚಾಯಿತಿಯಿಂದ ಒದಗಿಸಲಾಗಿರುವ ಕಟ್ಟಡದಲ್ಲಿ ಒಕ್ಕೂಟದ ಸದಸ್ಯರ ಮೂಲಕ ಟೈಲರಿಂಗ್ ಆಧಾರಿತ ಸ್ವ ಉದ್ಯೋಗ ಯಶಸ್ವಿಯಾಗಿ ನಡೆಯುತ್ತಿದ್ದು, ಮಹಿಳೆಯರಲ್ಲಿ ಜೀವನೋತ್ಸಾಹ ಹೆಚ್ಚಿಸಿದೆ. ಮಾತೃಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷೆ ಪ್ರೇಮ ಅವರ ಮುಂದಾಳತ್ವ ಹಾಗೂ ಪಂಚಾಯಿತಿ ಅಧ್ಯಕ್ಷೆ ಭಾರತಿ ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಆರಂಭಗೊಂಡ ಟೈಲರಿಂಗ್ ಉದ್ಯಮವು ಪ್ರಸ್ತುತ ಒಕ್ಕೂಟದ ಅಧ್ಯಕ್ಷೆ ಬಬಿತಾ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಒಕ್ಕೂಟದ ಸದಸ್ಯರಾದ ಮೋಹಿನಿ, ರೋಹಿಣಿ, ಶಾರದಾ ಹಾಗೂ ಭಾಮಲತಾ ಅವರು ಈ ಉದ್ದಿಮೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಆರ್ಥಿಕ ಸ್ವಾವಲಂಬನೆಯತ್ತವೂ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.ಮಂಗಳೂರಿನ ವಿನಾಯಕ ಟೈಲರ್ ಹಾಗೂ ಮೂಡುಬಿದಿರೆಯಿಂದ ನೈಟಿ ಮತ್ತು ಯುನಿಫಾರ್ಮ್ ಬಟ್ಟೆಗಳನ್ನು ತರಿಸಿಕೊಂಡು ಹೊಲಿಯುವ ಜೊತೆಗೆ, ಸ್ಥಳೀಯ ಗ್ರಾಹಕರಿಂದ ಬ್ಲೌಸ್, ಸಮವಸ್ತ್ರ, ಕಸೂತಿ ಹಾಗೂ ಚೂಡಿದಾರ್‌ಗಳ ಬೇಡಿಕೆಯನ್ನು ಸ್ವೀಕರಿಸಿ ಗುಣಮಟ್ಟದ ಸೇವೆ ಒದಗಿಸಲಾಗುತ್ತಿದೆ. ಇದರ ಫಲವಾಗಿ ಒಕ್ಕೂಟದ ಸದಸ್ಯರು ಪ್ರತಿದಿನ ಸರಾಸರಿ 2000 ರು. ರಿಂದ 2500 ರು. ರವರೆಗೆ ಆದಾಯ ಗಳಿಸುತ್ತಿದ್ದಾರೆ.ಮುಂದಿನ ದಿನಗಳಲ್ಲಿ ಬಟ್ಟೆ ಚೀಲಗಳನ್ನು ಹೊಲಿದು ಗ್ರಾಮದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ಹೊಸ ಯೋಜನೆಯನ್ನು ರೂಪಿಸಲಾಗಿದ್ದು, ಪರಿಸರ ಸಂರಕ್ಷಣೆಯ ಜೊತೆಗೆ ಮಹಿಳಾ ಸ್ವ ಉದ್ಯೋಗಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ. ಈ ಯಶಸ್ವಿ ಪ್ರಯತ್ನವು ಇತರ ಒಕ್ಕೂಟಗಳಿಗೆ ಮಾದರಿಯಾಗಿದೆ ಎನ್ನುತ್ತಾರೆ ಸಂಜೀವಿನಿ ಅಭಿಯಾನದ ತಾಲೂಕು ವ್ಯವಸ್ಥಾಪಕರಾದ ಸುಧಾ.ಸಂಘಟಿತ ಮತ್ತು ಸಮಯೋಚಿತ ಚಟುವಟಿಕೆಗಳು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಕಡೇಶ್ವಾಲ್ಯದ ಮಾತೃಸಂಜೀವಿನಿ‌ ಒಕ್ಕೂಟ ಎನ್ನುವುದು ದಿಟ.

ಮಾತೃ ಸಂಜೀವಿನಿ ಒಕ್ಕೂಟದ ಪ್ರತೀ ಚಟುವಟಿಕೆಗೆ ಕಡೇಶ್ವಾಲ್ಯ ಗ್ರಾ.ಪಂ.ಪೂರ್ಣ ಬೆಂಬಲ‌ ನೀಡುತ್ತಿದೆ. ತಾಲೂಕು ವ್ಯವಸ್ಥಾಪಕಿ ಸುಧಾ, ಪ್ರದೀಪ್‌ ಕಾಮತ್, ವಲಯ ಮೇಲ್ವಿಚಾರಕಿ ಕುಸುಮ ರವರು ನಿರಂತರ ಪ್ರೇರಣೆ‌ ನೀಡುತ್ತಿದ್ದಾರೆ.ಮಮತ, ಎಂಬಿಕೆ, ಮಾತೃ ಸಂಜೀವಿನಿ ಒಕ್ಕೂಟ, ಕಡೇಶ್ವಾಲ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಪ್ರದೇಶದ ಅಭಿವೃದ್ಧಿ ಅವಶ್ಯ: ಕ್ಯಾ.ಬ್ರಿಜೇಶ್ ಚೌಟ
ಕುಂದಲ್ಪಾಡಿ ಶಾಲೆಗೆ ಎಸ್ ಡಿಎಂಸಿ ಎಕ್ಸ್ ಪೋಷರ್ ತಂಡ ಭೇಟಿ