ಕಾಂಗ್ರೆಸ್ ಶಾಸಕರ ಮೇಲೆ ಎಫ್‌ಐಆರ್‌ ದಾಖಲಿಸಲು ಬಿಜೆಪಿ ಒತ್ತಾಯ

KannadaprabhaNewsNetwork |  
Published : Apr 06, 2025, 01:50 AM IST
ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣದಲ್ಲಿ ವಿರಾಜಪೇಟೆ ಹಾಗೂ ಮಡೀಕೆರೆ ಶಾಸಕರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಬೇಕು ಎಂದು ಬಿಜೆಪಿ ನಗರ ಘಟಕದಿಂದ ಶಿರಸ್ತೇದಾರ್ ಹೇಮಂತ್‌ಕುಮಾರ್ ಮುಖಾಂತರ ರಾಜ್ಯಪಾಲರಿಗೆ ಮುಖಂಡರುಗಳು ಶನಿವಾರ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು: ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣದಲ್ಲಿ ವಿರಾಜಪೇಟೆ ಹಾಗೂ ಮಡೀಕೆರೆ ಶಾಸಕರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಬೇಕು ಎಂದು ಬಿಜೆಪಿ ನಗರ ಘಟಕದಿಂದ ಶಿರಸ್ತೇದಾರ್ ಹೇಮಂತ್‌ಕುಮಾರ್ ಮುಖಾಂತರ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಚಿಕ್ಕಮಗಳೂರು: ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣದಲ್ಲಿ ವಿರಾಜಪೇಟೆ ಹಾಗೂ ಮಡೀಕೆರೆ ಶಾಸಕರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಬೇಕು ಎಂದು ಬಿಜೆಪಿ ನಗರ ಘಟಕದಿಂದ ಶಿರಸ್ತೇದಾರ್ ಹೇಮಂತ್‌ಕುಮಾರ್ ಮುಖಾಂತರ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.ಈ ಕುರಿತು ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ಪರಾಜ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಹೆಚ್ಚಳಗೊಂಡಿವೆ. ಅಲ್ಲದೇ ಹಿಂದೂ ಸಮಾಜಕ್ಕೆ ಕಡೆಗಣಿಸಿ ಒಲೈಕೆ ರಾಜ ಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.ಕಾಂಗ್ರೆಸ್ ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಡಾ.ಮಂಥರಗೌಡರ ಬೆಂಬಲಿಗರ ಬೆದರಿಕೆ, ಕಿರುಕುಳದಿಂದ ಬೇಸತ್ತು ಕೊಡಗಿನ ಬಿಜೆಪಿ ಮುಖಂಡ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಶಾಸಕರೇ ಆತ್ಮಹತ್ಯೆಗೆ ನೇರ ಕಾರಣ ಮರಣಪತ್ರ ಬರೆದಿಟ್ಟರೂ ಕ್ರಮ ಕೈಗೊಳ್ಳದಿರುವುದು ದುರ್ಧೈವ ಎಂದು ಹೇಳಿದರು.ಈ ಪ್ರಕರಣದಲ್ಲಿ ಶಾಸಕರ ಹೆಸರನ್ನು ಕೈಬಿಟ್ಟು ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ನೈಜ ವಾಗಿ ಆತ್ಮಹತ್ಯೆಯಲ್ಲಿ ಶಾಸಕರ ಬೆದರಿಕೆ, ಕಿರುಕುಳ ಎಂಬುದು ಸ್ಪಷ್ಟವಾಗಿದ್ದರೂ ಶಾಸಕರ ವಿರುದ್ಧ ಎಫ್‌ಐ ಆರ್‌ನಲ್ಲಿ ಸೇರಿಸದೇ ರಾಜ್ಯಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.ಕೂಡಲೇ ರಾಜ್ಯಪಾಲರು ಶಾಸಕರು ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸದಿದ್ದರೆ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಒಬಿಸಿ ಅಧ್ಯಕ್ಷ ಸಿ.ಟಿ.ಜಯವರ್ಧನ್, ನಗರ ಉಪಾಧ್ಯಕ್ಷ ಸತೀಶ್, ವೆಂಕಟೇಶ್, ರೇವನಾಥ್, ಪ್ರಧಾನ ಕಾರ್ಯದರ್ಶಿ ಎಂ.ಜಿ. ಬಸವರಾಜ್, ಕಾರ್ಯದರ್ಶಿ ಮಧು, ಮುಖಂಡರುಗಳಾದ ಸೀತರಾಮಭರಣ್ಯ, ಚಮೀನ್ ಮತ್ತಿರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ