ಕನ್ನಡಪ್ರಭ ವಾರ್ತೆ, ಬೀರೂರು ಪುರಸಭೆ ಅಧ್ಯಕ್ಷೆ ವನಿತಾ ಮಧು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಾಧ್ಯಕ್ಷ ಎನ್.ಎಂ. ನಾಗರಾಜ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ತರೀಕೆರೆ ಉಪವಿಭಾಗಾಧಿಕಾರಿ ನಿರ್ದೇಶನದಂತೆ ಅಧ್ಯಕ್ಷರ ರಾಜೀನಾಮೆ ಬಳಿಕ ಉಪಾಧ್ಯಕ್ಷರು ಪ್ರಭಾರಿ ಅಧ್ಯಕ್ಷರಾಗಿ ಮುಂದಿನ ಚುನಾವಣೆವರೆಗೂ ಅಧಿಕಾರ ನಡೆಸಬಹುದು. ಅದರಂತೆ ಉಪಾಧ್ಯಕ್ಷರಿಗೆ ಪ್ರಭಾರ ಅಧ್ಯಕ್ಷರ ಅಧಿಕಾರ ನೀಡಲಾಗಿದೆ ಎಂದರು.ಪ್ರಭಾರ ಅಧ್ಯಕ್ಷ ಎನ್.ಎಂ.ನಾಗರಾಜ್ ಮಾತನಾಡಿ ಸಿಕ್ಕಿರುವ ಅವಕಾಶದಲ್ಲಿ ಪಟ್ಟಣದ ಸರ್ವತೋಮುಖ ಪುರಸಭೆ ಎಲ್ಲಾ ಸರ್ವ ಸದಸ್ಯರ ಸಹಕಾರ ಪಡೆದು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್ ಮಾತನಾಡಿ, ಈ ಹಿಂದೆ ಅಧ್ಯಕ್ಷೆ ವನಿತಾಮಧು ಉತ್ತಮ ಕೆಲಸ ಮಾಡಿ ಜನಮನಗೆದ್ದಿದ್ದರು. ಬಿಜೆಪಿ ಹಿರಿಯ ಸದಸ್ಯ ನಾಗರಾಜ್ ಅವರನ್ನು ಅಧ್ಯಕ್ಷರಾಗಿ ಮಾಡುವ ಬಯಕೆಗೆ ಇಂದು ಕಾಲ ಕೂಡಿ ಬಂದಿದೆ. ಅವರು ಪುರಸಭೆಯಲ್ಲಿ ಉತ್ತಮ ಕಾರ್ಯನಿರ್ವಹಿಲಿ ಎಂದು ಆಶಿಸಿದರು.ನೂತನ ಪ್ರಭಾರ ಅಧ್ಯಕ್ಷರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯರಾದ ಬಿ.ಆರ್.ಮೋಹನ್ ಕುಮಾರ್, ಮಾನಿಕ್ ಭಾಷ, ಜಿಮ್ ರಾಜು, ಭಾಗ್ಯಲಕ್ಷ್ಮಿ ಮೋಹನ್, ರಘು, ನಾಮಿನಿ ಸದಸ್ಯರಾದ ತಿರುಮಲ ಮೋಹನ್, ಬಿ.ಉಮೇಶ್, ಮುಬಾರಕ್, ಮುಖಂಡರಾದ ಹರಿಪ್ರಸಾದ್, ಜಗದೀಶ್, ಅಳಿಮಯ್ಯ ಸುರೇಶ್, ರುದ್ರೇಶ್, ಎಸ್.ಡಿ.ಇಮ್ರಾನ್, ಮಾಜಿ ಸದಸ್ಯ ರುದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.-- ಬಾಕ್ಸ್--
15 ದಿನಗಳ ಅವಧಿಗೆ ಕ್ಯಾಲೆಂಡರ್: ತಹಸೀಲ್ದಾರ್ ಪೂರ್ಣಿಮಾಬೀರೂರು ಪುರಸಭೆಗೆ ಮುಂದಿನ ಅವಧಿಯ ಚುನಾವಣೆ ನಡೆಸಲು ತರೀಕೆರೆ ಉಪವಿಭಾಗಾಧಿಕಾರಿ ಆದೇಶದ ಹಿನ್ನಲೆಯಲ್ಲಿ ಮುಖ್ಯಾಧಿಕಾರಿಗೆ ಸೋಮವಾರವೇ ನೋಟಿಸ್ ನೀಡಿದ್ದು, ಸರ್ಕಾರಿ ರಜಾ ದಿನ ಹೊರತುಪಡಿಸಿ 15 ದಿನಗಳ ಬಳಿಕ ಜುಲೈ ಮೊದಲ ವಾರದಲ್ಲಿ ಉಳಿದ 4 ತಿಂಗಳ ಅವಧಿಗೆ ಅಧ್ಯಕ್ಷರ ಚುನಾವಣೆ ನಡೆಯುತ್ತದೆ ಎಂದು ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮ ತಿಳಿಸಿದರು. 16 ಬೀರೂರು 1ಬೀರೂರು ಪುರಸಭೆ ಉಪಾಧ್ಯಕ್ಷ ಬಿಜೆಪಿಯ ಎನ್.ಎಂ.ನಾಗರಾಜ್ ಪ್ರಭಾರ ಅಧ್ಯಕ್ಷರಾಗಿ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮೂಲಕ ಅಧಿಕಾರ ಸ್ವೀಕರಿಸಿದರು. ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಸೇರಿದಂತೆ ಮತ್ತಿತರ ಸದಸ್ಯರು ಶುಭಕೋರಿದರು.