ಬಳ್ಳಾರಿಯಲ್ಲಿ ಇತಿಹಾಸ ನಿರ್ಮಿಸಿದ್ದೇವೆ: ಶಾಸಕ ಡಾ.ಶ್ರೀನಿವಾಸ

KannadaprabhaNewsNetwork |  
Published : Jun 05, 2024, 12:31 AM IST
ಬಳ್ಳಾರಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾದ ಈ.ತುಕಾರಂ ಅವರ ಗೆಲುವಿನ ಸಂಭ್ರಮಾಚರಣೆಯಲ್ಲಿ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭಾಗಿಯಾಗಿರುವುದು.    | Kannada Prabha

ಸಾರಾಂಶ

ಕೂಡ್ಲಿಗಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಇತಿಹಾಸ ತೊಡೆದು ಹಾಕಿ ಕಾಂಗ್ರೆಸ್ ಇತಿಹಾಸ ನಿರ್ಮಿಸಿದೆ.

ಕೂಡ್ಲಿಗಿ: ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 25 ವರ್ಷಗಳಿಂದ ಲೋಕಸಭೆ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ 25 ಸಾವಿರ ಮತಗಳ ಲೀಡ್‌ನಿಂದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿತ್ತು. ಈ ಬಾರಿ ಬಿಜೆಪಿಯ ಈ ಇತಿಹಾಸ ಮುರಿದು ಕೂಡ್ಲಿಗಿ ಕ್ಷೇತ್ರದಿಂದ 8ರಿಂದ 10 ಸಾವಿರ ಮತಗಳ ಲೀಡ್‌ ಪಡೆದು ಕಾಂಗ್ರೆಸ್ ಅಭ್ಯರ್ಥಿ ತುಕಾರಾಂಗೆ ಗೆದ್ದಿದ್ದಾರೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ ಹೇಳಿದರು.

ಅವರು ಮಂಗಳವಾರ ರಾತ್ರಿ ಕನ್ನಡಪ್ರಭದೊಂದಿಗೆ ಮಾತನಾಡಿ, 2004ರಿಂದ ನಿರಂತರವಾಗಿ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ನಿರಂತರವಾಗಿ 18 ರಿಂದ 25ಸಾವಿರದವರೆಗೂ ಲೀಡ್ ಬಿಜೆಪಿ ಪಕ್ಷದಿಂದ ಬರುತಿತ್ತು. ಆದರೆ ಈ ಬಾರಿ 25 ಸಾವಿರ ಬಿಜೆಪಿ ಲೀಡ್ ನ್ನು ಮೆಟ್ಟಿನಿಂತ 8ರಿಂದ 10 ಸಾವಿರ ಲೀಡ್ ಪಡೆದಿರುವುದು ಬಳ್ಳಾರಿ ಜಿಲ್ಲೆಯ ಜನತೆಗೆ ಸಂದ ಜಯವಾಗಿದೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜಯವಾಗಿದೆ ಎಂದು ಬಣ್ಣಿಸಿದರು.

ಜನರ ತೀರ್ಪಿಗೆ ತಲೆಬಾಗುವೆ:

ಕೂಡ್ಲಿಗಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಇತಿಹಾಸ ತೊಡೆದು ಹಾಕಿ ಕಾಂಗ್ರೆಸ್ ಇತಿಹಾಸ ನಿರ್ಮಿಸಿದೆ. ಇದಕ್ಕೆ ಕೂಡ್ಲಿಗಿ ಕ್ಷೇತ್ರವಲ್ಲದೇ ಅಖಂಡ ಬಳ್ಳಾರಿ ಜಿಲ್ಲೆ ಜನತೆಯ ಆಶೀರ್ವಾದ ಕಾರಣ. ಜನತೆ ಏನು ತೀರ್ಪು ನೀಡುತ್ತಾರೋ ಅದನ್ನು ಸ್ವೀಕರಿಸುತ್ತೇನೆ. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಭೇದ ಮಾಡದೇ ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಸಂಸದರ ಜೊತೆ ಶ್ರಮಿಸುವುದಾಗಿ ಡಾ.ಎನ್.ಟಿ. ಶ್ರೀನಿವಾಸ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ