ಮಂಗಳೂರು: ಬರ್ಡ್ ಕೌಂಟ್ ಇಂಡಿಯಾ ಆಯೋಜಿಸಿದ ರಾಜ್ಯವ್ಯಾಪಿ ನಾಗರಿಕ ವಿಜ್ಞಾನ ಉಪಕ್ರಮವಾದ ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ ೨೦೨೬ರ ಭಾಗವಾಗಿ ಮಂಗಳೂರಿನ ಅನೌಪಚಾರಿಕ ಪಕ್ಷಿವೀಕ್ಷಕರ ತಂಡವಾದ ‘ಕುಡ್ಲ ಬರ್ಡರ್ಸ್’ನ 15 ಸದಸ್ಯರು ಭಾನುವಾರ ನಗರದ ಮಂಜಲ್ಪಾದೆ ಮತ್ತು ಬೊಂದೆಲ್‌ನ ಜೌಗು ಪ್ರದೇಶಗಳಲ್ಲಿ ಪಕ್ಷಿವೀಕ್ಷಣೆ ನಡೆಸಿ ೭೩ ಪಕ್ಷಿ ಪ್ರಭೇದ ದಾಖಲಿಸಿದರು.
ನಗರ ಪ್ರದೇಶಗಳಲ್ಲಿರುವ ನೈಸರ್ಗಿಕ ತಾಣಗಳ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದ ಕುಡ್ಲ ಬರ್ಡರ್ಸ್ ತಂಡದ ರೋಹಿತ್ ರಾವ್, ಮಂಜಲ್ಪಾದೆಯಂತಹ ಹಲವು ಸಣ್ಣ ನೈಸರ್ಗಿಕ ತಾಣಗಳು ಮಂಗಳೂರಿನಲ್ಲಿದ್ದು, ಅವು ವೈವಿಧ್ಯಮಯ ಪಕ್ಷಿಗಳು ಮತ್ತು ಇತರ ವನ್ಯಜೀವಿಗಳಿಗೆ ಆಶ್ರಯ ನೀಡುತ್ತಿವೆ ಎಂದರು.
‘ಕುಡ್ಲ ಬರ್ಡರ್ಸ್’ನ ದೀಪಿಕಾ ಪ್ರಸಾದ್, ವಿವೇಕ್ ಎಂ., ರೋಹಿತ್ ರಾವ್ ಪಕ್ಷಿವೀಕ್ಷಣಾ ಕಾರ್ಯಕ್ರಮ ಸಂಯೋಜಿಸಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮಂಜಲ್ಪಾದೆ ಪ್ರದೇಶದ ಪಕ್ಷಿಸಂಕುಲವನ್ನು ಗಮನಿಸುತ್ತಾ ಬಂದಿರುವ ಅನುಭವಿ ಪಕ್ಷಿವೀಕ್ಷಕ ರೋಹಿತ್ ಎಸ್. ರಾವ್ ನಡಿಗೆಯ ನೇತೃತ್ವ ವಹಿಸಿದ್ದರು.