ಮಹಿಷ ದಸರಾಗೆ ಮಂಡ್ಯದಿಂದ ಬೈಕ್‌ ರ್‍ಯಾಲಿ

KannadaprabhaNewsNetwork | Published : Oct 12, 2023 12:01 AM

ಸಾರಾಂಶ

ಮೈಸೂರಿನಲ್ಲಿ ಅ.೧೩ರಂದು ನಡೆಸಲಿರುವ ಮಹಿಷ ದಸರಾದಂದು ಬೆಳಗ್ಗೆಯೇ ಮಂಡ್ಯದಿಂದ ಮೈಸೂರಿಗೆ ಬೈಕ್ ರ್‍ಯಾಲಿ ತೆರಳಲಿದ್ದೇವೆ ಎಂದು ಸಮಾನ ಮನಸ್ಕರ ವೇದಿಕೆ ಸಂಚಾಲಕರಾದ ಡಿ.ಟಿ.ನಾಗರಾಜು, ಲಕ್ಷ್ಮಣ್ ಚೀರನಹಳ್ಳಿ ತಿಳಿಸಿದರು.
ಮಂಡ್ಯ: ಮೈಸೂರಿನಲ್ಲಿ ಅ.೧೩ರಂದು ನಡೆಸಲಿರುವ ಮಹಿಷ ದಸರಾದಂದು ಬೆಳಗ್ಗೆಯೇ ಮಂಡ್ಯದಿಂದ ಮೈಸೂರಿಗೆ ಬೈಕ್ ರ್‍ಯಾಲಿ ತೆರಳಲಿದ್ದೇವೆ ಎಂದು ಸಮಾನ ಮನಸ್ಕರ ವೇದಿಕೆ ಸಂಚಾಲಕರಾದ ಡಿ.ಟಿ.ನಾಗರಾಜು, ಲಕ್ಷ್ಮಣ್ ಚೀರನಹಳ್ಳಿ ತಿಳಿಸಿದರು. ಈ ನಾಡು ಮಹಿಷನಿಗೆ ಸೇರಿದ್ದು ಎಂಬುದಕ್ಕೆ ಚಾರಿತ್ರಿಕ ಹಿನ್ನಲೆಯ ದಾಖಲೆಗಳಿವೆ. ದ್ರಾವಿಡ ನಾಡಿನಲ್ಲಿ ಮಹಿಷನ ಉತ್ಸವಗಳು ಹಿಂದೆಯೂ ನಡೆಯುತ್ತಿದ್ದವು. ಮೈಸೂರಿನಲ್ಲಿ ಅ.೧೩ರಂದು ಮಹಿಷ ದಸರಾ ನಡೆದೇ ನಡೆಯುತ್ತದೆ. ಇದಕ್ಕಾಗಿ ಅಂದು ಬೆಳಗ್ಗೆ ೭ಕ್ಕೆ ನಗರದ ಡಿಸಿ ಕಚೇರಿ ಎದುರಿನ ಭವನದಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆಗೆ ಗೌರವ ಸಮರ್ಪಣೆ ಮಾಡಿ, ಮೈಸೂರಿಗೆ ತೆರಳುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮಹಿಷ ದಸರಾ ಆಚರಣೆಯನ್ನು ಪೊಲೀಸ್ ಇಲಾಖೆ ನಿರ್ಬಂಧಿಸಿರುವುದು ತಪ್ಪು. ಹಾಗೆಯೇ ಸಂಸದ ಪ್ರತಾಪ್‌ಸಿಂಹ ಅವರು ರೌಡಿಯಂತೆ ಹೇಳಿಕೆ ನೀಡಿದ್ದಾರೆ. ಮಹಿಷ ದಸರಾವನ್ನು ವಿರೋಧಿಸುತ್ತಿರುವುದು ಅವರೊಬ್ಬರೇ. ಹೀಗಾಗಿ ಸರ್ಕಾರ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ವೇದಿಕೆಯ ಸದಸ್ಯರಾದ ಎಂ.ವಿ.ಕೃಷ್ಣ, ನರಸಿಂಹಮೂರ್ತಿ, ದೇವರಾಜ್‌ಕೊಪ್ಪ, ಶಂಕರ್‌ಗುರು, ಮಹಮ್ಮದ್ ತಾಹೇರ್ ಗೋಷ್ಠಿಯಲ್ಲಿದ್ದರು.

Share this article