A peculiar goat kid was born on Wednesday in Udri Vaddigere village, near Udri village in the taluk, surprising the villagers.
ಕನ್ನಡಪ್ರಭ ವಾರ್ತೆ ಸೊರಬ:
ತಾಲೂಕಿನ ಉದ್ರಿ ಗ್ರಾಮ ಸಮೀಪದ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ವಿಚಿತ್ರವಾದ ಆಡಿನ ಮರಿಯೊಂದು ಬುಧವಾರ ಜನಿಸಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಗ್ರಾಮದ ಕಾಳಿಂಗಪ್ಪ ಭಾವಿಕಟ್ಟೇರ್‌ಮನೆ ಹಾಗೂ ಪುಟ್ಟಮ್ಮ ದಂಪತಿ ಕೃಷಿ ಚಟುವಟಿಕೆಯೊಂದಿಗೆ ಕುರಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಆಡೊಂದು ಜನ್ಮ ನೀಡಿದ ಮರಿ ೮ ಕಾಲು, ಮೂರು ಕಿವಿ, ಎರಡು ಬಾಲ ಮತ್ತು ಎರಡು ನಾಲಿಗೆ ಹೊಂದಿತ್ತು. ಆರಂಭದಲ್ಲಿ ಅವಳಿಗಳು ಜನಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಮಧ್ಯಾಹ್ನದ ಸಮಯದಲ್ಲಿ ವಿಚಿತ್ರವಾಗಿ ಜನಿಸಿದ ಆಡಿನ ಮರಿ ಸಂಜೆವರೆಗೂ ಬದುಕುಳಿದಿತ್ತು. ಈ ಆಡಿನ ಮರಿಯನ್ನು ನೋಡಲು ಉದ್ರಿ ವಡ್ಡೆಗೆರೆ ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಲಿನ ಗ್ರಾಮಸ್ಥರು ಸಹ ಆಗಮಿಸಿದ್ದರು.
----
ಫೋಟೊ:೦೬ಕೆಪಿಸೊರಬ-೦೧ : ತಾಲೂಕಿನ ಉದ್ರಿ ವಡ್ಡಿಗೆರೆಯಲ್ಲಿ ಜನಿಸಿದ ವಿಚಿತ್ರ ಕುರಿ ಮರಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.