ಸರಸ್ವತಿಪುರಂನ ಮತಗಟ್ಟೆ 44ರಲ್ಲಿ ಶೇ. 85 ಅತಿ ಹೆಚ್ಚು ಮತದಾನ । 53ರಲ್ಲಿ ಕಡಿಮೆ ಮತದಾನ ಕನ್ನಡಪ್ರಭ ವಾರ್ತೆ, ಬೀರೂರುಕಡೂರು ಕ್ಷೇತ್ರದ ಬೀರೂರು ಹೋಬಳಿಯ ಮತದಾನ ಪ್ರಕ್ರಿಯೆಯಲ್ಲಿ ಆರಂಭದಿಂದಲೂ ಉತ್ಸಾಹದಿಂದಲೇ ಮತದಾರರು ಪಾಲ್ಗೊಂಡಿದ್ದು, ಶಾಂತಿಯುತವಾಗಿ ಮುಕ್ತಾಯಗೊಂಡಿತು. ಪಟ್ಟಣ- ಗ್ರಾಮಾಂತರ ಭಾಗದಲ್ಲಿ ಬೆಳಗ್ಗೆ 7 ರಿಂದಲೇ ಆರಂಭವಾದ ಮತದಾನ ಬಹುತೇಕ ಮತಗಟ್ಟೆಗಳಲ್ಲಿ ಮಂದಗತಿ ಯಲ್ಲಿ ಸಾಗಿದರೂ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸುಡು ಬಿಸಿಲಿನ ತಾಪ ವಿದ್ದರೂ ಜನ ಮಧ್ಯಾಹ್ನದ ನಂತರವೂ ಮತದಾನ ಮಾಡಿದ್ದರಿಂದ ಪ್ರಮಾಣ ಏರಿಕೆ ಕಂಡಿತು. ಮೊದಲ ಬಾರಿಗೆ ಮತದಾನ ಅವಕಾಶ ಪಡೆದ ಯುವ ಮತದಾರರು ತಮ್ಮಹಕ್ಕು ಚಲಾಯಿಸಿದ ಸಂಭ್ರಮದಲ್ಲಿ ಸೆಲ್ಫಿ ತೆಗೆದುಕೊಂಡು, ಸಂತಸ ಹಂಚಿಕೊಂಡರು.ವಿಕಲಚೇತನರ ಅನುಕೂಲಕ್ಕೆ ಗಾಲಿಕುರ್ಚಿ ವ್ಯವಸ್ಥೆ, ಮಹಿಳೆಯರಿಗೆ ಪ್ರತ್ಯೇಕ ಪಿಂಕ್ ಮತಗಟ್ಟೆ ಮತದಾರರ ಆಸಕ್ತಿ ಹೆಚ್ಚಿಸು ವಂತೆ ಮಾಡಿತ್ತು. ಮತಗಟ್ಟೆಗಳ ಮುಂದೆ ವಿವಿಧ ಪಕ್ಷದ ಕಾರ್ಯಕರ್ತರ ಉತ್ಸಾಹದ ಜೊತೆಗೆ ಮತದಾರರ ಓಲೈಕೆ ಕಂಡುಬಂದಿತು. ಬೀರೂರು ಪಟ್ಟಣ ಹಾಗೂ ಸುತ್ತಮುತ್ತಲ ಹೋಬಳಿ ಪ್ರದೇಶಗಳಲ್ಲಿ ಮತದಾನ ಬಿರುಸಿನಿಂದ ಕೂಡಿತ್ತು. ಮತದಾರರು ಮತದಾನೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ತಳಿರು ತೋರಣಗಳಿಂದ ಮತಗಟ್ಟೆ ಸಿಂಗರಿಸಲಾಗಿತ್ತು. ಕೆಲ ಮತಗಟ್ಟೆಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಶಾಮಿಯಾನದ ವ್ಯವಸ್ಥೆ ಕಲ್ಪಿಸಿದ್ದರು.
-- ಬಾಕ್ಸ್--
ತಾಲೂಕಿನ 10 ಕಡೆ ಮತಯಂತ್ರದೋಷಆರಂಭದಲ್ಲಿ ಬೀರೂರು ಪಟ್ಟಣದ ಹಳೇಪೇಟೆ, ಲಕ್ಷ್ಮೀಪುರ, ನರಸೀಪುರ, ಮಲ್ಲಿ ದೇವಿಹಳ್ಳಿ, ಮರವಂಜಿ, ತಂಗಲಿ, ವಡ್ಡರಹಟ್ಟಿ, ಉಪ್ಪಿನಹಳ್ಳಿ, ಹಾಗೂ ಬಳ್ಳಿಗನೂರು, ಚೋಮಹಳ್ಳಿ, ಬಿಳುವಾಲ, ಚೀಲನ ಹಳ್ಳಿ ಗ್ರಾಮದ ಮತಗಟ್ಟೆ ಕೇಂದ್ರ ಗಳಲ್ಲಿ ವಿವಿ ಪ್ಯಾಟ್‌ನಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಬದಲಿ ಮತಯಂತ್ರಗಳನ್ನು ಅಳವಡಿಸಿಕೊಳ್ಳಲಾಯಿತು.26 ಬೀರೂರು 1ಬೀರೂರು ಪಟ್ಟಣದ ಸರಸ್ವತಿಪುರಂ ಶಾಲೆಯ ಮತಗಟ್ಟೆ 42ರಲ್ಲಿ ಶುಕ್ರವಾರ ಮತದಾನ ಮಾಡಲು ಮತದಾರರು ಸರತಿಸಾಲಿನಲ್ಲಿ ನಿಂತಿರುವುದು.26 ಬೀರೂರು 2ಬೀರೂರು ಪಟ್ಟಣದ ರೈಲ್ವೇ ಕಾಲೋನಿ ಶಾಲೆ ಮತಗಟ್ಟೆ 36ಮತ ಕೇಂದ್ರದಲ್ಲಿ ಶುಕ್ರವಾರ ಮತದಾನ ಮಾಡಲು ಮತದಾರರು ಸರತಿಸಾಲಿನಲ್ಲಿ ನಿಂತಿರುವುದು.