ಕರ್ಕಶ ಶಬ್ದದ ಬೈಕ್‌ ಸೆಲೆನ್ಸರ್‌: 31 ಪ್ರಕರಣ ದಾಖಲು

KannadaprabhaNewsNetwork |  
Published : Oct 13, 2026, 02:15 AM IST
ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು. | Kannada Prabha

ಸಾರಾಂಶ

ನಗರ ವ್ಯಾಪ್ತಿಯಲ್ಲಿ ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಅತಿಯಾದ ಶಬ್ದ ಹೊರಸೂಸುತ್ತಿದ್ದ ಮಾರ್ಪಡಿಸಿದ ಸೈಲೆನ್ಸರ್ ಅಳವಡಿಸಿದ 4 ಬೈಕ್‌ಗಳನ್ನು ವಶಕ್ಕೆ ಪಡೆದು, ಅವುಗಳ ಸೈಲೆನ್ಸರ್‌ಗಳನ್ನು ತೆರವುಗೊಳಿಸಲಾಗಿದೆ.

ಕಾರವಾರ: ಬೈಕ್ ಓಡಿಸುವುದಕ್ಕಿಂತ ಕರ್ಕಶ ಶಬ್ದ ಮಾಡಿಕೊಂಡು ಬೈಕ್ ಚಲಾಯಿಸುವ ಕ್ರೇಜ್ ರೂಢಿಸಿಕೊಂಡಿದ್ದ ಕೆಲ ಯುವಕರಿಗೆ ಕಾರವಾರ ಸಂಚಾರಿ ಪೊಲೀಸರು ಕಾನೂನು ಕ್ರಮದ ಮೂಲಕ ನಿಯಂತ್ರಣ ಹೇರಿದ್ದಾರೆ. ಅತಿಯಾದ ಶಬ್ದ ಹೊರಸೂಸುವ ದೋಷಪೂರಿತ ಹಾಗೂ ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಸಂಚರಿಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಒಟ್ಟು 31 ಪ್ರಕರಣಗಳನ್ನು ದಾಖಲಿಸಿದ್ದಾರೆ.ನಗರ ವ್ಯಾಪ್ತಿಯಲ್ಲಿ ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಅತಿಯಾದ ಶಬ್ದ ಹೊರಸೂಸುತ್ತಿದ್ದ ಮಾರ್ಪಡಿಸಿದ ಸೈಲೆನ್ಸರ್ ಅಳವಡಿಸಿದ 4 ಬೈಕ್‌ಗಳನ್ನು ವಶಕ್ಕೆ ಪಡೆದು, ಅವುಗಳ ಸೈಲೆನ್ಸರ್‌ಗಳನ್ನು ತೆರವುಗೊಳಿಸಲಾಗಿದೆ. ಯುವಕರಿಗೆ ಬೈಕ್‌ನ ಶಬ್ದವೇ ಸ್ಟೈಲ್ ಆಗಿರಬಹುದು, ಆದರೆ ಸಾರ್ವಜನಿಕರಿಗೆ ಅದೇ ಕಿರಿಕಿರಿ ಎಂಬುದನ್ನು ಪೊಲೀಸರ ಈ ಕ್ರಮ ಮತ್ತೊಮ್ಮೆ ತೋರಿಸಿಕೊಟ್ಟಿದೆ.ದೋಷಪೂರಿತ ಸೈಲೆನ್ಸರ್‌ಗಳ ಬಳಕೆಗೆ ಸಂಬಂಧಿಸಿದಂತೆ 7 ಪ್ರಕರಣಗಳು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಒಟ್ಟು 31 ವಿವಿಧ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾರವಾರ ಸಂಚಾರಿ ಠಾಣೆಯ ಪಿಎಸ್‌ಐಗಳಾದ ಶ್ರೀಕಾಂತ ರಾಥೋಡ್ ಹಾಗೂ ಪರುಷರಾಮ್ ಸೊಲ್ಲಾಪುರಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಡಿ. ಶ್ರೀಶೈಲ್, ಬೆನಕ ನಾಯಕ, ಪ್ರವೀಣ ಪಿ. ಮತ್ತು ನಾಗಪ್ಪ ಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ವಾಹನ ಸವಾರರು ಕಾನೂನುಬಾಹಿರವಾಗಿ ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಅಳವಡಿಸಿಕೊಳ್ಳದೆ, ವಾಹನಗಳ ಮೂಲ ವಿನ್ಯಾಸ ಹಾಗೂ ನಿಗದಿತ ಶಬ್ದಮಟ್ಟದ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುವ ರೀತಿಯಲ್ಲಿ ವಾಹನ ಚಲಾಯಿಸಬಾರದು. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮುಂದಿನ ದಿನಗಳಲ್ಲಿಯೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಂಚೆ ಇಲಾಖೆಯಿಂದ ರಕ್ತದಾನ, ಆಧಾರ ಶಿಬಿರ

ಕುಮಟಾ: ಜನಸೇವೆಯೇ ಜನಾರ್ದನ ಸೇವೆ ಎಂಬ ಆಶಯದೊಂದಿಗೆ ಭಾರತೀಯ ಅಂಚೆ ಇಲಾಖೆಯು ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವುದರ ಜತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿರಂತರವಾಗಿ ನಿರ್ವಹಿಸುತ್ತಿದೆ. ಸಾರ್ವಜನಿಕರು ಇಂತಹ ಜನಸ್ನೇಹಿ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ ತಿಳಿಸಿದರು.ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಕಾರವಾರ ಅಂಚೆ ವಿಭಾಗದ ವತಿಯಿಂದ ಭಾನುವಾರ ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಬೃಹತ್ ಆಧಾರ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಸ್ವತಃ ರಕ್ತದಾನ ಮಾಡುವ ಮೂಲಕ ಜಿಲ್ಲಾ ಅಂಚೆ ಅಧೀಕ್ಷಕ ಹೂವಪ್ಪ ಜಿ. ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಜಿಲ್ಲಾ ಅಂಚೆ ಅಧೀಕ್ಷಕ ಹೂವಪ್ಪ ಜಿ., ಉತ್ತರ ಕನ್ನಡ ರಕ್ತನಿಧಿಯ ವೈದ್ಯಾಧಿಕಾರಿ ಡಾ. ವಿಕ್ರಮ್ ಹೆಗಡೆ ಮಾತನಾಡಿ, ರಕ್ತದಾನವು ಅಮೂಲ್ಯ ಜೀವಗಳನ್ನು ಉಳಿಸುವ ಮಹತ್ವದ ಸಾಮಾಜಿಕ ಸೇವೆಯಾಗಿದ್ದು, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.ಪ್ರಧಾನ ಅಂಚೆ ಕಚೇರಿಯ ಪೋಸ್ಟ್ಮಾಸ್ಟರ್ ಸಾವಿತ್ರಿ ಭಟ್, ವಿಂಗಡಣಾ ಕಚೇರಿಯ ಉಪದಾಖಲೆ ಅಧಿಕಾರಿ ಎಂ.ಟಿ. ಗೊಂಡ, ಇತರ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಗಾರಿಕಾ ವಸಾಹತು ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆ
ಪೌಷ್ಟಿಕ ಆಹಾರವೇ ಮನುಷ್ಯನ ಆರೋಗ್ಯಕ್ಕೆ ಮನೆ ಮದ್ದು; ಲಲಿತಾ