ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕೊಡಗು ಕೇರಳ ಗಡಿಭಾಗ ಚೆಕ್ ಪೋಸ್ಟ್ ಪೆರಂಬಾಡಿಯಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಕೋಳಿ ಸಾಗಾಟಕ್ಕೆ ಚೆಕ್ ಪೋಸ್ಟ್ ನಲ್ಲಿ ನಿಷೇಧ ಮಾಡಲಾಗಿದೆ. ಮಾತ್ರವಲ್ಲದೆ ಕೋಳಿಯ ಯಾವುದೇ ಉತ್ಪನ್ನಗಳ ಸಾಗಾಟಕ್ಕೂ ನಿಷೇಧ ಹೇರಲಾಗಿದೆ.
ಪಶುಸಂಗೋಪನಾ ಇಲಾಖೆ ಪೆರಂಬಾಡಿಯಲ್ಲಿ ಪರಿಶೀಲನಾ ಕೇಂದ್ರ ತೆರೆದಿದೆ. ಬುಧವಾರದಿಂದ ಕೋಳಿ ಸಾಗಣೆ ನಿಷೇಧ ಮಾಡಲಾಗಿದೆ. ಈಗಾಗಲೇ ಕೋಳಿ ಸಾಗಿಸಿದ್ದ ಲಾರಿಗಳನ್ನು ಪಶುಸಂಗೋಪನಾ ಇಲಾಖೆ ವೈದ್ಯರ ತಂಡ ತಡೆದಿದೆ. ವಿರಾಜಪೇಟೆ ತಾಲೂಕು ವೈದ್ಯಾಧಿಕಾರಿ ರಾಕೇಶ್ ನೇತೃತ್ವದ ತಂಡ ಗಡಿಯಲ್ಲಿ ಚೆಕ್ ಪೋಸ್ಟ್ ತಡೆದು ಪರಿಶೀಲನೆ ನಡೆಸಲಾಗಿದೆ. ಇನ್ನು ಮುಂದೆ ಕೋಳಿ ಸಾಗಿಸದಂತೆ ಸೂಚನೆ ನೀಡಲಾಗಿದೆ.ಕರ್ನಾಟಕದ ವಿವಿಧೆಡೆಯಿಂದ ಕೇರಳಕ್ಕೆ ಕೋಳಿ ಸಾಗಿಸಲಾಗುತ್ತಿತ್ತು.