ಕಡ್ಡಾಯ....ಇಂದಿರಾ ವಸತಿ ನಿಲಯಕ್ಕೆ ಬಿಜೆಪಿ ನಿಯೋಗ: ಸಮಸ್ಯೆ ಪರಿಹಾರಕ್ಕೆ ಆಗ್ರಹ

KannadaprabhaNewsNetwork |  
Published : Aug 13, 2026, 01:30 AM IST
ಫೋಟೋ- ಬಿಜೆಪಿ 1 ಮತ್ತು ಬಿಜೆಪಿ 2 | Kannada Prabha

ಸಾರಾಂಶ

A delegation led by former MLA Rajkumar Patil Telkur and Kalaburagi BJP leaders visited the students of the Indira Gandhi Residential School in Mudhol village, Sedam taluk, who had fallen ill after consuming substandard food, and inquired about their well-being.

ಕನ್ನಡಪ್ರಭ ವಾರ್ತೆ ಸೇಡಂ

ಕಳಪೆ ಆಹಾರ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಸೇಡಂ ತಾಲೂಕಿನ ಮುಧೋಳ ಗ್ರಾಮದ ಇಂದಿರಾಗಾಂಧಿ ವಸತಿಶಾಲೆಯ ವಿದ್ಯಾಥಿ೯ಗಳಿಗೆ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್‌ ಹಾಗೂ ಕಲಬುರಗಿ ಬಿಜೆಪಿ ಮುಖಂಡರ ನಿಯೋಗ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿತು.

ಕಲಬುರಗಿ ಜಿಲ್ಲಾ ಬಿಜೆಪಿ ನಿಯೋಗದೊಂದಿಗೆ ವಸತಿನಿಲಯಕ್ಕೆ ಭೇಟಿ ನೀಡಿ, ಅಸ್ವಸ್ಥಗೊಂಡಿದ್ದ ವಿದ್ಯಾಥಿ೯ಗಳ ಆರೋಗ್ಯ ವಿಚಾರಿಸಿದರು. ವಸತಿನಿಲಯದ ವಾತವರಣದ ಕುರಿತು ಮಕ್ಕಳಿಂದ ಮಾಹಿತಿ ಪಡೆದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿದೆ೯ಶಕರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಮತ್ತು ಈ ಘಟನೆಗೆ ಕಾರಣರಾದವರನ್ನು ಅಮಾನತುಗೊಳಿಸಬೆಕೆಂದು ಆಗ್ರಹಿಸಿದರು.

ಸಚಿವ ಶರಣ ಪ್ರಕಾಶ ಪಾಟೀಲ್ ಅವರು ಮತಕ್ಷೇತ್ರದ ಕಡೆ ಗಮನ ಹರಿಸಬೇಕು, ಕಾಟಚಾರಕ್ಕೆ ಭೇಟಿ ನಿಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಚಿವರು ಇದರ ಪರಿಣಾಮ ಎದುರಿಸಬೆಕಾಗುತ್ತದೆ ಎಂದು ಎಚ್ಚರಿಕೆ ನಿಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಸಂಸದ ಉಮೇಶ ಜಾಧವ್, ಮಂಡಲ ಅಧ್ಯಕ್ಷ ಶರಣು ಮೆಡಿಕಲ್‌, ಮುಖಂಡರಾದ ಶರಣಪ್ಪ ತಳವಾರ, ಬಸವರಾಜ ಬೆಣ್ಣೂರಕರ್ ಸೇರಿದಂತೆ ಪಕ್ಷದ ಮುಖಂಡರು ಕಾಯ೯ಕರ್ತರು ಉಪಸ್ಥಿತರಿದ್ದರು.

ಫೋಟೋ- ಬಿಜೆಪಿ 1 ಮತ್ತು ಬಿಜೆಪಿ 2

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮನ ಅಮಾವಾಸ್ಯೆ: ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ
ಸ್ತ್ರೀಯರಿಂದ ದೇಶಕ್ಕೆ ಕೊಡುಗೆ: ಶಿವಯೋಗೀಶ್ವರ ಶ್ರೀ