ಬೀದಿನಾಯಿಗಳಿಗೆ ಬಿರಿಯಾನಿ ಸರಿಯಲ್ಲ: ಸಂಸದ

KannadaprabhaNewsNetwork |  
Published : Jul 13, 2025, 01:18 AM IST
12ಕೆಆರ್ ಎಂಎನ್ 5.ಜೆಪಿಜಿಕೆ.ಹೆಚ್.ರಾಮಯ್ಯ ರವರ 146  ಜನ್ಮ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿದರು. | Kannada Prabha

ಸಾರಾಂಶ

ಬೀದಿ ನಾಯಿಗಳ ಮೇಲೆ ಸರ್ಕಾರಕ್ಕೆ ಅಷ್ಟೋಂದು ಕರುಣೆ ಇದ್ದರೆ ಬೀದಿ ನಾಯಿಗಳಿಗಾಗಿಯೇ ಪ್ರತ್ಯೇಕ ಪಾರ್ಕ್, ನಾಯಿ ಶಾಲೆ ಅಂತಾ ಮಾಡಿ ಕೊಡಬೇಕು.

ಚನ್ನಪಟ್ಟಣ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ರಾಜ್ಯ ಸರ್ಕಾರದ ಯೋಜನೆ ಸಮಂಜಸವಾದದ್ದಲ್ಲ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಾಯಿಗಳ ಹಾವಳಿ ಹೆಚ್ಚಾಗಿದೆ. ಎಷ್ಟೋ ಕಡೆ ಮಕ್ಕಳನ್ನು ಕಿತ್ತು ತಿನ್ನುವುದನ್ನು ನೋಡಿದ್ದೇವೆ. ಮನುಷ್ಯ ಮನುಷ್ಯನನ್ನು ಸಾಯಿಸಿದರೆ ಜೈಲು ಶಿಕ್ಷೆ ನಾಯಿ ಸಾಯಿಸಿದರೆ ಅದಕ್ಕೆ ಏನು ಇಲ್ಲ. ಹಾಗಾಗಿ ಈ ಕಾನೂನು ದೇಶದಲ್ಲಿಯೇ ತಿದ್ದುಪಡಿಯಾಗಬೇಕಿದೆ. ದೊಡ್ಡ ನಗರಗಳಲ್ಲಿ ನಾಯಿಗಳಿಗಾಗಿ ದೊಡ್ಡ ಜೈಲು ಮಾಡಬೇಕು. ಈ ರೀತಿ ಆಹಾರ ಕೊಡುವುದು ಸಮಂಜಸ ಅಲ್ಲವೆಂದು ಸರ್ಕಾರದ ನಡೆಯನ್ನು ಖಂಡಿಸಿದರು.

ಪ್ರತ್ಯೇಕ ಸ್ಥಳ ಮಾಡಿ ಆಹಾರ ಕೊಡಿ:ಬೀದಿ ನಾಯಿಗಳ ಮೇಲೆ ಸರ್ಕಾರಕ್ಕೆ ಅಷ್ಟೋಂದು ಕರುಣೆ ಇದ್ದರೆ ಬೀದಿ ನಾಯಿಗಳಿಗಾಗಿಯೇ ಪ್ರತ್ಯೇಕ ಪಾರ್ಕ್, ನಾಯಿ ಶಾಲೆ ಅಂತಾ ಮಾಡಿ ಕೊಡಬೇಕು. ಈ ಯೋಜನೆಯನ್ನು ಹೇಗೆ ಜಾರಿ ಮಾಡಲು ಸಾಧ್ಯ ಹೇಳಿ ಬೀದಿ-ಬೀದಿಗೆ ಹೋಗಿ ಕೊಡ್ತೀರಾ ಎಲ್ಲೋ ಇರುತ್ತೆ ಅಲ್ಲಿ ಹುಡುಕಿಕೊಂಡು ಹೋಗಿ ಕೊಡಲು ಸಾಧ್ಯವೇ. ಹತ್ತು ಬೀದಿ ಇದ್ರೆ, ಹತ್ತು ಬೀದಿಯಲ್ಲಿಯೂ ನಾಯಿಗಳು ಇರುತ್ತಾವೆ, ಊಟವನ್ನು ಎಲ್ಲಿ ಇಡುತ್ತೀರ. ಹಾಗಾಗಿ ಈ ಬಗ್ಗೆ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

----------

ಒಕ್ಕಲಿಗರ ಸಂಘದಿಂದ ಜನಾಂಗದ ಹಿತ ಕಾಯುವ ಕೆಲಸ

ಚನ್ನಪಟ್ಟಣ:ಒಕ್ಕಲಿಗ ಜನಾಂಗದ ಅಭಿವೃದ್ಧಿ, ಅವರ ಬದುಕನ್ನು ಗಟ್ಟಿಗೊಳಿಸುವ ಸಲುವಾಗಿ ಕೆ.ಹೆಚ್.ರಾಮಯ್ಯ ಹುಟ್ಟು ಹಾಕಿದ ಒಕ್ಕಲಿಗರ ಸಂಘ ಇಂದು ರಾಜ್ಯಾದ್ಯಂತ ಹೆಮ್ಮರವಾಗಿ ಬೆಳೆದು ಜನಾಂಗದ ಹಿತ ಕಾಯುವ ಕೆಲಸ ಮಾಡುತ್ತಿದೆ ಎಂದು ಸಂಸದ ಡಾ. ಮಂಜುನಾಥ್ ಅಭಿಪ್ರಾಯಪಟ್ಟರು.ನಗರದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕಚೇರಿಯಲ್ಲಿ ಒಕ್ಕಲಿಗರ ಸಂಘದ ನಿರ್ಮಾತೃ ಕೆ.ಎಚ್.ರಾಮಯ್ಯ ಅವರ 146ನೇ ಜನ್ಮ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೂಂಡು ಅವರು ಮಾತನಾಡಿದರು.ಸಮಾಜದ ಇತರೆ ಜನಾಂಗಗಳಂತೆ ನಮ್ಮಲ್ಲೂ ಬಡವರು ಶೋಷಿತರು, ದುರ್ಬಲರಿದ್ದು, ಅವರ ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ಧಿಗೆ ಅನೂಕೂಲವಾಗಲೆಂಬ ಸದುದ್ದೇಶದೊಂದಿಗೆ ಒಕ್ಕಲಿಗರ ಸಂಘವನ್ನು ಕಟ್ಟಿದರು. ಅವರ ಬಳಿಕ ಸಾಕಷ್ಟು ಮಂದಿ ಇದನ್ನು ಬೆಳೆಸಿದ್ದು, ಇಂದು ರಾಜ್ಯ ಒಕ್ಕಲಿಗರ ಸಂಘ ಲಕ್ಷಾಂತರ ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಹಸ್ತ ಚಾಚುತ್ತಿದೆ ಎಂದರು.ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹೆಸರಿನಡಿ ಸಹೃದಯರೆಲ್ಲಾ ಸೇರಿ ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ, ಜನಾಂಗದ ಮಹನೀಯರನ್ನು ನೆನಿಸಿಕೊಳ್ಳುವುದರ ಜೊತೆಗೆ ವೈದ್ಯರ ಸೇವೆ ಸ್ಮರಿಸಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದರು.ಕಾರ್ಯಕ್ರಮದಲ್ಲಿ ಕಣ್ವ ಡಯಾಗ್ನೋಸ್ಟಿಕ್ ಸೆಂಟರ್‌ನ ವೆಂಕಟಪ್ಪ, ವೈದ್ಯರಾದ ಡಾ.ಮಲವೇಗೌಡ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಪಟೇಲ್ ರಾಜು, ತಾಲೂಕು ಅಧ್ಯಕ್ಷ ರಾಂಪುರ ಧರಣೀಶ್ ಸೇರಿದಂತೆ ಅನೇಕರು ಹಾಜರಿದ್ದರು.

-

12ಕೆಆರ್ ಎಂಎನ್ 5.ಜೆಪಿಜಿ

ಕೆ.ಹೆಚ್.ರಾಮಯ್ಯ ರವರ 146 ಜನ್ಮ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿದರು.

PREV

Latest Stories

ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆಗೆ ಕ್ರಮ : ನ್ಯಾ.ವಿಭು
ಕೃಷ್ಣಾ ಮೇಲ್ದಂಡೆ-3 ಭೂಸ್ವಾಧೀನಕ್ಕೆ 2.01 ಲಕ್ಷ ಕೋಟಿ ಬೇಕು : ಸಚಿವ ಕೃಷ್ಣ
ನಮ್ಮ ಗ್ಯಾರಂಟಿ ಯೋಜನೆ ದೇಶಕ್ಕೇ ಮಾದರಿ - ಟೀಕಿಸಿದ್ದ ಬಿಜೆಪಿಯೇ ಕಾಪಿ ಮಾಡಿದೆ : ಡಿಸಿಎಂ ಡಿಕೆಶಿ