ಕನ್ನಡಪ್ರಭ ವಾರ್ತೆ ಮಸ್ಕಿ
ಪಿಎಸ್ಐ ಮುದ್ದುರಂಗಸ್ವಾಮಿ ನೇತೃತ್ವದಲ್ಲಿ ಹೆದ್ದಾರಿ ಮೇಲೆ ಬಿಡಾರ ಹೂಡಿರುವ ಪೊಲೀಸ ಸಿಬ್ಬಂದಿಗಳು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿಕೊಂಡು ಓಡಾಡು ಸವಾರರನ್ನು ಹಿಡಿದು ದಂಡ ಹಾಕುವುದು ಅಲ್ಲದೇ ಹೆಲ್ಮೆಟ್ ಹಾಕಿಕೊಂಡು ಬೈಕ್ ಓಡಿಸುವಂತೆ ಬುದ್ದಿವಾದ ಹೇಳಿ ಕಳಿಸುತ್ತಿರುವ ದೃಶ್ಯ ಕಂಡು ಬಂದಿದೆ.
ಪ್ರತಿನಿತ್ಯ ನೂರಾರು ಬೈಕ್ ಗಳನ್ನು ಹಿಡಿದು ದಂಡ ಹಾಕುತ್ತಿದ್ದರಿಂದ ಬೈಕ್ ಸವಾರರು ಇದೀಗ ಹೆಲ್ಮೆಟ್ ಖರೀದಿಗೆ ಮುಂದಾಗಿದ್ದಾರೆ. ಹೆಲ್ಮೆಟ್ ಕಡ್ಡಾಯವಾದ ಹಿನ್ನೆಲೆಯಲ್ಲಿ ಪಟ್ಟಣದ ಕನಕವೃತ್ತ ಸೇರಿದಂತೆ ವಿವಿಧೆಡೆ ಬೀದಿಗಳಲ್ಲಿ ಹೆಲ್ಮೆಟ್ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಪೊಲೀಸರ ದಂಡದ ಬಿಸಿಯಿಂದ ಪಾರಾಗಲು ಬೈಕ್ ಸವಾರರು ಕನಕವೃತ್ತದ ಮುಂಭಾಗ ಬೀದಿಯಲ್ಲಿ ಹೆಲ್ಮೆಟ್ ಮಾರಾಟ ಮಾಡುತ್ತಿರುವ ಬೀದಿ ವ್ಯಾಪಾರಿ ಅಂಗಡಿ ಮುಂದೆ ಮುಗಿ ಬಿದ್ದಿದ್ದಾರೆ.₹500 ರಿಂದ ₹800 ರವರೆಗೆ ಹೆಲ್ಮೆಟ್ ಮಾರಾಟವಾಗುತ್ತಿದ್ದು ಬೈಕ್ ಸವಾರರು ಎಷ್ಟಾದರೂ ಸರಿ ಖರೀದಿ ಪೊಲೀಸರು ಹಾಕುವ ದಂಡದಿಂದ ಪಾರಾಗಲು ಮುಂದಾಗಿದ್ದಾರೆ.