ವಿದ್ಯೆ ಎಂಬುದು ಪುಸ್ತಕದ ಹುಳು ಅಲ್ಲ ಅದು ಮಸ್ತಕದ ಜ್ಞಾನ ಎಂದು ನಿವೃತ್ತ ಶಿಕ್ಷಕಿ ಮುಕ್ಕಾಟಿ ಗಂಗಮ್ಮ ಮಾದಪ್ಪ ಹೇಳಿದರು.
ಕನ್ನಡಪ್ರಭವಾರ್ತೆ ನಾಪೋಕ್ಲು
ವಿದ್ಯೆ ಎಂಬುದು ಪುಸ್ತಕದ ಹುಳು ಅಲ್ಲ ಅದು ಮಸ್ತಕದ ಜ್ಞಾನ ಎಂದು ನಿವೃತ್ತ ಶಿಕ್ಷಕಿ ಮುಕ್ಕಾಟಿ ಗಂಗಮ್ಮ ಮಾದಪ್ಪ ಹೇಳಿದರು.ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ವತಿಯಿಂದ ಚೇರಂಬಾಣೆ ಗೌಡ ಸಮಾಜದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೀ ತುಳಸಿ ಮೋಹನ್, ಸಾಕ್ಷರತೆ ಎಂದರೆ ಓದುವ, ಬರೆಯುವ ಮತ್ತು ದೈನಂದಿನ ಬದುಕಿನಲ್ಲಿ ಅಗತ್ಯವಿರುವ ಮೂಲಭೂತ ಲೆಕ್ಕಾಚಾರ ಅಥವಾ ಜ್ಞಾನ ಪಡೆದು ಕೊಳ್ಳುವುದಾಗಿದೆ ಎಂದರು.ಒಕ್ಕೂಟದ ಉಪಾಧ್ಯಕ್ಷ ಹೊಸೊಕ್ಲು ಲತಾ ಮೊಣ್ಣಪ್ಪ, ನಿವೃತ್ತ ಶಿಕ್ಷಕಿ ಅಣ್ಣೆಚ್ಚಿರ ಭೋಜಮ್ಮ ಕುಶಾಲಪ್ಪ ಇದ್ದರು. ಉಪಾಧ್ಯಕ್ಷ ಕೂರನ ಸುಶೀಲ ಅಪ್ಪಾಜಿ ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ ಮತ್ತಿತರರಿದ್ದರು. ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ಪ್ರಾರ್ಥಿಸಿದರು. ಕಡ್ಯದ ಸ್ಮಿತಾ ಜೀವನ್ ಸ್ವಾಗತಿಸಿದರು. ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ ನಿರೂಪಿಸಿದರು. ಕಾಳೇರಮ್ಮನ ರಶಿ ಅಶೋಕ್ ವಂದಿಸಿದರು.