ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪೊಲೀಸರು ಶುಕ್ರವಾರ ಬೈಕ್ ರ್‍ಯಾಲಿ ನಡೆಸಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.ಕಾನೂನು ಶಿಸ್ತು ವಿಭಾಗದ ಪಿಎಸ್ಐ ಮಂಜುನಾಥ್, ಸಂಚಾರಿ ಠಾಣೆ ಪಿಎಸ್ಐ ಜೆ.ಇ.ಮಹೇಶ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಸಿ ಸಾರ್ವಜನಿಕರು ದ್ವಿಚಕ್ರ ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಅರಿವು ಮೂಡಿಸಿದರು.
ದ್ವಿಚಕ್ರ ವಾಹನ ಸವಾರರು ತಮ್ಮ ಸುರಕ್ಷತೆ ದೃಷ್ಟಿಯಿಂದ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಒಂಬತ್ತು ತಿಂಗಳಿಗೂ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಧರಿಸಿ ಸುರಕ್ಷತೆಯಿಂದ ವಾಹನಗಳನ್ನು ಚಾಲನೆ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಚಾಲನ ಪರವಾಗಿ ಹೊಂದಿಲ್ಲದ ಬಾಲಕರು ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುತ್ತಿರುವುದು ಪೋಲಿಸ್ ಇಲಾಖೆಯ ಗಮನಕ್ಕೆ ಬಂದಿದೆ. ಇಂತಹ ಬಾಲಕರ ಪೋಷಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಕೆ ನೀಡಲಾಯಿತು.
ಮದ್ದೂರು ಪಟ್ಟಣ ಸೇರಿದಂತೆ ಹೆದ್ದಾರಿಗಳಲ್ಲಿ ಪಾನ ಮತರಾಗಿ ವಾಹನಗಳ ಚಾಲನೆ ಮಾಡುತ್ತಿರುವ ಚಾಲಕರ ವಿರುದ್ಧ ಈಗಾಗಲೇ ಇಲಾಖೆ ಕ್ರಮ ಕೈಗೊಂಡು ನ್ಯಾಯಾಲಯದ ಮೂಲಕ ದಂಡ ವಿಧಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಹೀಗಾಗಿ ಹೆಲ್ಮೆಟ್ ರಹಿತ ಮತ್ತು ಪಾನಮತ್ತ ರಾಗಿ ವಾಹನಗಳ ಚಾಲನೆ ಮಾಡುವ ಚಾಲಕರುಗಳು ಎಚ್ಚರಿಕೆ ವಹಿಸಬೇಕು ಎಂದು ಪಿ ಎಸ್ ಐ ಗಳಾದ ಮಂಜುನಾಥ್ ಹಾಗೂ ಮಹೇಶ್ ಮನವಿ ಮಾಡಿದರು.ಈ ವೇಳೆ ಅಪರಾಧ ವಿಭಾಗದ ಪಿಎಸ್ಐ ಜಮೀರ್ ಹಾಗೂ ಪೊಲೀಸ್ ಸಿಬ್ಬಂದಿ ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಹೆಲ್ಮೆಟ್ ಧರಿಸದೆ ಅಪಾಯಕಾರಿ ಬೈಕ್ ಚಾಲನೆಯುವಕನಿಗೆ 4,500 ರು. ದಂಡ, ಬಂಧನದ ಶಿಕ್ಷೆಕನ್ನಡಪ್ರಭ ವಾರ್ತೆ ಮದ್ದೂರುಹೆಲ್ಮೆಟ್ ಧರಿಸದೆ ಅಪಾಯಕಾರಿ ರೀತಿಯಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ಯುವಕನಿಗೆ ದಂಡ ವಿಧಿಸಲು ಮುಂದಾದ ಸಂಚಾರಿ ಠಾಣೆ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಬೈಕ್ ಚಾಲಕನಿಗೆ 4,500 ರು. ದಂಡದ ಜೊತೆಗೆ ಠಾಣೆ ಬಂಧನದ ಶಿಕ್ಷೆ ವಿಧಿಸಿದ ಘಟನೆ ಬುಧವಾರ ರಾತ್ರಿ ಜರುಗಿದೆ.
ತಾಲೂಕಿನ ಗೆಜ್ಜಲಗೆರೆ ಗ್ರಾಮದ ಗುರುರಾಜ ದಂಡದ ಶಿಕ್ಷೆಗೆ ಗುರಿಯಾದ ಬೈಕ್ ಚಾಲಕ. ಮದ್ದೂರು ಪಟ್ಟಣದಲ್ಲಿ ಇತ್ತೀಚೆಗೆ ಬೈಕ್‌ಗಳಲ್ಲಿ ಬಂದು ವಾಯು ವಿಹಾರ ಮತ್ತು ಮನೆಗಳ ಆಸುಪಾಸುಗಳಲ್ಲಿ ಓಡಾಡುವ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಜಿಲ್ಲಾ ಎಸ್ಪಿ ಎನ್.ಯತೀಶ್ ಸೂಚನೆ ಮೇರೆಗೆ ಬೆಂಗಳೂರು ಮೈಸೂರು-ಹೆದ್ದಾರಿ, ಮಳವಳ್ಳಿ ರಸ್ತೆ ಹಾಗೂ ಬಡಾವಣೆಗಳ ನಿರ್ಜನ ಪ್ರದೇಶಗಳಲ್ಲಿ ಗಸ್ತುಕಾರ್ಯ ಕೈಗೊಂಡಿದ್ದರು.ಈ ವೇಳೆ ಬೆಂಗಳೂರು- ಮೈಸೂರು ಹೆದ್ದಾರಿಯ ಐಶ್ವರ್ಯ ಕಾನ್ವೆಂಟ್ ಬಳಿ ಹೆಲ್ಮೆಟ್ ಧರಿಸದೆ ಬೈಕ್ ಅನ್ನು ಅಡ್ಡಾದಿಡಿಯಾಗಿ ಚಾಲನೆ ಮಾಡಿಕೊಂಡು ಬಂದ ಗುರುರಾಜನನ್ನು ಸಂಚಾರಿ ಪೊಲೀಸರು ಹಿಡಿದು ದಂಡ ಪಾವತಿಸುವಂತೆ ತಾಕಿತ್ತು ಮಾಡಿದ್ದಾರೆ. ದಂಡ ಪಾವತಿಸಲು ತಕರಾರು ಮಾಡಿದ ಬೈಕ್ ಚಾಲಕ ಗುರುರಾಜು ಸಂಚಾರಿ ಠಾಣೆ ಎಎಸ್ಐ ಕೃಷ್ಣಪ್ಪ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ವಿಷಯ ತಿಳಿದ ಸ್ಥಳಕ್ಕೆ ಧಾವಿಸಿದ ಸಿಪಿಐ ಕೆ.ಆರ್. ಪ್ರಸಾದ್, ಸಂಚಾರಿ ಠಾಣೆ ಪಿಎಸ್ಐ ಜೆ.ಇ.ಮಹೇಶ್ ಹಾಗೂ ಸಿಬ್ಬಂದಿ ಬೈಕ್ ಚಾಲಕ ಗುರುರಾಜನನ್ನು ಠಾಣೆಗೆ ಕರೆತಂದು ಕೆಲ ಗಂಟೆಗಳ ಕಾಲ ಠಾಣೆಯಲ್ಲಿ ಕಾಯುವ ಶಿಕ್ಷೆ ವಿಧಿಸಿದ ನಂತರ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ, ಹೆಲ್ಮೆಟ್ ರಹಿತ, ಅಪಾಯಕಾರಿ ರೀತಿಯಲ್ಲಿ ಬೈಕ್ ಚಾಲನೆ ಅಡ್ಡಾದಿಡಿಯಾಗಿ ಬೈಕ್ ಚಾಲನೆ ಹಾಗೂ ಸೂಕ್ತ ದಾಖಲಾತಿ ಇಲ್ಲದ ಕಾರಣಕ್ಕೆ ಸಂಚಾರಿ ಠಾಣೆ ಪೊಲೀಸರು ಒಟ್ಟು 4500 ರು. ದಂಡದೊಂದಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.