ಮಠಕ್ಕೆ ಬರುವಾಗ ಭಕ್ತರಾಗಿ ಬನ್ನಿ, ರಾಜಕೀಯ ತರಬೇಡಿ: ಗುರು ರೇವಣಸಿದ್ದ ಸ್ವಾಮೀಜಿ

KannadaprabhaNewsNetwork |  
Published : Feb 09, 2026, 03:15 AM IST
ಸಮಾಧಾನ ಆಶ್ರಮದ ಮೌನಯೋಗಿ ಜಡೆಯ ಶಾಂತಲಿಂಗ ಸ್ವಾಮೀಜಿ ಅಮೃತ ಹಸ್ತದಿಂದ ಷಟ್‌ಸ್ಥಳ ಬ್ರಹ್ಮೋಪದೇಶ ಪಡೆದರು. | Kannada Prabha

ಸಾರಾಂಶ

ಬಾಗಲಕೋಟೆ ಪೀಠಾಧಿಪತಿ ಎಂದರೆ ವಿಷ ಕುಡಿದ ನಂಜಿನ ಜೀವನ ಇದ್ದಂತೆ. ಸರ್ವರನ್ನೂ ಸಮಾನರನ್ನಾಗಿಸಿಕೊಂಡು ಹೋಗುವ ಹೊಣೆ ಮಠಗಳಿಗಿದ್ದು, ಮಠಕ್ಕೆ ಬರುವಾಗ ಭಕ್ತರಾಗಿ ಬನ್ನಿ ಯಾರೂ ರಾಜಕೀಯ ತೆಗೆದುಕೊಂಡು ಬರಬೇಡಿ ಎಂದು ನೂತನ ಚರಪಟ್ಟಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಗುರು ರೇವಣಸಿದ್ದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಪಿಠಾಧಿಪತಿ ಎಂದರೆ ವಿಷ ಕುಡಿದ ನಂಜಿನ ಜೀವನ ಇದ್ದಂತೆ. ಸರ್ವರನ್ನೂ ಸಮಾನರನ್ನಾಗಿಸಿಕೊಂಡು ಹೋಗುವ ಹೊಣೆ ಮಠಗಳಿಗಿದ್ದು, ಮಠಕ್ಕೆ ಬರುವಾಗ ಭಕ್ತರಾಗಿ ಬನ್ನಿ ಯಾರೂ ರಾಜಕೀಯ ತೆಗೆದುಕೊಂಡು ಬರಬೇಡಿ ಎಂದು ನೂತನ ಚರಪಟ್ಟಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಗುರು ರೇವಣಸಿದ್ದ ಸ್ವಾಮೀಜಿ ಹೇಳಿದರು.

ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಚರಂತಿಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶೂನ್ಯಪೀಠಾರೋಹಣ ಕಾರ್ಯಕ್ರಮದಲ್ಲಿ ವಿರಕ್ತಮಠದ ಜಡೆಯ ಶಾಂತಲಿಂಗೇಶ್ವರ ಲಿಂಗಹಸ್ತದಿಂದ ಚಿರಪಟ್ಟಾಧಿಕಾರ ಪಡೆದು ಶೂನ್ಯಪೀಠಾರೋಹಣ ಮಾಡಿ ಅವರು ಮಾತನಾಡಿದರು.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಟೆಂಗಿನಮಠ ಟೀಕಿನಮಠ ಸಂಪ್ರದಾಯದಿಂದ ಕೂಡಿದ ಮಠವಾಗಿದೆ. ಬ್ರಹ್ಮಜ್ಞಾನಕ್ಕಾಗಿ ಆಶ್ರಮ, ಗುರುಕುಲಗಳು ಹುಟ್ಟಿಕೊಂಡ. 19 ಮತ್ತು 20ನೇ ಶತಮಾನದ ಪೂರ್ವ ಮಠಾಧೀಶರ ಕೆಲಸವನ್ನು ಇಡೀ ಮಾನವ ಕುಲ ಮರೆಯಲು ಸಾಧ್ಯವಿಲ್ಲ. ಸಮಾಜದ ಏಳಿಗೆಗಾಗಿ, ಕಲ್ಯಾಣಕ್ಕಾಗಿ ಮಠಗಳಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಮಾನವ ಕುಲಕೋಟಿಗಾಗಿ ಬಸವಣ್ಣ, ಅಲ್ಲಮಪ್ರಭು ಅವರು ವಚನದಲ್ಲಿನ ಕಾಯಕದ ಸಾರಾಂಶ ಅರಿಯಬೇಕು. ಜಾತಿ, ಕುಲ ಬದಿಗಿಟ್ಟುಕೊಂಡು, ಇತಿಹಾಸದ ಪುಟ ಮುಂದಿನ ಪೀಳಿಗೆಗೆ ಪರಿಚಯಿಸಿ ಕೊಡಬೇಕು ಎಂದು ಹೇಳಿದರು.

ಚರಪಟ್ಟಾಧಿಕಾರ ಸಮಿತಿ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಧಿಕಾರದ ಸಂಪುಟ ಪತ್ರ ನೀಡಿ ಮಠದ ಜವಾಬ್ದಾರಿ ನೀಡಿ ಮಾತನಾಡಿ, ಪಟ್ಟಾಭಿಷೇಕ ಕಾರ್ಯಕ್ರಮದಿಂದ ಬಾಗಲಕೋಟೆಯಲ್ಲಿ ಧಾರ್ಮಿಕ ಜಾಗೃತಿಯಾಗಿದೆ. ಸಮಾಜಕ್ಕೆ ಸ್ವಾಮಿಯ ಪರಿಚಯ ಆಗಬೇಕಾದರೆ ತಪಸ್ಸು, ಪೂಜಾನಿಷ್ಠೆ, ಶಿವನಪೂಜೆ, ಅನುಷ್ಠಾನ ಮಾಡಬೇಕು. ಸ್ವಾಮಿಗಳ ಪಟ್ಟ ಧರಿಸಬೇಕಾದರೆ ಮಾತಿನ ಮೇಲೆ ಹಿಡಿತ ಮೈತುಂಬಾ ಕಣ್ಣು ಇದ್ದಾಗ ಮಾತ್ರ ಸಮಾಜದಲ್ಲಿ ನಂಬಿಕಸ್ಥ ಸ್ವಾಮಿಯಾಗಲು ಸಾಧ್ಯ ಎಂದು ಹೇಳಿದರು.

ವೇದಿಕೆ ಮೇಲೆ ಹುಬ್ಬಳ್ಳಿಯ ಎರಡೆತ್ತಿನಮಠದ ಸಿದ್ಧಲಿಂಗ ಸ್ವಾಮೀಜಿ, ಹುಬ್ಬಳ್ಳಿಯ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಗುಳೇದಗುಡ್ಡ ಮುರಾಘಾಮಠದ ಕಾಶೀನಾಥ ಸ್ವಾಮೀಜಿ, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಗುಳೇದಗುಡ್ಡ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ, ಗುರಗುಂಟಾ ಸದಾನಂದ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ದೇವರು, ಬೆಳಗಾವಿ ಕಾರಂಜಿಮಠದ ಶಿವಯೋಗಿ ದೇವರು, ಗುಣದಾಳದ ಡಾ.ವಿವೇಕಾನಂದ ದೇವರು, ಲೋಕಾಪುರದ ಚಂದ್ರಶೇಖರ ಸ್ವಾಮೀಜಿ, ಅನವಾಲದ ಕೈಲಾಸಪತಿ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಅಶೋಕ ಎಂ.ಸಜ್ಜನ. ಡಾ.ಬಸವರಜಾ ಕೆರೂಡಿ, ಅನಸೂಯಾ ಕೆರೂಡಿ ಟೀಕಿನಮಠ ಭಕ್ತ ಮಂಡಳಿಯವರು ಭಾಗವಹಿಸಿದ್ದರು.

ಷಟ್‌ಸ್ಥಲ ಬ್ರಹ್ಮೋಪದೇಶ:

ಬೆಳಗಿನ ಜಾವ ಟೀಕಿನಮಠದಲ್ಲಿ ವಿವಿಧ ಪೂಜ್ಯರ ಸಮ್ಮುಖದಲ್ಲಿ ಉತ್ತರಾಧಿಕಾರಿಯಾದ ಮಲ್ಲಿಕಾರ್ಜುನ ಸ್ವಾಮೀಜಿ ನಿಂಬಾಳ ಹಾಗೂ ಬೆಂಗಳೂರಿನ ಸಮಾಧಾನ ಆಶ್ರಮದ ಶ್ರೀಗಳಾದ ಮೌನಯೋಗಿ ಜಡೆಯ ಶಾಂತಲಿಂಗ ಸ್ವಾಮೀಜಿ ಅಮೃತ ಹಸ್ತದಿಂದ ಷಟ್‌ಸ್ಥಲ ಬ್ರಹ್ಮೋಪದೇಶವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು,

ಸಂಭ್ರಮದ ಅಡ್ಡಪಲ್ಲಕ್ಕಿ ಉತ್ಸವ: ಬೀಳೂರ ಅಜ್ಜನ ಗುಡಿಯಿಂದ ಪ್ರಾರಂಭವಾದ ಟೀಕಿನಮಠದ ಪೂಜ್ಯರಾದ ಮಲ್ಲಿಕಾರ್ಜುನ ಸ್ವಾಮೀಜಿ ಗುರು ರೇವಣಸಿದ್ದ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭವಾಗಿ ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ರಸ್ತೆ, ಪೊಲೀಸ್ ಚೌಕಿ, ಅಡತ ಬಜಾರ, ಮೂಲಕ ಟೀಕಿನಮಠಕ್ಕೆ ಸಮಾರೋಪಗೊಂಡಿತು. ಮಹಿಳೆಯರ 1008 ಕುಂಭಮೇಳ ಗಮನ ಸೆಳೆಯಿತು. ವಿವಿಧ ಸಾಂಸ್ಕತಿಕ ತಂಡಗಳು ಸೇರಿದಂತೆ ಸಹಸ್ರಾಜು ಜನ ಭಕ್ತರು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದರು.

ಗುರು ತನ್ನ ಶಕ್ತಿ ಹಾಗೂ ಸ್ಥಾನವನ್ನು ಶಿಷ್ಯನಿಗೆ ನೀಡುವುದರ ಮೂಲಕ ಶಿಷ್ಯನನ್ನು ಗುರುವಾಗಿಸುವುದು ಶೂನ್ಯ ಪೀಠಾರೋಹಣ ಆಗಿದೆ. ಎಲ್ಲವೂ ಇದ್ದು ಎಲ್ಲವನ್ನು ಸಮಾಜಕ್ಕೆ ಅರ್ಪಣೆ ಮಾಡಿ ಶೂನ್ಯಭಾವದಿಂದ ದೇವರಿಗೆ ಶರಣಾಗುವುದು. ಶೂನ್ಯಪೀಠದ ಉದ್ದೇಶವಾಗಿದ್ದು, ಗುರುವನ್ನು ಮುಟ್ಟಿ ಶಿಷ್ಯರಾಗುತ್ತಾರೆ. ಇಲ್ಲಿ ದೊಡ್ಡವರು ಚಿಕ್ಕವರು ಎಂಬ ಭೇದವಿಲ್ಲದೆ ಶರಣರೆಲ್ಲರು ಸಮಾನರಾಗುತ್ತಾರೆ. ಪಟ್ಟಾಧಿಕಾರದ ಬಳಿಕ ಈಗ ಮಲ್ಲಿಕಾರ್ಜುನ ದೇಶಿಕರು ಮಲ್ಲಿಕಾರ್ಜುನ ಸ್ವಾಮೀಜಿ ಗುರು ರೇವಣಸಿದ್ದ ಸ್ವಾಮೀಜಿ ಎಂದು ಮರುನಾಮಕರಣಗೊಂಡು ಸಮಾಜಕ್ಕಾಗಿ ಶ್ರಮಿಸಲಿದ್ದಾರೆ.

- ಡಾ. ವೀರಣ್ಣ ಚರಂತಿಮಠದ ಗೌರವಾಧ್ಯಕ್ಷರು ಪ್ರಭುಸ್ವಾಮೀಜಿ ಪಟ್ಟಾಧಿಕಾರ ಸಮಿತಿ

ಸಮಾಜವನ್ನೇ ಕುಟುಂಬ ಮಾಡಿಕೊಂಡು ಶ್ರಮಿಸುವ ಕೆಲಸ ಮಠಾಧಿಪತಿಯದಾಗಿದ್ದು, ಗುರುವಿಗಾಗಿ ಮಾಡಿದ ಶ್ರಮ ಸ್ಮರಣೀಯವಾಗಿದೆ. ಮುಡಿಗೆ ಹೂ ತಾರದೆ ಹುಲ್ಲನೆಂದು ತರಲಾರೆ. ಸಮಾಜದ ಮಗುವಾಗಿ ತಮ್ಮ ಮಧ್ಯೆ ಇದ್ದು ಸಾಮಾಜವನ್ನು ಕುಟುಂಬವಾಗಿಸಿ ಶ್ರಮಿಸುವ ಕೆಲಸ ಮಾಡುತ್ತೇನೆ. ಕಾವಿ ಜೀವನಕ್ಕೆ ಶಕ್ತಿಯಾದ ಕುಮಾರಸ್ವಾಮೀಜಿ, ಬಸವಣ್ಣ, ನಿಜಗುಣ ಸ್ವಾಮೀಜಿಗಳ ಮಾರ್ಗದಲ್ಲಿ ನಡೆದು ಟೀಕಿನಮಠ ಟೆಂಗಿನಮಠದ ಪರಂಪರೆಯನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಂಡಿದ್ದು, ಬಾಗಲಕೋಟೆ ಭಕ್ತರ ಸಹಕಾರ ಅಗತ್ಯವಿದೆ.

- ಗುರು ರೇವಣಸಿದ್ದ ಸ್ವಾಮೀಜಿ ನೂತನ ಚರಪಟ್ಟಾಧಿಕಾರಿ ಟೀಕಿನಮಠ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’