ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಬಿಜೆಪಿ ಆಯ್ಕೆ ಮಾಡಲು ಬಿಜೆಪಿ ಕಾರ್ಯಕರ್ತರು ತೀರ್ಮಾನ ಕೈಗೊಂಡಿದ್ದಾರೆ ಎಂಬ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ದೊಡ್ಡ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕರ್ತರಲ್ಲಿ ಮನವಿ ಮಾಡಿದರು.ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾರ್ಯಕರ್ತರು ಪ್ರಯತ್ನ ಪಟ್ಟು ಎಲ್ಲಾ ಮತದಾರರ ಭೇಟಿ ಮಾಡಿ ಮತ ಕೇಳಿದರೆ ಅಭ್ಯರ್ಥಿ ಎಸ್.ಬಾಲರಾಜು ಗೆಲುವು ಸಾಧ್ಯವಾಗಲಿದೆ ಎಂದರು. ಹಣ, ಹೆಂಡ, ಅಧಿಕಾರ ಹಾಗೂ ಜಾತಿಯ ವಿಷ ಬೀಜ ಬಿತ್ತಿ ಗೆಲ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಆದರೆ ಜನ ಜಾಗೃತರಾಗಿದ್ದಾರೆ. ಜನ ಮೋಸ ಹೋಗೋದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಅಭಿವೃದ್ಧಿ ಕುಂಠಿತವಾಗುತ್ತಿದೆ. ಕಾಂಗ್ರೆಸ್ಸಿಗರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಗ್ಯಾರಂಟಿಗಳ ಸುಳ್ಳು ಭರವಸೆ ನೀಡುತ್ತಿದ್ದಾರೆ ಇದನ್ನು ನಂಬಬೇಡಿ ಎಂದರು.ಪಿಎಂ ಅಭ್ಯರ್ಥಿ ಯಾರು?ದೇಶದಲ್ಲಿ ಕಾಂಗ್ರೆಸ್ ೫೦ ಸೀಟು ಗೆಲ್ಲಲ್ಲ. ಕಾಂಗ್ರೆಸ್ ಗ್ಯಾರಂಟಿ ನೀಡಲು ಹೊರಟಿದೆ. ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಲ್ವ? ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಿ ನೋಡೋಣ? ನಿಮ್ಮಲ್ಲಿ ಹೇಳಿಕೊಳ್ಳುವ ಪಿಎಂ ಅಭ್ಯಥಿ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಅಬ್ಬರಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದು ಕೆಜಿ ಅಕ್ಕಿ ಕೊಡಲು ಸಾದ್ಯವಾಗಿಲ್ಲ. ಆದರೂ ಕಾಂಗ್ರೆಸ್ಸಿಗರು ಬೊಬ್ಬೆ ಹಾಕ್ತಾರೆ. ನಾನು ಜಾರಿಗೆ ತಂದ ಭಾಗ್ಯಲಕ್ಷ್ಮೀ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆ ಯಾಕೆ ನಿಲ್ಲಿಸಿದ್ರೀ ಎಂದು ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಂಡರು.ವೀರಶೈವರಲ್ಲಿ ಪ್ರಾರ್ಥನೆನಾವೆಲ್ಲರೂ ಒಂದೇ ತಾಯಿಯ ಮಕ್ಕಳು. ಮತದಾರರ ಮನವೊಲಿಸಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸಿ, ಒಂದು ಲಕ್ಷ ಅಂತರದಲ್ಲಿ ಗೆಲುವು ಸಾಧಿಸುವುದು ನಿಮ್ಮ ಕೈಯಲ್ಲಿದೆ ಎಂದು ವೀರಶೈವರಲ್ಲಿ ಪ್ರಾರ್ಥನೆ ಮಾಡಿಕೊಂಡರು. ಮಹಿಳೆಯರು ಸಭೆಗೆ ಕಡಿಮೆ ಸಂಖ್ಯೆಯಲ್ಲಿ ಬಂದಿದ್ದೀರಾ? ಪ್ರಧಾನಿ ಮೋದಿ ನಾಯಕತ್ವದಲ್ಲಿ ನಡೆವ ಲೋಕಸಭೆ ಚುನಾವಣೆ ಅಪರೂಪ ಹಾಗೂ ವಿಶೇಷವಾದದ್ದು. ಬಿಜೆಪಿ ಪರ ಮಹಿಳೆಯರು ಕೆಲಸ ಮಾಡಿ ಎಂದು ಸಲಹೆ ನೀಡಿದರು.ಕಾಂಗ್ರೆಸ್ ಕೊಲೆಗಾರರಿಗೆ ಪರೋಕ್ಷ ಬೆಂಬಲಬೆಂಗಳೂರು ಕೆಫೆ ಮೇಲೆ ಬ್ಲಾಸ್ಟ್ ಪ್ರಕರಣ, ಹುಬ್ಬಳ್ಳಿಯ ವಿದ್ಯಾರ್ಥಿ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಪರೋಕ್ಷ ದಾಳಿ, ಕೊಲೆಗಾರರಿಗೆ ಬೆಂಬಲ ನೀಡುತ್ತಿದ್ದಾರೆ. ಒಂದು ಕೋಮಿಗೆ ಮಿತಿ ಮೀರಿದ ಓಲೈಕೆ ಮಾಡೋರಿಂದ ದೇಶ ಸುಭೀಕ್ಷೆಯಾಗಲು ಸಾಧ್ಯವಿಲ್ಲ ಎಂದರು.ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರನ್ನು ಯಾಕಾದ್ರು ಕಾಂಗ್ರೆಸ್ ಅಭ್ಯರ್ಥಿ ಮಾಡಿದ್ರು ಎಂದು ಕಾಂಗ್ರೆಸ್ಸಿಗರೇ ತಲೆ ಚಚ್ಚಿಕೊಳ್ತಾವ್ರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ವ್ಯಂಗವಾಡಿದರು. ಲೋಕಸಭೆ ಕ್ಷೇತ್ರ ವ್ಯಾಪ್ತಿಯ ೮ ವಿಧಾನ ಸಭಾ ಕ್ಷೇತ್ರದ ಬಹುತೇಕ ಕಾಂಗ್ರೆಸ್ಸಿಗರೇ ಸುನೀಲ್ ಬೋಸ್‌ಗೆ ಓಟು ಹಾಕಲ್ಲ ಎಂದು ಹೇಳುತ್ತಿದ್ದಾರೆಂದರೆ ಅಭ್ಯರ್ಥಿ ಹೇಗಿದ್ದಾರೆಂದು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ರನ್ನು ಗೋ ಬ್ಯಾಕ್ ಎಂದು ಹೇಳಿದ್ದು ಕಾಂಗ್ರಸ್ಸಿಗರೇ ಹಾಗಾಗಿ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಗೆಲುವು ಸಾಧಿಸಲಿದ್ದಾರೆ ಎಂದರು.ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ,ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ,ಮಂಡಲ ಅಧ್ಯಕ್ಷ ಮಹದೇವಪ್ರಸಾದ್, ಪ್ರಧಾನ ಕಾರ್ಯದರ್ಶಿ ಹಂಗಳ ನಂದೀಶ್, ಬಿಜೆಪಿ ಮುಖಂಡರಾದ ಗುರುಪಾದಸ್ವಾಮಿ, ಆರ್.ಸುಂದರ್, ನಾಗಶ್ರೀ ಪ್ರತಾಪ್, ಡಾ.ಮೋಹನ್, ಕೊಡಸೋಗೆ ಶಿವಬಸಪ್ಪ, ಪಣೀಶ್, ಕೆ.ಆರ್.ಲೋಕೇಶ್, ಮೂಡ್ನಾಕೂಡು ಪ್ರಕಾಶ್, ಡಿ.ಪಿ.ಜಗದೀಶ್, ಎನ್.ಮಲ್ಲೇಶ್, ಪಿ.ಗಿರೀಶ್, ಎಲ್.ಸುರೇಶ್ ಸೇರಿದಂತೆ ಸಾವಿರಾರು ಮಂದಿ ಇದ್ದರು.
ಕಾಂಗ್ರೆಸ್ ದಿವಾಳಿಯಾಗಿ ಅಭಿವೃದ್ಧಿ ಕೆಲಸ ಸ್ಥಗಿತ!ಕಾಂಗ್ರೆಸ್ ದಿವಾಳಿಯಾಗಿದೆ, ಖಜಾನೆ ಖಾಲಿಯಾಗಿದೆ, ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯ ದಿವಾಳಿ ಸರ್ಕಾರ ಆದರೂ ಕಾಂಗ್ರೆಸ್ಸಿಗರು ಹಗುರವಾಗಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಒಂದೇ ಒಂದು ಕಿಮೀನಷ್ಟು ರಸ್ತೆ ಮಾಡಿಲ್ಲ ಎಂದು ಆರೋಪಿಸಿದರು.ಪ್ರಧಾನಿ ಮೋದಿ ಅವರು ಕಾಂಗ್ರೆಸ್ಸಿನ ಬಂಡವಾಳ ಹಾಗೂ ಮಾಹಿತಿಗಳನ್ನು ಬೆಂಗಳೂರಲ್ಲಿ ರಾಜ್ಯದ ಜನರಿಗೆ ಶನಿವಾರ ಬಿಚ್ಚಿದ್ದಾರೆ. ಮತ್ತೇ ನಾನೇನು ಹೇಳಬೇಕಾಗಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಒಂದು ದಿನವೂ ಕಳೆದ ೧೦ ವರ್ಷಗಳಲ್ಲಿ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಮೋದಿ ಬಗ್ಗೆ ವಿಶ್ವವೇ ಕೊಂಡಾಡುತ್ತಿದೆ ಹಾಗಾಗಿ ಸೂರ್ಯ,ಚಂದ್ರ ಇರುವುದೆಷ್ಟು ಸತ್ಯವೋ ನರೇಂದ್ರ ಮೋದಿ ಅವರು ೩ ನೇ ಬಾರಿಗೆ ಪ್ರಧಾನಿಯಾಗುವುದು ಅಷ್ಟೇ ಸತ್ಯ. ಇದನ್ನು ತಪ್ಪಿಸಲು ಯಾವ ಶಕ್ತಿಯಿಂದಲೂ ಸಾದ್ಯವಿಲ್ಲ ಎಂದರು.ಮಧ್ಯಾಹ್ನ ೩ ಗಂಟೆಗೆ ಏಳೋ ಸಂಸದ ಬೇಕಾ?ಬೆಳಗ್ಗೆ ಆರು ಗಂಟೆಗೆದ್ದು ಕೆಲಸ ಮಾಡೋ ಸಂಸದ ಬೇಕಾ? ಮಧ್ಯಾಹ್ನ ೩ ಗಂಟೆ ತನಕ ಮಲಗಿರೋ ಸಂಸದ ಬೇಕಾ? ಎಂದು ಮತದಾರರೇ ಲೋಕಸಭೆ ಚುನಾವಣೆಯಲ್ಲಿ ತೀರ್ಮಾನಿಸಲಿ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.ಬಿಜೆಪಿ ಅಭ್ಯರ್ಥಿ ಬೆಳಗ್ಗೆ ಆರು ಗಂಟೆಗೆ ಎದ್ದು ಜನರ ಜೊತೆ ಬೆರೆಯುವ ಯೋಗ್ಯ ಅಭ್ಯರ್ಥಿಗೆ ಹೆಚ್ಚಿನ ಮತ ಕೊಟ್ಟು ಗೆಲ್ಲಿಸಿ ಸಂಸತ್ ಕಳುಹಿಸಿ ಕೊಡಿ. ಮಧ್ಯಾಹ್ನ ೩ ಗಂಟೆಗೆ ಏಳುವ ಅಭ್ಯರ್ಥಿಗೆ ಮತ ನೀಡಿದರೆ ಪ್ರಯೋಜನವಾಗುವುದಿಲ್ಲ. ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಆಗಲಿದ್ದು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಬಡವರ ಮಗ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಸಂಸದರಾಗಬೇಕೋ ಅಥವಾ ಸಚಿವರ ಮಗ ಶ್ರೀಮಂತ ಅಭ್ಯರ್ಥಿ ಸಂಸದರಾಗಬೇಕೋ ಎಂದು ಮತದಾರರು ಚಿಂತಿಸಿ ಮತ ಚಲಾಯಿಸಿ ಎಂದರು.ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಗುಣವಂತ ಅಭ್ಯರ್ಥಿ ಸುನೀಲ್ ಬೋಸ್ ಹಣವಂತ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ತಂದೆ ಸಚಿವರಾಗಿದ್ದಾರೆ. ಒಂದೇ ಕುಟುಂಬಕ್ಕೆ ಎರಡು ಹುದ್ದೇ ಬೇಕಾ ಎಂದು ಪ್ರಶ್ನಿಸಿದರು.