ಬಿರುನಾಣಿ ಮರೆನಾಡ್ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ಒತ್ತೋರ್ಮೆ ಕೂಟ

KannadaprabhaNewsNetwork |  
Published : Sep 11, 2026, 02:45 AM IST
ಚಿತ್ರ : 9ಎಂಡಿಕೆ4 : ಮರೆನಾಡ್ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ಒತ್ತೋರ್ಮೆ ಕೂಟ ನಡೆಯಿತು.  | Kannada Prabha

ಸಾರಾಂಶ

ಬಿರುನಾಣಿಯ ಮರೆನಾಡ್ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ಒತ್ತೋರ್ಮೆ ಕೂಟವನ್ನು ಮತ್ತು ತೆಂಗಿನಕಾಯಿಗೆ ಗುಂಡು ಹೊಡೆಯುವ (ಶೂಟಿಂಗ್) ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಕೋವಿ ಕತ್ತಿಗಳಿಗೆ ಆಯುಧ ಪೂಜೆ ಸಲ್ಲಿಸಲಾಯಿತು.

ಪೊನ್ನಂಪೇಟೆ: ಬಿರುನಾಣಿಯ ಮರೆನಾಡ್ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ಒತ್ತೋರ್ಮೆ ಕೂಟವನ್ನು ಮತ್ತು ತೆಂಗಿನಕಾಯಿಗೆ ಗುಂಡು ಹೊಡೆಯುವ (ಶೂಟಿಂಗ್) ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಕೋವಿ ಕತ್ತಿಗಳಿಗೆ ಆಯುಧ ಪೂಜೆ ಸಲ್ಲಿಸಲಾಯಿತು. ನಂತರ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಉದ್ಘಾಟಿಸಿದ ಮುಖ್ಯ ಅತಿಥಿ, ಅಂತಾರಾಷ್ಟ್ರೀಯ ಮಾಜಿ ಹಾಕಿ ಆಟಗಾರ ಕಾಳಿಮಾಡ ಸಂಜು ಸೋಮಯ್ಯ ಅವರು ಮಾತನಾಡಿ ಗಡಿ ಪ್ರದೇಶವಾದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಜನಾಂಗದವರು ನೆಲೆಸಿರುವ ಈ ಪ್ರದೇಶದಲ್ಲಿ ಬಹಳಷ್ಟು ವರ್ಷಗಳಿಂದ ಕೊಡವ ಸಮಾಜ ನಿರ್ಮಿಸಲು ಪ್ರಯತ್ನ ನಡೆದಿದ್ದು ಕಳೆದ ಹಲವು ವರ್ಷಗಳ ಹಿಂದೆ ಜಾಗವನ್ನು ಪಡೆಯುವ ಮೂಲಕ ಇದೀಗ ಉತ್ತಮ ಮಟ್ಟದ ಕಟ್ಟಡ ನಿರ್ಮಿಸಲು ನಾಡಿನ ಎಲ್ಲರೂ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಅವರು, ಕೊಡಗಿನ ಮತ್ತು ಕೇರಳ ಗಡಿಯಲ್ಲಿರುವ ಬಿರುನಾಣಿಯಲ್ಲಿ ಮುಂದಿನ ಪೀಳಿಗೆಗಳ ದೃಷ್ಟಿಕೋನದಲ್ಲಿ ಉನ್ನತ ಮಟ್ಟದ ಯೋಜನೆಯೊಂದಿಗೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.ಈ ಹಿಂದೆ ಕೊಡವ ಸಮಾಜ ಎಂದರೆ ಕಲ್ಯಾಣ ಮಂಟಪ ಎಂಬ ಭಾವನೆ ಇತ್ತು. ಆದರೆ ಇಂದು ಕೊಡವ ಸಮಾಜವನ್ನು ನೋಡುವ ದೃಷ್ಟಿ ಬದಲಾಗಿದೆ. ಇದು ನಮ್ಮ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ. ಇಂದು ಪೊನ್ನಂಪೇಟೆ, ಬೆಂಗಳೂರು ಮತ್ತು ಬಾಳುಗೋಡು ಕೊಡವ ಸಮಾಜದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಒಂದು ಹಬ್ಬದಂತೆ ಆಚರಣೆಯಾಗುತ್ತಿದೆ. ಕೊಡವ ಸಂಸ್ಕೃತಿಗೆ ಅಲ್ಲಿ ಉತ್ತೇಜನ ದೊರೆಯುತ್ತಿದೆ. ಕೊಡವ ಸಾಂಸ್ಕೃತಿಕ ಕೇಂದ್ರವಾಗಿ ಕೊಡವ ಸಮಾಜಗಳು ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು.

ಕೊಡವ ಸಮಾಜದ ಅಗತ್ಯತೆ ಏನು ಎಂದು ಆರಂಭದಲ್ಲಿ ಜನ ಕೇಳುತ್ತಿದ್ದರು, ಆದರೆ ಇದೀಗ ಕೊಡವ ಸಮಾಜದ ಅನಿವಾರ್ಯತೆ ಬಗ್ಗೆ ಜನಾಂಗದವರಿಗೆ ಅರಿವು ಆಗಿದೆ. ಕೊಡವರಿಗೆ ಸಮಸ್ಯೆ ಬಂದಾಗ ಕೊಡವ ಸಮಾಜಗಳು ಮುಂದೆ ನಿಲ್ಲಬೇಕೆಂಬ ಅಭಿಲಾಷೆಯನ್ನು ಜನಾಂಗದವರು ಹೊಂದಿದ್ದಾರೆ. ಸುಮಾರು 3 ಕೋಟಿ ಅಂದಾಜು ವೆಚ್ಚದಲ್ಲಿ ಮರೆನಾಡ್ ಕೊಡವ ಸಮಾಜವನ್ನು ಮುತುವರ್ಜಿ ಇಟ್ಟು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಬೇಕಾಗಿದೆ ಎಂದರು.ಮರೆನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಕಾಯಪಂಡ ಸುನಿಲ್, ಕಾರ್ಯಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಬುಟ್ಟಿಯಂಡ ಸುನಿತ ಗಪ್ಪಣ್ಣ, ಖಜಾಂಚಿ ಬೊಟ್ಟಂಗಡ ರವೀಂದ್ರ ವಿಶು ಸಭೆಯಲ್ಲಿ ನಿರ್ದೇಶಕರಾದ ಚೋನಿರ ಮಧು, ಕಾಯಕಂಡ ಸತು, ಬಲ್ಯಮೀದೇರಿರ ರಾಜ, ಕುಪ್ಪಣಮಾಡ ಪ್ರೀತಮ್, ಕಾಳಿಮಾಡ ರಸಿಕ, ಗುಡ್ಡಮಾಡ ಸುಧೀರ್, ಕರ್ತಮಾಡ ಸುನಂದ, ಕರ್ತಮಾಡ ಗಿರೀಶ್, ಚಂಗಣಮಾಡ ಬೋಪಣ್ಣ ಹಾಗೂ ಜಾಗದಾನಿ ಕಾಯಪಂಡ ಪೆಮ್ಮಯ್ಯ, ಸಮಾಜದ ಮಾಜಿ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ, ಮಾಜಿ ಕಾರ್ಯದರ್ಶಿ ಐಯ್ಯಮಾಡ ಮುತ್ತಣ್ಣ ಸೇರಿದಂತೆ ಪ್ರಮುಖರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ: ಕೃಷ್ಣ ಜನ್ಮಾಷ್ಟಮಿ ಆಚರಣೆ
ನಾಪೋಕ್ಲು: ಅಂತಾರಾಷ್ಟ್ರೀಯ ಸಾಕ್ಷರತಾ ದಿನ