ಕನ್ನಡಪ್ರಭ ವಾರ್ತೆ ಮಂಗಳೂರು
ಕ್ಯಾ.ಬ್ರಿಜೇಶ್ ಚೌಟ ಅವರು 7,64,132 ಮತಗಳನ್ನು ಪಡೆದಿದ್ದರೆ, ಪದ್ಮರಾಜ್ ಆರ್. ಪೂಜಾರಿ 6,14,924 ಮತಗಳನ್ನು ಪಡೆದಿದ್ದಾರೆ. ಲೋಕಸಭೆಗೆ ಪ್ರಥಮ ಪ್ರಯತ್ನದಲ್ಲೇ ಪ್ರವೇಶಿಸುವ ಮೂಲಕ ಕಳೆದ 33 ವರ್ಷಗಳ ಬಿಜೆಪಿ, ಹಿಂದುತ್ವದ ಭದ್ರಕೋಟೆಯ ಸಾರಥ್ಯ ವಹಿಸಿಕೊಂಡಿದ್ದಾರೆ. ಪ್ರತಿ ಸುತ್ತಿನಲ್ಲೂ ಕ್ಯಾ.ಚೌಟ ಮುನ್ನಡೆ: ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಸುರತ್ಕಲ್‌ನ ಎನ್‌ಐಟಿಕೆ ಕೇಂದ್ರದಲ್ಲಿ ಬೆಳಗ್ಗೆ 7 ಗಂಟೆಯ ಸುಮಾರಿಗೆ ಭದ್ರತಾ ಕೊಠಡಿಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ನೇತೃತ್ವದಲ್ಲಿ ತೆರೆಯುವ ಮೂಕ ಆರಂಭಗೊಂಡಿತು.
ಚುನಾವಣಾ ಏಜೆಂಟರ ಆಗಮನ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾಗಬೇಕಿದ್ದ ಪ್ರಕ್ರಿಯೆ 7ರ ಸುಮಾರಿಗೆ ಆರಂಭಗೊಂಡಿತ್ತು. ಬೆಳಗ್ಗೆ 8 ಗಂಟೆ ವೇಳೆಗೆ ಅಂಚೆ ಮತಗಳ ಎಣಿಕೆ ಆರಂಭಗೊಂಡಿದ್ದು, ಬಳಿಕ 8.30ಕ್ಕೆ ಇವಿಎಂಗಳ ಎಣಿಕೆ ಕಾರ್ಯ ಆರಂಭಿಸಲಾಯಿತು.ಆರಂಭದ ಮತ ಎಣಿಕೆಯ ಫಲಿತಾಂಶ ಹೊರಬಿದ್ದಾಗ ಬೃಜೇಶ್ ಚೌಟ ಅವರು 9,080 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು. ಅಲ್ಲಿಂದ 19 ಸುತ್ತಿಗಳ ಎಣಿಕೆ ವರೆಗೂ ಕ್ಯಾ.ಚೌಟ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ 18ನೇ ಸುತ್ತಿನಲ್ಲಿ ಮಾತ್ರ ಕಾಂಗ್ರೆಸ್‌ನ ಪದ್ಮರಾಜ್ ಅವರು 460 ಮತಗಳ ಮುನ್ನಡೆ ಪಡೆದಿದ್ದರು.
ನೋಟಾಗೆ 3ನೇ ಸ್ಥಾನ!ದ.ಕ. ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನೋಟಾಗೆ 23,576 ಚಲಾವಣೆಯಾಗಿದ್ದು, ಮೂರನೇ ಸ್ಥಾನ ಪಡೆದು ಗಮನ ಸೆಳೆದಿದೆ. ಚುನಾವಣೆ ವೇಳೆ ನೋಟಾಗೂ ಅಭಿಯಾನ ನಡೆದಿತ್ತು. ಬೆಳ್ತಂಗಡಿಯಲ್ಲಿ ಗರಿಷ್ಠ 7,691 ಹಾಗೂ ಸುಳ್ಯದಲ್ಲಿ 4,541 ನೋಟಾ ಚಲಾವಣೆಯಾಗಿದೆ. ಮೂಡುಬಿದಿರೆಯಲ್ಲಿ 2,166, ಮಂಗಳೂರು ದಕ್ಷಿಣ 2,019, ಬಂಟ್ವಾಳ 2,353, ಪುತ್ತೂರು 2,302 ನೋಟಾ ಚಲಾವಣೆಗೊಂಡಿದೆ.
ಬಾಕ್ಸ್----ಫಲಿತಾಂಶ ವಿವರ:
ಒಟ್ಟು 9 ಮಂದಿ ಕಣದಲ್ಲಿದ್ದು, ಅವರು ಪಡೆದ ಮತಗಳು-
ಪದ್ಮರಾಜ್ ಆರ್.ಪೂಜಾರಿ(ಕಾಂಗ್ರೆಸ್)-6,14,924
ದುರ್ಗಾ ಪ್ರಸಾದ್(ಕರುನಾಡ ಸೇವಕರ ಪಕ್ಷ)-2,592
ರಂಜಿನಿ ಎಂ.(ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ)-776
ದೀಪಕ್ ರಾಜೇಶ್ ಕುವೆಲ್ಲೊ(ಪಕ್ಷೇತರ)-976ಮ್ಯಾಕ್ಸಿಂ ಪಿಂಟೋ(ಪಕ್ಷೇತರ)-1,690
ಸುಪ್ರೀತ್ ಕುಮಾರ್ ಪೂಜಾರಿ(ಪಕ್ಷೇತರ)-1,901ನೋಟಾ-23,576ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟಗೆ ಮಂಗಳೂರು ಉತ್ತರದಲ್ಲಿ ಗರಿಷ್ಠ 1,08,137 ಮತಗಳ ಲೀಡ್ ಸಿಕ್ಕಿದರೆ, ಕನಿಷ್ಠ ಲೀಡ್ ಸಿಕ್ಕಿರುವುದು 64,870 ಮಂಗಳೂರಲ್ಲಿ. ಕಾಂಗ್ರೆಸ್‌ನ ಪದ್ಮರಾಜ್‌ಗೆ ಗರಿಷ್ಠ ಮತ 97,933 ಮಂಗಳೂರು ಕ್ಷೇತ್ರದಲ್ಲಿ ಸಿಕ್ಕಿದರೆ, ಅತೀ ಕನಿಷ್ಠ 63,615 ಮತ ಸುಳ್ಯದಲ್ಲಿ ಲಭಿಸಿದೆ.