ಪುರಸಭೆ ಖೊಟ್ಟಿ ಇ-ಸ್ವತ್ತು ಉತಾರ ರದ್ದತಿಗೆ ಆಗ್ರಹಿಸಿ ಬೈಕ್ ರ‍್ಯಾಲಿ

KannadaprabhaNewsNetwork |  
Published : Aug 18, 2024, 01:48 AM IST
ಫೋಟೋ : ೧೭ಎಚ್‌ಎನ್‌ಎಲ್೧ | Kannada Prabha

ಸಾರಾಂಶ

ಹಾನಗಲ್ಲ ಪುರಸಭೆ ಕೊಟ್ಟಿ ಇ-ಸ್ವತ್ತು ಉತಾರ ರದ್ದತಿಗೆ ಆಗ್ರಹಿಸಿ ಪಟ್ಟಣದ ಗ್ರಾಮದೇವಿ ಸದ್ಭಕ್ತರ ಸಮಿತಿ ಹಾನಗಲ್ಲಿನ ಗ್ರಾಮದೇವಿ ಪಾದಗಟ್ಟಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೈಕ್ ರ್ಯಾ್ಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಡೆದರು.

ಹಾನಗಲ್ಲ: ಹಾನಗಲ್ಲ ಪುರಸಭೆ ಕೊಟ್ಟಿ ಇ-ಸ್ವತ್ತು ಉತಾರ ರದ್ದತಿಗೆ ಆಗ್ರಹಿಸಿ ಪಟ್ಟಣದ ಗ್ರಾಮದೇವಿ ಸದ್ಭಕ್ತರ ಸಮಿತಿ ಹಾನಗಲ್ಲಿನ ಗ್ರಾಮದೇವಿ ಪಾದಗಟ್ಟಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೈಕ್ ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಡೆದರು.ಶನಿವಾರ ಬೈಕ್‌ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹಾನಗಲ್ಲ ಗ್ರಾಮದೇವಿ ಪಾದಗಟ್ಟಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಅಕ್ಕಿಅಲೂರು, ಬಾಳಂಬೀಡ, ಆಡೂರು ಮಾರ್ಗವಾಗಿ ಹಾವೇರಿಗೆ ನಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಪ್ರಶಾಂತ ಮುಚ್ಚಂಡಿ, ಖೊಟ್ಟಿ ಉತಾರ ಹಾಗೂ ಈ ಸ್ವತ್ತು ಮಾಡಿ ಕೊಟ್ಟ ಹಾನಗಲ್ಲ ಪುರಸಭೆ ಸರಕಾರಿ ಆಸ್ತಿಯನ್ನು ಪರರ ಪಾಲು ಮಾಡಿದೆ. ಇದೇ ಜಾಗದಲ್ಲಿ ಕಾನೂನು ಬಾಹೀರ ಕಟ್ಟಡ ಪರವಾನಗಿ ನೀಡುತ್ತಿದೆ. ಆಕ್ರಮ ಕಟ್ಟಡಕ್ಕೆ ಅವಕಾಶ ನೀಡುತ್ತಿದೆ. ಸರಕಾರಿ ಆಸ್ತಿಯನ್ನು ರಕ್ಷಿಸುವ ಬದಲು ಹಾನಗಲ್ಲ ಪುರಸಭೆ ಆಸ್ತಿಯನ್ನು ಪರರ ಪಾಲು ಮಾಡುತ್ತಿದೆ. ಈ ಬಗ್ಗೆ ಹಲವು ಹೋರಾಟಗಳು ನಡೆದರೂ ಲಕ್ಷ್ಯವಹಿಸದ ಪುರಸಭೆ ಮುಖ್ಯಾಧಿಕಾರಿ ನಡೆ ವಿರೋಧಿಸಿ ಹಾಗೂ ಕೂಡಲೇ ಈಗಾಗಲೇ ನೀಡಿರುವ ಖೊಟ್ಟಿ ದಾಖಲೆಗಳನ್ನು ರದ್ದುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.ಖೊಟ್ಟಿ ದಾಖಲೆ ನೀಡಿದ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸಲಾಗದ ಜಿಲ್ಲಾಧಿಕಾರಿಗಳು ಹಾಗೂ ಮೇಲಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ನೀಡಿದ ಹತ್ತು ದಿನಗಳ ಗಡುವು ಈಗ ಮುಗಿದಿದೆ. ಮತ್ತೆ ಇದನ್ನೇ ಎಚ್ಚರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಅಲ್ಲದೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸದಿದ್ದರೆ ಕಾನೂನು ಹೋರಾಟಕ್ಕೆ ನಾವು ಬದ್ಧ ಎಂದು ಪ್ರಶಾಂತ ಮುಚ್ಚಂಡಿ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜಶೇಖರ ಕಟ್ಟೇಗೌಡರ, ನಿಂಗಪ್ಪ ಗೊಬ್ಬೇರ, ಕಲ್ಯಾಣಕುಮಾರ ಶೆಟ್ಟರ, ಗಣೇಶ ಮೂಡ್ಲೀಯವರ, ರವಿ ಪುರೋಹಿತ, ಬಸವರಾಜ ಮಟ್ಟಿಮನಿ, ಸಂಜಯ ಬೇದ್ರೆ, ಬಸವರಾಜ ಹಾದಿಮನಿ, ಪ್ರವೀಣ ಸುಲಾಖೆ, ಈಶ್ವರ ನಿಂಗೋಜಿ, ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!