ರೈತಸ್ನೇಹಿ ಕೂರಿಗೆಗೆ ಹೆಸರಾದ ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್

KannadaprabhaNewsNetwork |  
Published : Sep 13, 2025, 02:04 AM IST
ಧಾರವಾಡ ಕೃಷಿ ಮೇಳದಲ್ಲಿ ಬಿಡುಗಡೆ(ಲಾಂಚ್‌) ಮಾಡಲಾಗುತ್ತಿರುವ ಬಿಎಂಡಿ26 ಮೆಕ್ಕೆಜೋಳ ಸ್ಪೇಷಲ್ ಕೂರಿಗೆ. | Kannada Prabha

ಸಾರಾಂಶ

ರೈತರ ಅನಾನುಕೂಲತೆ ಆಲಿಸಿದ ಬಳಿಕ ರೈತರಿಗೆ ಹೊಸ ಯಂತ್ರೋಪಕರಣಗಳನ್ನು ಆವಿಷ್ಕರಿಸಿ ನೀಡುವುದು ಈ ಸಂಸ್ಥೆಯ ವಿಶೇಷತೆ

ಹುಬ್ಬಳ್ಳಿ: ಸದಾ ಒಂದಿಲ್ಲೊಂದು ಮಾದರಿಯ ಕೃಷಿ ಯಂತ್ರೋಪಕರಣ ಸಿದ್ಧಪಡಿಸುವಲ್ಲಿ ಪ್ರಸಿದ್ಧಿ ಪಡೆದ ಅಣ್ಣಿಗೇರಿಯ ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್ ಈ ಬಾರಿಯ ಕೃಷಿ ಮೇಳದಲ್ಲಿ ಪಾಲ್ಗೊಳ್ಳುತ್ತಿದೆ. ಸುಮಾರು 25ಕ್ಕೂ ಅಧಿಕ ಬಗೆಯ ಕೃಷಿ ಯಂತ್ರೋಪಕರಣಗಳನ್ನು ಸಿದ್ಧಪಡಿಸಿ ಯಶಸ್ಸು ಪಡೆದಿದೆ.

ಕೃಷಿ ಉಪಕರಣಗಳಲ್ಲಿ ಹೊಸ ಅವಿಷ್ಕಾರ ಹಾಗೂ ಹೊಸ ತಂತ್ರಜ್ಞಾನ ಅಳವಡಿಸುವ ಮೊದಲು ಹೊಲಗಳಿಗೆ ತೆರಳಿ ತಾವು ಸಿದ್ಧಪಡಿಸಿದ ಕೃಷಿ ಯಂತ್ರೋಪಕರಣಗಳನ್ನು ಬಳಸಿ ಮತ್ತು ರೈತರ ಅನಾನುಕೂಲತೆ ಆಲಿಸಿದ ಬಳಿಕ ರೈತರಿಗೆ ಹೊಸ ಯಂತ್ರೋಪಕರಣಗಳನ್ನು ಆವಿಷ್ಕರಿಸಿ ನೀಡುವುದು ಈ ಸಂಸ್ಥೆಯ ವಿಶೇಷತೆ.

ಮೊದಲು ರಬ್ಬರ್‌ ಮಾಡಲ್‌ ಕೂರಿಗೆ (ಡಬ್ಬಿ ಕೂರಿಗೆ) ಮೂಲಕ ಆರಂಭವಾಯಿತು. ಈಗ ವರೆಗೂ 25ಕ್ಕೂ ಅಧಿಕ ಮಾದರಿಯ ಕೂರಿಗೆಗಳನ್ನು ಸಿದ್ಧಪಡಿಸಿದೆ.

ಯಾವೆಲ್ಲ ಕೂರಿಗೆಗಳಿವೆ?: 6 ತಾಳಿನ ದುರ್ಗಾ (ಬ್ಯಾಡಗಿ) ಮಾಡೆಲ್ ಕೂರಿಗೆ, ಸ್ಟ್ರಿಂಗ್‌ ತಾಳಿನ ಕಿಸಾನ್ ಮಾಡೆಲ್‌ ಕೂರಿಗೆ, ಸಿಂಗಲ್‌ ಬಾಕ್ಸ್‌ನ ಮೆಕ್ಕೆಜೋಳ ಬಿತ್ತುವ ಬಲರಾಮ ತಾಳಿನ ಕೂರಿಗೆ, 6 ಮತ್ತು 8 ತಾಳಿನ ಮಾಡೆಲ್‌ ಕೂರಿಗೆ, 9 ತಾಳಿನ ಕಲ್ಟಿವೇಟರ್‌ (ಜಿಗ್‌ಜಾಗ್‌) ಮಾಡೆಲ್‌ ಕೂರಿಗೆ, ಬೀಜ ಸ್ವಚ್ಛ ಮಾಡುವ ಯಂತ್ರ ಸೇರಿದಂತೆ 25ಕ್ಕೂ ಹೆಚ್ಚು ಮಾಡಲ್‌ ಯಂತ್ರಗಳು ಇಲ್ಲಿ ಲಭ್ಯ.

ಮೆಕ್ಕೆಜೋಳ ಸ್ಪೇಷಲ್‌ ಕೂರಿಗೆ: ರೈತರ ಬಹುದಿನಗಳ ಬೇಡಿಕೆ ಮೇರೆಗೆ ತಯಾರಿಸಿದ ಬಿಎಂಡಿ26 ಮೆಕ್ಕೆಜೋಳ ಸ್ಪೇಷಲ್ ಕೂರಿಗೆಯನ್ನು ಆಕರ್ಷಕ ವಿನ್ಯಾಸದೊಂದಿಗೆ ರೈತರ ಅನಾನೂಕೂಲತೆ ಗಮನದಲ್ಲಿಟ್ಟು ಈ ಕೂರಿಗೆ ಸಿದ್ಧಪಡಿಸಿದೆ. ಇದು ಪ್ರಪ್ರಥಮವಾಗಿ 5 ತಾಳುಗಳೊಂದಿಗೆ ಪ್ರಸ್ತುತಪಡಿಸಲಾಗಿದೆ. ಈ ಬಾರಿಯ ಕೃಷಿ ಮೇಳದಲ್ಲಿ ಮೊದಲ ಬಾರಿಗೆ ಬಿಡುಗಡೆ (ಲಾಂಚ್‌) ಮಾಡಲಾಗುತ್ತಿದೆ.

ಇಲ್ಲಿಗೆ ಭೇಟಿ ನೀಡಿ: ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್ ಅಣ್ಣಿಗೇರಿಯ ಗದಗ-ಹುಬ್ಬಳ್ಳಿ ರಸ್ತೆಯಲ್ಲಿದೆ. ಈ ಬಾರಿಯ ಕೃಷಿ ಮೇಳದಲ್ಲಿ 488, 489, 490 ಸಂಖ್ಯೆಯ ಮಳಿಗೆ ಸ್ಥಾಪಿಸಿದೆ. ಈ ಯಂತ್ರೋಪಕರಣಗಳು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಾಯಧನದಲ್ಲಿ ರೈತರಿಗೆ ಲಭ್ಯ. ಹೆಚ್ಚಿನ ಮಾಹಿತಿಗೆ ಮೊ 90089 28615, 97392 31911, 9964436307 ಸಂಖ್ಯೆಗೆ ರೈತರು ಸಂಪರ್ಕಿಸಬಹುದಾಗಿದೆ.

ನಮ್ಮಲ್ಲಿ ರೈತಸ್ನೇಹಿ ಯಂತ್ರೋಪಕರಣಗಳನ್ನು ಕಡಿಮೆ ಬೆಲೆಗೆ ನೀಡುವ ಉದ್ದೇಶದಿಂದ ರೈತರ ಬೇಡಿಕೆಗೆ ತಕ್ಕಂತೆ ಕೃಷಿ ಯಂತ್ರೋಪಕರಣ ತಯಾರಿಸಲಾಗಿದೆ. ನಮ್ಮಲ್ಲಿ ರಾಜ್ಯಾದ್ಯಂತ ರೈತರು ಆಗಮಿಸಿ ಕೂರಿಗೆ ಖರೀದಿಸಿಕೊಂಡು ಹೋಗಿದ್ದಾರೆ ಎಂದು ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್ ಶಬ್ಬೀರಅಹ್ಮದ ಗುಳಗುಂದಿ ಹೇಳಿದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ