ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಗಾಂಧಿ ಸರ್ಕಲ್‌ನಲ್ಲಿರುವ ರಾಯರ ರಂಗಮಂದಿರದಲ್ಲಿ ಮಂತ್ರಾಲಯದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಡಾ.ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಯವರ ಜನ್ಮವರ್ಧಂತಿ ಸಂಭ್ರಮದ ಅಂಗವಾಗಿ ಬೆಳಗಿನ ಜಾವ ೬ಗಂಟೆಯಿಂದ ಪಂಚಾಮೃತ ಅಭಿಷೇಕದೊಂದಿಗೆ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮವು, ರಾತ್ರಿ ೧೦ಗಂಟೆಗೆ ದೀಪೋತ್ಸವದ ಮೂಲಕ ವೈಭವದಿಂದ ಜರುಗಿತು.ರವೀಂದ್ರರವರ ಕೈಚಳಕದಲ್ಲಿ ನಿರ್ಮಾಣಗೊಂಡ ಹೆಬ್ಬಾಗಿಲು ಅಲಂಕಾರ ಸರ್ವ ಭಕ್ತಾದಿಗಳ ಕಣ್ಮನ ಸೆಳೆಯಿತು. ವೆಂಕಟೇಶ್ ಮಾಲೀಕತ್ವದ ಶ್ರೀ ರಾಘವೇಂದ್ರ ಧ್ವನಿವರ್ಧಕ ಹಾಗೂ ವಿದ್ಯುತ್ ದೀಪಾಲಂಕಾರ ಆಕರ್ಷಕವಾಗಿತ್ತು.
ಬೆಳಿಗ್ಗೆ ಮತ್ತು ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊಳೆನರಸೀಪುರದ ನೇಕಾರ ಕುರುಹಿನಶೆಟ್ಟಿ ಮಹಿಳಾ ಭಜನಾ ಮಂಡಳಿ, ಅರಸೀಕೆರೆಯ ಸೀತಾರಾಮ ಮಹಿಳಾ ಭಜನಾ ಮಂಡಳಿ, ಚನ್ನರಾಯಪಟ್ಟಣದ ಓಂಕಾರೇಶ್ವರ ಭಜನಾ ಮಂಡಳಿ, ಬಲಮುರಿ ಗಣಪತಿ ಮಹಿಳಾ ಭಜನಾ ಮಂಡಳಿ ವತಿಯಿಂದ ನಿರಂತರವಾಗಿ ಭಜನಾ ಕಾರ್ಯಕ್ರಮ ಜರುಗಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮಂಜುನಾಥ್ ಮತ್ತು ತಂಡದವರಿಂದ ಮಂಗಳವಾದ್ಯ, ಚನ್ನರಾಯಪಟ್ಟಣದ ಶ್ರೀನಿವಾಸ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ ಮೈಸೂರಿನ ವಿಧೂಷಿ ರಶ್ಮಿ ಮತ್ತು ತಂಡದ ವತಿಯಿಂದ ನಡೆದ ದಾಸವಾಣಿ ಕಾರ್ಯಕ್ರಮ ಮನೋಹರವಾಗಿತ್ತು.ನಂತರ ರಾತ್ರಿ ದೀಪೋತ್ಸವ ಕಾರ್ಯಕ್ರಮಕ್ಕೆ ಭಕ್ತಾದಿಗಳು ಭಾಗವಹಿಸಿದ್ದರು. ಗುರು ರಾಘವೇಂದ್ರ ಸ್ವಾಮಿಗಳ ಹುಟ್ಟುಹಬ್ಬಕ್ಕೆ ಬಂದ ಎಲ್ಲಾ ಭಕ್ತರಿಗೆ ಮಂತ್ರಾಲಯದ ಪರಿಮಳ ಪ್ರಸಾದವನ್ನು ಹಾಗೂ ಸರ್ವ ಭಕ್ತಾದಿಗಳಿಗೆ ಅನ್ನ ಸಮರ್ಪಣೆ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಎಲ್ಲಾ ಕಲಾವಿದರಿಗೆ ರಾಯರ ಆಶೀರ್ವಾದ ಪತ್ರ ನೀಡಿ ಅಭಿನಂದಿಸಲಾಯಿತು.
ಮಾಜಿ ಜಿಪಂ ಉಪಾಧ್ಯಕ್ಷೆ ರಾಜೇಶ್ವರಿ ವಿಜಯಕುಮಾರ್, ಮಾಜಿ ಜಿಪಂ ಸದಸ್ಯರಾದ ಶ್ವೇತ ಆನಂದ್ ಕುಮಾರ್, ತಾಪಂ ಸಿಇಒ ಜಿ. ಆರ್. ಹರೀಶ್, ಪೋಲಿಸ್ ವೃತ್ತ ನಿರೀಕ್ಷಕ ರಘುಪತಿ, ಉದ್ಯಮಿಗಳಾದ ಸುಪ್ರೀತಾ ಶಿವನಂಜೇಗೌಡ, ಅಹಲ್ಯ ಶ್ರೀಕಂಠ ಮೂರ್ತಿ, ಶೋಭಾ ಅಶ್ವಥನಾರಾಯಣಗೌಡ, ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಿ. ಎನ್. ಶಶಿಧರ್, ಭಾಗ್ಯಮ್ಮ ನಾಗರಾಜ್, ಪುರಸಭಾ ಸದಸ್ಯರಾದ ಲಕ್ಷ್ಮೀ, ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಹರೀಶ್, ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ಸುಧೀಂದ್ರ, ಸಮಾಜ ಸೇವಕರಾದ ಲಕ್ಷ್ಮೀ ರಮೇಶ್, ಮಮತಾ ಸಣ್ಣಪ್ಪ, ನಾಗೇಶ್, ನಾಗರತ್ನ ಜಗದೀಶ್, ರಕ್ಷಿತಾ ಜಯಂತ್, ರಾಯರ ರಂಗ ಮಂದಿರದ ಅರ್ಚಕರಾದ ಕೆಂಬಾಳು ಪಣೀಶ್, ಮತಿಘಟ್ಟ ರವಿ, ಸೋಮಶೇಖರ್ ಸೇರಿ ಇತರರು