ಕನ್ನಡಪ್ರಭ ವಾರ್ತೆ ಮೈಸೂರು
ಬಿಳಿಕೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಸಾಂಸ್ಕೃತಿಕ ಸಮಿತಿ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಠರಾಗುವ ಮೂಲಕ ಶಿಸ್ತಿನ ಜೀವನ ಶೈಲಿಯನ್ನು ತಮ್ಮದಾಗಿಸಿಕೊಳ್ಳಬೇಕು. ಯುವಜನತೆ ಸಮಾಜಮುಖಿಯಾಗಲು ಪಠ್ಯ ಮತ್ತು ಪಠ್ಯೇತರ ವಿಷಯಗಳು ಹೇಗೆ ಸಹಾಯಕವಾಗುತ್ತವೆ ಎಂದು ಅವರು ತಿಳಿಸಿದರು.ವಿದ್ಯುನ್ಮಾನ ಉಪಕರಣಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಹೇಗೆ ತಲುಪಬಹುದೆಂದು ಹಲವು ಉದಾಹರಣೆ ನೀಡಿದರು.
2023-24ನೇ ಸಾಲಿನ ಕಾಲೇಜಿನ ವಾರ್ಷಿಕ ಸಂಚಿಕೆ ಅಕ್ಷರಾಮೃತವನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕಾಲೇಜಿನ ಪ್ರಾಂಶುಪಾಲ ಎಂ.ಕೆ. ರಮೇಶ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಘಟಕಗಳ ಸಂಚಾಲಕಿ ಎಸ್.ವಿ. ಆಶಾರಾಣಿ, ಎಲ್. ಲೋಹಿತ್, ದೀಪಿಕಾ, ಡಾ.ಬಿ.ಎಸ್. ಯೋಗೇಶ ಮತ್ತು ಕಚೇರಿ ಅಧೀಕ್ಷಕ ಧರ್ಮಕುಮಾರ್ ಇದ್ದರು.