ವಂದೇ ಮಾತರಂ 6 ಚರಣ ಹಾಡಲು ಬಿಜೆಪಿ ಆಗ್ರಹ

KannadaprabhaNewsNetwork |  
Published : Sep 16, 2026, 01:30 AM IST
01  | Kannada Prabha

ಸಾರಾಂಶ

ದೇವನಹಳ್ಳಿ: ರಾಜ್ಯದ ಮುಖ್ಯಮಂತ್ರಿಗಳು ಹಾಗು ಗೃಹಸಚಿವರು ಭಾರತದಲ್ಲಿ ಹುಟ್ಟಿ ಭಾರತಲ್ಲಿಯೇ ಬದುಕುತ್ತಿದ್ದೇವೆ ಎಂಬುದನ್ನು ಮರೆತು ಹೊರದೇಶದವರಂತಹ ಮನಸ್ಥಿತಿ ಬೆಳೆಸಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶಗೌಡ ಹೇಳಿದರು

ದೇವನಹಳ್ಳಿ: ರಾಜ್ಯದ ಮುಖ್ಯಮಂತ್ರಿಗಳು ಹಾಗು ಗೃಹಸಚಿವರು ಭಾರತದಲ್ಲಿ ಹುಟ್ಟಿ ಭಾರತಲ್ಲಿಯೇ ಬದುಕುತ್ತಿದ್ದೇವೆ ಎಂಬುದನ್ನು ಮರೆತು ಹೊರದೇಶದವರಂತಹ ಮನಸ್ಥಿತಿ ಬೆಳೆಸಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶಗೌಡ ಹೇಳಿದರು.

ರಾಜ್ಯ ಆಡಳಿತರೂಢ ಕಾಂಗ್ರೆಸ್ ಸರ್ಕಾರ ನಾಡಿನಲ್ಲಿ ವಂದೇ ಮಾತರಂ ಗೀತೆಗೆ ಕತ್ತರಿ ಹಾಕಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಜೊತೆಗೂಡಿ ಇಲ್ಲಿನ ತಾಲೂಕು ಆಡಳಿತಸೌಧದ ಮುಂದೆ ರಾಷ್ಟ್ರಧ್ವಜ ಹಿಡಿದು ಪ್ರತಿಭಟಿಸಿ ನಂತರ ಗ್ರೇಡ್ ೨ ತಹಸೀಲ್ದಾರ್ ಜಯಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಮುಖ್ಯಮಮತ್ರಿಗಳು ಗೃಹಸಚಿವರು ಹಿಂದೂ ವಿರೋಧಿ, ದೇಶವಿರೋಧಿ ಆರ್‌ಎಸ್‌ಎಸ್ ವಿರೋಧಾ ಭಾವನೆ ಅನುಸರಿಸುವುದನ್ನು ಬಿಡಬೇಕು. ವಂದೇ ಮಾತರಂ ಸಂಪೂರ್ಣ ಅರ್ಥ ಮಾಡಿಕೊಳ್ಳಬೇಕು. ಅದು ಭಾತಮಾತೆಯ ಅಖಂಡ ವೈಭವ ವರ್ಣಿಸಿ ನಮಿಸುವ ಗೀತೆಯಾಗಿದೆ. ಅಂತಹ ಗೀತೆಯನ್ನು ಮೊಟಕುಗೊಳಿಸಿ ೨ ಸಾಲಿಗೆ ಸೀಮಿತಗೊಳಿಸಿರುವ ಕ್ರಮ ಖಂಡಿಸಿ 6 ಚರಣಗಳನ್ನು ಹಾಡಲು ಅವಕಾಶ ಮಾಡಿಕೊಡಬೇಕು ಎಂದರು.

ಬಿಜೆಪಿ ಜಿಲ್ಲಾ ಉಸ್ತುವಾರಿ ಬ್ಯಾಡರಂಗೇಗೌಡ ಮಾತನಾಡಿ, ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಖರ್ಗೆಯವರು ವಂದೇ ಮಾತರಂ ಕಡಿತ ಮಾಡಲು ಹೊರಟು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ವಂದೇ ಮಾತರಂ ಸರ್ಕಾರಿ ಖಾಸಗಿ ಶಾಲಾ ಕಾಲೇಜು ಸಮಾರಂಭಗಳಲ್ಲಿ 6 ಚರಣಗಳನ್ನು ಹಾಡಲು ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತದೊಂದಿಗೆ ಅಂಗೀಕಾರವಾಗಿ ಆದೇಶವಾಗಿದ್ದರೂ ಇವರು ಮಾತ್ರ ೫೪೪ ಸಂಸತ್ ಸದಸ್ಯರ ಒಪ್ಪಿಗೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ರಾಷ್ಟ್ರವಿರೋಧಿ ನೀತಿ ಅನುಸರಿಸುವುದು ಸರಿಯಲ್ಲ. ಈ ಆದೇಶವನ್ನು ಕೂಡಲೇ ಹಿಂಪಡೆಯದಿದ್ದಲ್ಲಿ, ೨೦೨೮ಕ್ಕೆ ಜನರೇ ನಿಮಗೆ ತಕ್ಕ ಪಾಠ ಕಲಿಸಿ ಮನಗೆ ಕಳುಹಿಸುತ್ತಾರೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗವೇಣಿ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬುಳ್ಳಳ್ಳಿ ಎಂ. ರಾಜಪ್ಪ, ಎಸ್ಟಿ ಮೋರ್ಚಾ ಮನಿಕೃಷ್ಣಪ್ಪ, ಕಚೇರಿ ಕಾರ್ಯದರ್ಶಿ ದೇ.ಸೂ. ನಾಗರಾಜ್, ತಾಲೂಕು ಮಹಿಳಾ ಅಧ್ಯಕ್ಷೆ ವಿಜಯ ರಾಘವೇಂದ್ರ , ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಮನೋಜ್, ಉಪಾಧ್ಯಕ್ಷ ಮುಂತಾದವರಿದ್ದರು.

೧೫ ದೇವನಹಳ್ಳಿ ಚಿತ್ರಸುದ್ದಿ:

ದೇವನಹಳ್ಳಿ ತಾಲೂಕು ಕಚೇರಿ ಮುಂದೆ ವಂದೇ ಮಾತರಂಗೆ ಕತ್ತರಿ ಹಾಕಿರುವುದನ್ನು ವಿರೋಧಿಸಿ ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಜಯಕುಮಾರ್‌ಗೆ ಮನವಿ ಪತ್ರ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದು ವಾರದ ಗಣೇಶೋತ್ಸವಕ್ಕೆ ಶಾಸಕ ಉದಯ್‌ ಚಾಲನೆ
ನಾಗರಕಲ್ಲಿಗೆ ತನಿ ಅರ್ಪಿಸಿ ಸಿಎಂ ಪತ್ನಿ ಉಷಾ