ಕಲಬುರಗಿ: ಹಣ ಡಬಲ್ ಮಾಡುವುದಾಗಿ ಹೇಳಿ ಕೋಟ್ಯಂತರ ರುಪಾಯಿ ವಂಚನೆ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ.
ಉತ್ಕರ್ಷ ವರ್ಧಮಾನೆ ಮತ್ತು ಅವರ ಪತ್ನಿ ಸಾವಿತ್ರಿ ವರ್ಧಮಾನೆ ಅವರು ನಗರದ ಗಾಂಧಿ ನಗರ ಕಮಾನ್ ಎದರುಗಡೆ ಬಿ.ಎಲ್. ಕಾಂಪ್ಲೆಕ್ಸ್‌ನಲ್ಲಿ ಒಂದು ಆಫೀಸ್ ಮಾಡಿಕೊಂಡು ₹1 ಲಕ್ಷ ತುಂಬಿದರೆ ಒಂದು ವರ್ಷದಲ್ಲಿ ₹2 ಲಕ್ಷ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಇದನ್ನು ನಂಬಿ ಮೊದಲು ಒಂದು ಲಕ್ಷ, ನಂತರ ₹2 ಲಕ್ಷ ಸೇರಿ ₹2.5 ಲಕ್ಷ ಹಣ ನೀಡಿದ್ದೇನೆ. ಅದೇ ರೀತಿ ಮಹ್ಮದ್ ಇಬ್ರಾಹಿಮ್, ಗುಂಡಪ್ಪ ವಾರದ, ಚಂದ್ರಕಾಂತ ರಾಠೋಡ್, ಸುನಿತಾ, ಶರಣು ಎಂಬುವವರು ಸೇರಿ ಇತರರು ಸುಮಾರು ₹30 ಕೋಟಿಗೂ ಹೆಚ್ಚು ಹಣವನ್ನು ಉತ್ಕರ್ಷ ವರ್ಧಮಾನೆ ಅವರಿಗೆ ನೀಡಿದ್ದಾರೆ. ಈ ಹಣವನ್ನು ಉತ್ಕರ್ಷ ವರ್ಧಮಾನೆ ಮತ್ತು ಅವರ ಪತ್ನಿ ಸಾವಿತ್ರಿ ವರ್ಧಮಾನೆ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ವರ್ಧಮಾನೆ ಅವರ ಸಂಬಂಧಿಕರಾದ ಸುಧಾ ಠಾಕೂರ ಮತ್ತು ವಿಜಯಸಿಂಗ್ ಹಜಾರೆ (ಸನ್ನಿ) ಅವರು ಭಾಗಿಯಾಗಿದ್ದು, ಅವರ ವಿರುದ್ಧವು ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ರೋಜಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.