ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಶ್ರೀಅರ್ಕೇಶ್ವರ ಸ್ವಾಮಿ ದೇವಸ್ಥಾನದಿಂದ ಬೈಕ್ ರ್‍ಯಾಲಿ ಆರಂಭಗೊಂಡಿತು. ಜೈಶ್ರೀರಾಮ್, ಲೋಕಮಾತೆ ಸೀತಾಮಾತೆಗೆ ಜೈ, ಜೈ ಭಜರಂಗಬಲಿ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ರ್‍ಯಾಲಿಯು ಗುತ್ತಲು ರಸ್ತೆ, ಸಕ್ಕರೆ ಕಂಪನಿ ವೃತ್ತ, ಚೀರನಹಳ್ಳಿ ರಸ್ತೆ ಮೂಲಕ ಲೇಬರ್ ಕಾಲೋನಿ ಮುಖ್ಯರಸ್ತೆ, ಹಾಲಹಳ್ಳಿ ಮುಖಾಂತರ ಹರಿಶ್ಚಂದ್ರ ಸರ್ಕಲ್ ಹತ್ತಿರ ಬಂದು, ಆಸ್ಪತ್ರೆ ರಸ್ತೆ ಮುಖಾಂತರ ಶ್ರೀಕಾಳಿಕಾಂಬ ದೇವಸ್ಥಾನದ ಮೂಲಕ ಸಾಗಿಬಂದಿತು.
ನಂತರ ಹೊಳಲು ಸರ್ಕಲ್ ಶಂಕರಮಠದ ಮುಖಾಂತರ ಕಲ್ಲಹಳ್ಳಿ, ವಿವಿ ನಗರ, ಮರೀಗೌಡ ಬಡಾವಣೆ, ಕಾಳೇಗೌಡ ಹೈಸ್ಕೂಲ್ ಹತ್ತಿರ ಬಂದು ಎಡಕ್ಕೆ ತಿರುಗಿ ಬನ್ನೂರು ರಸ್ತೆ ಮೂಲಕ ವಿನೋಬ ರಸ್ತೆಗೆ ಆಗಮಿಸಿತು. ಬಳಿಕ ಜಯಚಾಮರಾಜೇಂದ್ರ ವೃತ್ತದಿಂದ ಆರ್.ಪಿ.ರಸ್ತೆ ಮಾರ್ಗವಾಗಿ ನೂರಡಿ ರಸ್ತೆ, ಹೊಸಹಳ್ಳಿ ರಸ್ತೆ - ವಿವಿ ರಸ್ತೆ ಮೂಲಕ ಮಹಾವೀರ ಸರ್ಕಲ್, ವಿವೇಕಾನಂದ ಡಬಲ್ ರೋಡ್ ರಸ್ತೆಯಲ್ಲಿ ಸಾಗುತ್ತಾ ಬೆಸಗರಹಳ್ಳಿ ರಾಮಣ್ಣ ರಸ್ತೆಯಲ್ಲಿ ಮೆರವಣಿಗೆ ಅಂತ್ಯಗೊಂಡಿತು.ರ್‍ಯಾಲಿಯಲ್ಲಿ ಸಿ.ಟಿ.ಮಂಜುನಾಥ್, ರಮೇಶ್, ಚಿಕ್ಕಬಳ್ಳಿ ಬಾಲು, ಪ್ರಶಾಂತ್, ಚಂದ್ರು, ಯೋಗೇಶ್, ವಿರೂಪಾಕ್ಷ, ಸುರೇಶ್, ಧನಂಜಯ, ಆಚಾರ್ ವಿಶ್ವಕರ್ಮ, ಮಂಜುನಾಥ್ದ್ ಇತರರಿದ್ದರು.
ಚನ್ನಕೇಶವ ಮೂರ್ತಿಗೆ ವಿಶೇಷ ಪೂಜೆ
ಮಂದಗೆರೆಯ ಚನ್ನಕೇಶವ ದೇಗುಲದಲ್ಲಿ ಚನ್ನಕೇಶವ ಮೂರ್ತಿಗೆ ಭಕ್ತ ಸಮೂಹದಿಂದ ವಿಶೇಷ ಪೂಜೆ, ಅಲಂಕಾರ ಸೇವೆ ಜರುಗಿತು.
ದೇವರಿಗೆ ವಿವಿಧ ಶೋಡಷೋಪಚಾರ ಪೂಜಾ ವಿಧಿವಿಧಾನ ಸೇವೆ, ವಿವಿಧ ಪರಿಮಳ ಪುಷ್ಪಅಲಂಕಾರ, ಪುಷ್ಪಾರ್ಚನೆ, ವಸ್ತ್ರ, ಆಭರಣ ಅಲಂಕಾರ ಮಾಡಲಾಯಿತು. ಅಷ್ಟೋತ್ತರ ಪಠಣೆ, ಕುಂಕುಮಾರ್ಚನೆ ನೆರವೇರಿತು. ಮಹಾಮಂಗಳಾರತಿ ತೀರ್ಥ ಪ್ರಸಾದ, ಅನ್ನಪ್ರಸಾದ ವಿನಿಯೋಗ ಮಾಡಲಾಯಿತು. ಹಿರಿಯ ಅರ್ಚಕ ಶಿವಪ್ರಸಾದ್ ಅನ್ನಪೂರ್ಣ ದಂಪತಿಗೆ ಗೌರವಿಸಲಾಯಿತು.