ಕನ್ನಡಪ್ರಭ ವಾರ್ತೆ ಚಾಮರಾಜನಗರ
ಈ ವೇಳೆ ಬಸವನಪುರ ರಾಜಶೇಖರ ಮಾತನಾಡಿ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರು ದಕ್ಷ, ಪ್ರಾಮಾಣಿಕ ರಾಜಕಾರಣಿಯಾಗಿ ಸುಮಾರು 40ಗಳಿಂದ ಸೇವೆ ಮಾಡಿಕೊಂಡು ಬಂದಿದ್ದಾರೆ ಅವರಿಗೆ ಶ್ರೀಮಹದೇಶ್ವರ, ಶ್ರೀಮಂಟೇಸ್ವಾಮಿ, ಸಿದ್ದಪ್ಪಾಜಿ, ಬಿಳಿಗಿರಂಗಸ್ವಾಮಿ, ಶ್ರೀಚಾಮರಾಜೇಶ್ವರಸ್ವಾಮಿ ಮುಂದಿನ ದಿನಗಳಲ್ಲಿ ಹೆಚ್ಚಿನ ಆಯಸ್ಸು, ಆರೋಗ್ಯ ಹಾಗೂ ಉನ್ನತ ರಾಜಕೀಯ ಸ್ಥಾನಮಾನ ಕರಣಿಸಲಿ ಎಂದು ಆಶಿಸಿದರು.ವೃದ್ದರೊಡನೆ ಕೋಟೆ ಎಂ.ಶಿವಣ್ಣ ಅವರ ಹುಟ್ಟುಹಬ್ಬ ಆಚರಣೆ ಮಾಡುವುದು ಒಂದು ವಿಶೇಷ, ಅರ್ಥ ಪೂರ್ಣ ವಾಗಿದೆ ಎಂದರು. ಈ ವೇಳೆ ಯರಗಂಬಳ್ಳಿ ಪರಶಿವಮೂರ್ತಿ, ಸಂತೇಮರಹಳ್ಳಿ ರಾಜು, ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್, ಕೆಸ್ತೂರುಮರಪ್ಪ, ವೀರಶೈವ ಮುಖಂಡ ರಾಜು, ಟ್ರಸ್ಟ್ ಅಧ್ಯಕ್ಷ ರಮೇಶ್ ಪ್ರಭು ಹಾಜರಿದ್ದರು.