ಲೋಕಸಭಾ ಚುನಾವಣೆಗೆ ಬಿಜೆಪಿ ಸಜ್ಜು: ಉಡುಪಿ ಜಿಲ್ಲೆಗೆ ಪ್ರಭಾರಿ, ಸಂಚಾಲಕರ ನೇಮಕ

KannadaprabhaNewsNetwork |  
Published : Feb 15, 2024, 01:33 AM IST
11 | Kannada Prabha

ಸಾರಾಂಶ

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ ಇಂದು ಸಂಜೆ ಗಂಟೆ 5.30ಕ್ಕೆ ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯ ಬಳಿ, ಮಾಂಡವಿ ಟ್ರೇಡ್‌ ಸೆಂಟರ್‌ನ ತಳ ಅಂತಸ್ತಿನಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಲೋಕಸಭಾ ಚುನಾವಣೆಯ ಪ್ರಯುಕ್ತ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಭಾರಿಗಳು ಮತ್ತು ಸಂಚಾಲಕರನ್ನು ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ನೇಮಕ ಮಾಡಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ನಯನಾ ಗಣೇಶ್ (ಪ್ರಭಾರಿ), ಸತೀಶ್ ಪೂಜಾರಿ (ಸಂಚಾಲಕರು), ಉಡುಪಿ ಕ್ಷೇತ್ರಕ್ಕೆ ರಾಜೇಶ್ ಕಾವೇರಿ (ಪ್ರಭಾರಿ), ಗಿರೀಶ್ ಎಂ. ಅಂಚನ್ (ಸಂಚಾಲಕರು), ಕಾಪು ಕ್ಷೇತ್ರಕ್ಕೆ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು (ಪ್ರಭಾರಿ), ಮುರಳೀಧರ ಪೈ (ಸಂಚಾಲಕರು), ಕಾರ್ಕಳ ಕ್ಷೇತ್ರಕ್ಕೆ ಶ್ಯಾಮಲಾ ಎಸ್. ಕುಂದ‌ರ್ (ಪ್ರಭಾರಿ), ಮಣಿರಾಜ್ ಶೆಟ್ಟಿ (ಸಂಚಾಲಕರು) ಅವರನ್ನು ನೇಮಿಸಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಇಂದು ಕಚೇರಿ ಉದ್ಘಾಟನೆ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ ಇಂದು ಸಂಜೆ ಗಂಟೆ 5.30ಕ್ಕೆ ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯ ಬಳಿ, ಮಾಂಡವಿ ಟ್ರೇಡ್‌ ಸೆಂಟರ್‌ನ ತಳ ಅಂತಸ್ತಿನಲ್ಲಿ ನಡೆಯಲಿದೆ. ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಇವರ ಅಧ್ಯಕ್ಷತೆಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರಭಾರಿ ಅರಗ ಜ್ಞಾನೇಂದ್ರ ಅವರು ಚುನಾವಣಾ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸಹಿತ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?