ಅಕ್ರಮ ತಡೆಗೆ ಪರಪ್ಪನ ಜೈಲಲ್ಲಿಕೈದಿಗಳಿಗೆ ಬಯೋಮೆಟ್ರಿಕ್ ಜಾರಿ

KannadaprabhaNewsNetwork |  
Published : May 10, 2026, 01:45 AM IST
ಸಿಡಿಎಸ್‌  | Kannada Prabha

ಸಾರಾಂಶ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 2.5 ಕೋಟಿ ರು ವೆಚ್ಚದಲ್ಲಿ ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಜಾರಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 2.5 ಕೋಟಿ ರು ವೆಚ್ಚದಲ್ಲಿ ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಜಾರಿಗೊಳಿಸಿದೆ. ಈಗಾಗಲೇ ಕಾರಾಗೃಹದ ಭದ್ರತೆಗೆ ಕೃತ್ತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳ ಅಳವಡಿಕೆ ಹಾಗೂ ಸಂದರ್ಶಕರಿಗೆ ಡಿಜಿಟಲ್ ಟೋಕನ್ ಬಳಿಕ ಈಗ ಅಕ್ರಮ ಚಟುವಟಿಕೆಗಳ ತಡೆಗೆ ಇಲಾಖೆ ಮತ್ತೊಂದು ಹೆಜ್ಜೆ ಇಟ್ಟಿದೆ. ಕಾರಾಗೃಹದಲ್ಲಿ ಕೈದಿಗಳ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೈಲಿನ ಪ್ರತಿ ಬ್ಯಾರಕ್, ಸಂದರ್ಶಕರ ಕೊಠಡಿ, ಆಸ್ಪತ್ರೆ, ಕ್ಯಾಂಟೀನ್, ಅಡುಗೆ ಕೋಣೆ, ಗ್ರಂಥಾಲಯ, ಮೈದಾನ, ಕರಕುಶಲ ಕೈಗಾರಿಕೆಗಳು ಹಾಗೂ ಬೇಕರಿ ಸೇರಿದಂತೆ ಇತೆರೆ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಆ ಪ್ರದೇಶಳ ಪ್ರವೇಶ ಹಾಗೂ ನಿರ್ಗಮನದ ವೇಳೆ ಸಜಾ ಹಾಗೂ ವಿಚಾರಣಾಧೀನ ಕೈದಿಗಳು ಬಯೋಮೆಟ್ರಿಕ್ ಬಳಸಬೇಕಿದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

10 ದಿನ ಕೈದಿಗಳಿಗೆ ಜೈಲಿನಲ್ಲಿ ಧ್ಯಾನ ಶಿಬಿರ:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ 10 ದಿನಗಳ ವಿಶೇಷ ಧ್ಯಾನ ಶಿಬಿರವನ್ನು ಕಾರಾಗೃಹ ಅಧಿಕಾರಿಗಳು ಆಯೋಜಿಸಿದ್ದಾರೆ. ಶ್ರೀ ಸತ್ಯನಾರಾಯಣ ಗೋಯೆಂಕಾ ಅವರ ವಿಪಶ್ಯನ ಧ್ಯಾನ ಮತ್ತು ಸಂಶೋಧನಾ ಕೇಂದ್ರದ ಸಹಭಾಗಿತ್ವದಲ್ಲಿ ಥ್ಯಾನ ತರಬೇತಿ ಆಯೋಜಿಸಲಾಗಿದ್ದು, ಮೊದಲ ಹಂತದಲ್ಲಿ ಕಾರ್ಯಾಗಾರದಲ್ಲಿ 25 ಕೈದಿಗಳು ಪಾಲ್ಗೊಂಡಿದ್ದಾರೆ. ಸಮಾಜದಲ್ಲಿ ಸಮತಾಭಾವದಿಂದ ಬದುಕುವುದು ಮತ್ತು ಶಾಂತಿ ವಾತಾವರಣ ನಿರ್ಮಿಸುವ ಕುರಿತು ಕೈದಿಗಳಿಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿ.ಬೇಕುಪ್ಪೆ ಡೇರಿಯಲ್ಲಿ ಅವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಹೊಗೇನಕಲ್ನಲ್ಲಿ ಆಡಲು ಹೋದ ಹೊಸಕೋಟೆ ಯುವಕ ನೀರುಪಾಲು