ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿನ್ನೆಲೆ ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಅದರಂತೆ ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿಯೂ ಕಾಂಗ್ರೆಸ್ ಮುಖಂಡರು ವಿಜಯೋತ್ಸವ ಆಚರಿಸಿದರು.
ಕನ್ನಡಪ್ರಭ ವಾರ್ತೆ ಅಥಣಿ
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿನ್ನೆಲೆ ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಅದರಂತೆ ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿಯೂ ಕಾಂಗ್ರೆಸ್ ಮುಖಂಡರು ವಿಜಯೋತ್ಸವ ಆಚರಿಸಿದರು.
ದೇಶದ 5 ರಾಜ್ಯಗಳ ಪೈಕಿ ಮೂರು ರಾಜ್ಯದಲ್ಲಿ ಅಧಿಕಾರಕ್ಕೆ ಹಿಡಿದಿರುವುದರಿಂದ ಅಥಣಿಯ ಬಿಜೆಪಿ ಆವರಣದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ವಿಜಯೋತ್ಸವದ ಆಚರಣೆ ಮಾಡಿದರು. ಈ ವೇಳೆ ಅಥಣಿ ಬಿಜೆಪಿ ಮಂಡಲದ ಅಧ್ಯಕ್ಷ ಗಿರೀಶ ಬುಟಾಳಿ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲವು ಸಾಧಿಸಿದ್ದು ಶ್ಲಾಘನೀಯ. ಅಸ್ಸಾಂ, ಪಾಂಡಿಚೇರಿಯಲ್ಲಿಯೂ ಮತ್ತೆ ಬಿಜೆಪಿ ಆಡಳಿತ ಮುಂದುವರೆದಿದೆ. ಬಿಜೆಪಿ ಗೆಲುವು ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಹಾಗೂ ಹುಮ್ಮಸ್ಸು ತುಂಬಿದೆ ಎಂದರು.ಮುಖಂಡ ಸಿದ್ದಪ್ಪ ಮುದಕ್ಕಣ್ಣವರ ಮಾತನಾಡಿ, ಕರ್ನಾಟಕದ ಉಪಚುನಾವಣೆಯಲ್ಲಿ ಬಿಜೆಪಿ ಸಂಘಟನೆ ಕೊರತೆಯಿಂದ ಸೋತಿದೆ. ಕಾಂಗ್ರೆಸ್ ಹಣ, ಹೆಂಡ ಹಂಚಿ ಗೆಲುವು ದಾಖಲಿಸಿದೆ. ಮುಂದಿನ ದಿನಗಳಲ್ಲಿ ಅಥಣಿ ಸೇರಿದಂತೆ ಎಲ್ಲ ಕಡೆ ಬಿಜೆಪಿ ಬಾವುಟ ಹಾರಿಸುವುದೆ ನಮ್ಮ ಉದ್ದೇಶವಾಗಬೇಕು ಎಂದರು.
ಈ ವೇಳೆ ಮಂಡಲ ಕಾರ್ಯದರ್ಶಿ ಸಂಪತಕುಮಾರ ಶೆಟ್ಟಿ, ಸಿದ್ದಪ್ಪ ಮುದಕನ್ನವರ, ಪ್ರಕಾಶ ಮೋರೆ, ವಿನಯಗೌಡ ಪಾಟೀಲ, ಬಾಹುಬಲಿ ಅಜ್ಜಪ್ಪಗೋಳ, ಶಿವಾನಂದ ಐಗಳಿ, ಸಿದ್ದು ಗದ್ಯಾಳ, ಅಭಯ ಸಗರಿ, ಶಿವಾನಂದ ಇಂಗಳಿ , ಸಿದ್ದು ಮಾಳಿ, ಮಾರುತಿ ಮೋಹಿತೆ ಸೇರಿದಂತೆ ಇತರರಿದ್ದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿದಗೆ ಸಚಿವ ಸತೀಶ ಬೆಂಬಲಿಗರ ಸಂಭ್ರಮಅಥಣಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸತೀಶ ಜಾರಕಿಹೊಳಿ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಡಿಸಿಂ ಡಿ.ಕೆ.ಶಿವಕುಮಾರ ಮಾರ್ಗದರ್ಶನದಲ್ಲಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬಾಗಲಕೋಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಅದೇ ರೀತಿ ದಾವಣಗೆರೆ ಕ್ಷೇತ್ರದಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗೆ ಗೆಲುವು ಬಂದಿದೆ. ಇದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಸಾಧನೆ ಮತ್ತು ಗ್ಯಾರಂಟಿ ಯೋಜನೆಗಳ ಪ್ರತಿಫಲವಾಗಿದೆ ಎಂದರು. ಈ ವೇಳೆ ಮುಖಂಡರಾದ ಸುನಿತಾ ಐಹೊಳೆ, ಅಸ್ಲಂ ನಾಲಬಂದ, ಸಿದ್ದಾರ್ಥ ಸಿಂಗೆ, ಆಶಾ ಪಾಟೀಲ, ರಾವಸಾಬ ಐಹೊಳೆ, ರಮೇಶ ಸಿಂದಗಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಪಂಚ್ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ತಲುಪಿರುವ ಹಿನ್ನೆಲೆಯಲ್ಲಿ ಸರ್ಕಾರದ ಮೇಲಿನ ನಂಬಿಕೆ ಹಾಗೂ ವಿಶ್ವಾಸವನ್ನು ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಮೂಲಕ ಹಾರೈಸಿದ್ದಾರೆ. ಈ ಗೆಲುವಿನ ನಗೆ ಬಿರುವಲ್ಲಿ ಯಶಸ್ವಿಯಾದ ನಮ್ಮ ನಾಯಕರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ಸತೀಶ ಜಾರಕಿಹೊಳಿ ಹಾಗೂ ಸಚಿವ ಆರ್.ಬಿ.ತಿಮ್ಮಾಪೂರ ಸಾಹೇಬರ್‌ಗೆ ಅಭಿನಂದನೆ ಸಲ್ಲಿಸುತ್ತೇನೆ.
-ಸುನಿತಾ ಐಹೊಳೆ, ಬಿಡಿಸಿಸಿ ಬ್ಯಾಂಕ್ ನಾಮನಿರ್ದೇರ್ಶಿತ ಸದಸ್ಯೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.