ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ:
ಮಹಿಳೆಯರ ಅಭಿವೃದ್ಧಿಯಲ್ಲಿ ನೀಡಿದ ಅಮೋಘ ಸೇವೆ ಗುರುತಿಸಿ ರಾಜ್ಯ ಸರ್ಕಾರ ಕಲಾ ಕ್ಷೇತ್ರದಲ್ಲಿ (ವ್ಯಕ್ತಿ) ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಅರುಣೋದಯ ಕಲಾತಂಡದ ಅಧ್ಯಕ್ಷೆ ಆಲದಹಳ್ಳಿ ಮಂಜುಳಾ ಅವರಿಗೆ ನೀಡಿದೆ.ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಂಗಳೂರಿನ ಕಲಾ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಲದಹಳ್ಳಿ ಮಂಜುಳಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಪ್ರಶಸ್ತಿ ಪುರಸ್ಕಾರ ಪಡೆದ ಮಂಜುಳಾ ಅವರನ್ನು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಸಿದ್ದಲಿಂಗು, ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಹುರಗಾಲವಾಡಿ ರಾಮಯ್ಯ, ಕಲಾವಿದರಾದ ಕೂಡಲಕುಪ್ಪೆ ಸೋಮಶೇಖರ್, ವನಿತ, ರಾಜೇಶ್, ಧನಂಜಯ, ರತ್ನಮ್ಮ, ದೇವರಾಜು, ಅರುಣ, ಅನುಷಾ, ನಟರಾಜ್, ಪುಣ್ಯ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.ಲಕ್ಷ್ಮೀಪುರ ಗ್ರಾಪಂಗೆ ಚಂದ್ರಕಲಾ ಉಪಾಧ್ಯಕ್ಷೆ
ಕಿಕ್ಕೇರಿ:ಲಕ್ಷ್ಮೀಪುರ ಗ್ರಾಪಂ ನೂತನ ಉಪಾಧ್ಯಕ್ಷರಾಗಿ ಚಂದ್ರಕಲಾ ಶಿವಣ್ಣ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಂದ್ರಕಲಾರನ್ನು ಹೊರತು ಪಡಿಸಿ ಬೇರೆ ಸದಸ್ಯರು ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಸಿಡಿಪಿಒ ಅರುಣಕುಮಾರ್ ಪ್ರಕಟಿಸಿದರು. ಸಹಾಯಕ ಚುನಾವಣಾಧಿಕಾರಿಗಳಾಗಿ ಪಿಡಿಒ ಸುರೇಂದ್ರಬಾಬು ಇದ್ದರು.ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಶ್ರೀಧರ್, ರಾಜಶೇಖರ್, ಬಸವರಾಜು, ಉಮೇಶ್, ಸ್ವಾಮಿ, ಮಮತಾ, ಪುಷಲತಾ, ಅನಿತಾ, ಮಂಜುಳಾ, ಶ್ವೇತಾ, ಮುಖಂಡರಾದ ತುಳಸಿ ರಮೇಶ್, ರಘು, ಕನಕ, ಅಶೋಕ್, ಕಾರ್ಯದರ್ಶಿ ಯೋಗೇಶ್, ಶ್ರೀಧರ್ ಇದ್ದರು.