ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಿನ ನಾಗರಬೆಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ಎನ್ಎಸ್ಎಲ್ಎಂ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತರುವ ಮೂಲಕ ಮತಕ್ಷೇತ್ರದಲ್ಲಿ ಶೈಕ್ಷಣಿಕ ಸುಧಾರಣೆಗಾಗಿ, ಕೃಷಿ, ತೋಟಗಾರಿಗಿಕೆ, ಚರಂಡಿ ಹಾಗೂ ರಸ್ತೆಗಳ ನಿರ್ಮಾಣ ಸೇರಿದಂತೆ ಅನೇಕ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಿಜೆಪಿಯವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಬೇರೆ ಏನು ಗೊತ್ತಿಲ್ಲ. ಜನರು ಅವರ ಮಾತುಗಳಿಗೆ ಮರುಳಾಗಬೇಡಿ. ಇನ್ನಷ್ಟು ಅಬಿವೃದ್ಧಿ ಕೆಲಸಗಳನ್ನು ನಡೆಸಲು ಮುಖ್ಯಮಂತ್ರಿಗಳಿಗೆ ವಿಶೇಷ ಹೆಚ್ಚುವರಿ ಅನುದಾನ ಬಿಡುಗಡೆಗೆ ಆಗ್ರಹಿಸಲಾಗಿದೆ. ಅವರೂ ಕೂಡ ಅನುದಾನ ನೀಡುವುದಾಗಿ ಭರವಸೆ ಕೊಟಿದ್ದಾರೆ ಮುಂಬರುವ ದಿನಗಳಲ್ಲಿ ಮಾದರಿ ಮತಕ್ಷೇತ್ರ ಮಾಡುವುದೊಂದಿಗೆ ನಮ್ಮ ಗುರಿಯಾಗಿದೆ ಎಂದರು.ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ಸರ್ಕಾರದ ಆಸೆಯಂತೆ ಶಾಸಕ ಸಿ.ಎಸ್ ನಾಡಗೌಡ (ಅಪ್ಪಾಜಿ) ಮಾರ್ಗದರ್ಶನದಲ್ಲಿ ಬಡವರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕವಾಗಿ ಜನರಿಗೆ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ. ಹಾಗೇನಾದರೂ ಗ್ಯಾರಂಟಿ ಯೋಜನೆಯ ಪಡೆದುಕೊಳ್ಳದೇ ಇರುವವರು ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ಪಂಚಾಯತ್ ರಾಜ್ಯ ಇಲಾಖೆ ಶಿವರಾಜ ನಾಯಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜು ನಾರಾಯಣಿ, ಬಿ.ಜಿ ಮಠ, ಆರ್.ಬಿ ಪಾಟೀಲ, ಕಲ್ಲಣ್ಣ ಪ್ಯಾಟಿ, ವಿರೇಶ ಹೂಗಾರ, ಎಂ.ಎಸ್.ಪಾಟೀಲ, ಕೆ.ಎಚ್ ಕುಂಬಾರ, ರುದ್ರಗೌಡ ಪಾಟೀಲ, ಅಯ್ಯಪ್ಪ ಮಲಗಲದಿನ್ನಿ ಸೇರಿದಂತೆ ಹಲವರಿದ್ದರು.