ವಿವೇಕಾನಂದ ಪತ್ರಿಕೋದ್ಯಮ ವಿಭಾಗದಿಂದ ಹಕ್ಕಿಗಳಿಗೆ ನೀರುಣಿಸುವ ಅಭಿಯಾನ

KannadaprabhaNewsNetwork |  
Published : Apr 07, 2024, 01:45 AM IST
೧೧ | Kannada Prabha

ಸಾರಾಂಶ

ಹಕ್ಕಿಗಳ ದಾಹವನ್ನು ನೀಗಿಸುವ ವಿಶೇಷ ಅಭಿಯಾನ ಇದಾಗಿದ್ದು, ಶನಿವಾರ ಈ ಅಭಿಯಾನಕ್ಕೆ ಕಾಲೇಜು ವಠಾರದಲ್ಲಿ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಬೇಸಿಗೆಯ ಧಗೆಗೆ ಬಾಯಾರುವ ಪಕ್ಷಿಗಳ ನೀರಡಿಕೆ ನೀಗಿಸುವ ವಿನೂತನ ಅಭಿಯಾನವನ್ನು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಆರಂಭಿಸಿದೆ. ತೆಂಗಿನಕಾಯಿಯ ಗೆರಟೆಯಲ್ಲಿ ನೀರು ತುಂಬಿಸಿ ಅದನ್ನು ಮರದ ಕೊಂಬೆಗಳಿಗೆ ಕಟ್ಟುವ ಮೂಲಕ ಹಕ್ಕಿಗಳ ದಾಹವನ್ನು ನೀಗಿಸುವ ವಿಶೇಷ ಅಭಿಯಾನ ಇದಾಗಿದ್ದು, ಶನಿವಾರ ಈ ಅಭಿಯಾನಕ್ಕೆ ಕಾಲೇಜು ವಠಾರದಲ್ಲಿ ಚಾಲನೆ ನೀಡಲಾಯಿತು.

ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಬಿಸಿಲ ಝಳ ಇಡೀ ಜೀವಸಂಕುಲವನ್ನೇ ಕಾಡುತ್ತಿದೆ. ಈ ಸಂದರ್ಭದಲ್ಲಿ ಇಂತಹ ಅಭಿಯಾನವನ್ನು ಮಾಡುವ ಅವಶ್ಯಕತೆಯಿದೆ. ಇದು ಒಂದು ದಿನಕ್ಕೆ ಸೀಮಿತವಾಗಿರದೆ, ಪ್ರತೀ ದಿನವೂ ಮುಂದುವರಿಯಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯ್ಕ್, ಪರೀಕ್ಷಾಂಗ ಕುಲಸಚಿವ ಡಾ.ಎಚ್.ಜಿ. ಶ್ರೀಧರ್, ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಸಂಘಗಳ ಬಲವರ್ಧನೆಗೆ ವಿಮೆ ಅನಿವಾರ್ಯ
ಕವಿಚಕ್ರವರ್ತಿ ರನ್ನನ ಇತಿಹಾಸ ಉಳಿಸಿ, ಬೆಳೆಸಬೇಕಿದೆ: ಎ.ಎಂ. ಕಂಬಾರ