ಧಾರವಾಡ:
ನಗರದ ಹಳೇಬಸ್ ನಿಲ್ದಾಣ ಹತ್ತಿರದ ಮಹಾರಾಣಾ ಪ್ರತಾಪ್ ಸಿಂಹ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಮುಖಂಡರು, ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ರಾಜ್ಯ ಸರ್ಕಾರ ಬೆಲೆ ಏರಿಸುವ ಮೂಲಕ ಬಡ, ಮಧ್ಯಮ ವರ್ಗದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನಹರಿಸದೇ ಬರೀ ಜನರ ಹಣ ಲೂಟಿ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಜನಸಾಮಾನ್ಯರು ಬಳಸುವ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಜತೆಗೆ ಸರ್ಕಾರ ತನ್ನ ಜವಾಬ್ದಾರಿ ಮರೆತು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ, ಇನ್ನು ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಮುದ್ರಾಂಕ ಶುಲ್ಕ ಹೆಚ್ಚಳ ಮಾಡುವ ಆಲೋಚನೆ ಸರ್ಕಾರದ್ದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಮೇಯರಗಳಾದ ಶಿವು ಹಿರೇಮಠ, ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯರಾದ ಮಂಜುನಾಥ ಬಟ್ಟೆಣ್ಣವರ, ನೀಲಮ್ಮ ಅರವಾಳದ, ಚಂದ್ರಕಲಾ ಕೊಟಬಾಗಿ, ಸುರೇಶ ಬೇದರೆ, ಶಂಕರ ಶೆಳಕೆ, ವಿಜಯಾನಂದ ಶೆಟ್ಟಿ, ಬಸವರಾಜ ಗರಗ, ಸಂಜಯ ಕಪಟಕರ, ಚಂದ್ರಶೇಖರ ಮನಗುಂಡಿ, ರಾಜೇಶ ಕೋಟೆಣ್ಣವರ, ಮಂಜುನಾಥ ಮಲ್ಲಿಗವಾಡ, ರೂಪ ಚೌಧರಿ, ಮಾಲತಿ ಹುಲಕೋಟಿ, ಶಕ್ತಿ ಹಿರೇಮಠ, ಅಮಿತ್ ಪಾಟೀಲ, ಎಸ್.ಎನ್. ಮಹಾಜನಶೇಟ್, ಪ್ರಮೋದ ಕಾರಕೂನ, ಸುನೀಲ ಮೋರೆ, ಕರೆಪ್ಪ ಸುಣಗಾರ, ದೇವರಾಜ ಶಹಪೂರ, ಬಸವರಾಜ ರುದ್ರಾಪೂರ, ಮಕ್ತುಂ ಲಷ್ಕರಿ, ನಾಗರಾಜ ನಾಯಕ ಇತರರಿದ್ದರುಅಳ್ನಾವರ:
ರಾಜ್ಯದಲ್ಲಿ ಹಾಲು ಮತ್ತು ಬಸ್ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಬಿಜೆಪಿ ಮುಖಂಡರಾದ ಶಿವಾಜಿ ಡೊಳ್ಳಿನ, ನಾರಾಯಣ ಮೋರೆ, ಲಿಂಗರಾಜ ಮೂಲಿಮನಿ, ಲಖನ ಬರಗುಂಡಿ, ಪ್ರವೀಣ ಪವಾರ, ಸಂದೀಪ ಪಾಟೀಲ. ಪರಶುರಾಮ ರೇಡೆಕರ, ಸಚಿನ ಲಿಂಗನಮಠ, ಪರಶುರಾಮ ಪಾಲಕಾರ ಇದ್ದರು.