ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿನ ಖಾನಾದಳ ಹಾಗೂ ಪಟ್ಟಣ ಸರ್ಕಲ್ ನಲ್ಲಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ. ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಸಂಸದ ಉಮೇಶ ಜಾಧವ ಬಾಯಿ ಬಿಟ್ಟಿಲ್ಲ ಎಂದು ಅಲ್ಲಮ ಪ್ರಭು ಟೀಕಿಸಿದರು.ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ ಎಲ್ಲರೂ ಮತ ಹಾಕಿ ಗೆಲ್ಲಿಸಿದರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸೋದಾಗಿ ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ನಿಮ್ಮ ಮನೆಗೆ ತಲುಪಿಸಿದ್ದೇವೆ. ಕೆಲಸ ಮಾಡಿದ್ದೇವೆ ಅದಕ್ಕೆ ಕೂಲಿ ಕೊಡಿ ಎಂದು ವಿನಂತಿಸುತ್ತಿದ್ದೇವೆ ಎಂದರು.
ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ರಾಜಗೋಪಾಲರೆಡ್ಡಿ, ಪವನ ವಳಕೇರಿ, ಚಂದ್ರಲಾಪರಮೇಶ್ವರಿ, ಮಜರ್ ಖಾನ್, ಪ್ರವೀಣ್ ಹರವಾಳ, ಫಾರೂಕ್‌ಸೇಟ್ ಸೇರಿದಂತೆ ಹಲವರಿದ್ದರು.