ಗೂಂಡಾ, ಅಕ್ಕಿಗಳ್ಳರನ್ನುಪಲ್ಲಕ್ಕಿ ಮೇಲೆ ಕೂರಿಸಿದ್ದು ಬೆಜೆಪಿ

KannadaprabhaNewsNetwork |  
Published : Dec 30, 2024, 01:02 AM IST
ಫೋಟೋ- ಕಾಂಗ್ರೆಸ್‌ 1 ಮತ್ತು ಕಾಂಗ್ರೆಸ್‌ 2ಕಲಬುರಗಿ ಜಿಲ್ಲಾ ಕಾಂಗ್ರೆಸ್‌ ಸುದ್ದಿಗೋಷ್ಠಿ ನೋಟ | Kannada Prabha

ಸಾರಾಂಶ

ಅಕ್ಕಿ ಕಳ್ಳತನ, ಗೂಂಡಾಗಿರಿಯಲ್ಲಿ ತೊಡಗಿದವನನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರೆಸುವ ಮೂಲಕ ಕಲಬುರಗಿಯನ್ನು ಮಾಫಿಯಾ ಅಡ್ಡೆಯನ್ನಾಗಿಸುವ ಪ್ರಯತ್ನವನ್ನು ಯಶಸ್ವಿಯಾಗದಂತೆ ತಡೆಯೊಡ್ಡಿರುವುದು ಬಿಜೆಪಿಗೆ ಮತ್ತು ಬಿಜೆಪಿಯ ಡ್ರಾಮಾ ಸೇನೆಗೆ ತಲೆಬಿಸಿಯಾಗಿ ಪರಿಣಮಿಸಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಗೆ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಎಕ್ಸ್‌ ಖಾತೆಯ ಟ್ರೋಲ್‌ ಮಿನಿಸ್ಟರ್‌ ಪೋಸ್ಟ್‌ಗೆ ಪ್ರಿಯಾಂಕ್ ಖರ್ಗೆ ಎದಿರೇಟು । ಮಾಡಿದ ಆರೋಪ ಇಟ್ಟುಕೊಂಡು ಗೇಲಿಕನ್ನಡಪ್ರಭ ವಾರ್ತೆ ಕಲಬುರಗಿ

ಅಕ್ಕಿ ಕಳ್ಳತನ, ಗೂಂಡಾಗಿರಿಯಲ್ಲಿ ತೊಡಗಿದವನನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರೆಸುವ ಮೂಲಕ ಕಲಬುರಗಿಯನ್ನು ಮಾಫಿಯಾ ಅಡ್ಡೆಯನ್ನಾಗಿಸುವ ಪ್ರಯತ್ನವನ್ನು ಯಶಸ್ವಿಯಾಗದಂತೆ ತಡೆಯೊಡ್ಡಿರುವುದು ಬಿಜೆಪಿಗೆ ಮತ್ತು ಬಿಜೆಪಿಯ ಡ್ರಾಮಾ ಸೇನೆಗೆ ತಲೆಬಿಸಿಯಾಗಿ ಪರಿಣಮಿಸಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಗೆ ವಾಗ್ದಾಳಿ ನಡೆಸಿದ್ದಾರೆ.ತಮ್ಮ ವಿರುದ್ಧ ರಾಜ್ಯ ಬಿಜೆಪಿ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ರೋಲ್‌ ಮಿನಿಸ್ಟರ್‌ ಎಂದು ಪ್ರಿಯಾಂಕ್‌ ವಿರುದ್ಧ ಆರೋಪ ಮಾಡಿ ಪೋಸ್ಟ್‌ ಮಾಡಿತ್ತು. ಈ ಪೋಸ್ಟ್‌ಗೆ ಟ್ಯಾಗ್‌ ಮಾಡಿ ಪ್ರಿಯಾಂಕ್‌ ಖರ್ಗೆ ಬಿಜೆಪಿ ಪಕ್ಷದ ಮುಖಂಡರಿಗೇ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ಕಾಲೆಳೆದಿದ್ದಾರೆ. ಬಿಜೆಪಿ ಮಾಡಿರುವ ಆರೋಪಗಳಿಗೆ ಒಂದೊಂದಾಗಿ ಉತ್ತರಿಸುತ್ತ ಗೇಲಿ ಮಾಡಿದ್ದಾರೆ.

ಮಣಿಕಂಠ ರಾಠೋಡ ಹೆಸರನ್ನು ಪ್ರಸ್ತಾಪಿಸದೇ ಚಿತ್ತಾಪುರದ ನಿಮ್ಮ ಘನ ಅಭ್ಯರ್ಥಿಯು ರೌಡಿಸಂ, ಗೂಂಡಾಗಿರಿಗೆ ಹೆಸರುವಾಸಿಯಾದವನು ಅಲ್ಲವೇ? ಎಂದು ಪ್ರಶ್ನಿಸಿ ಮಾತಿನಲ್ಲೇ ಚುಚ್ಚಿದ್ದಾರೆ. ಅಕ್ಕಿ ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡಿರುವ ನಿಮ್ಮ ಅಭ್ಯರ್ಥಿಯ ಮೇಲೆ, ನಿಮ್ಮದೇ ಆಡಳಿತದಲ್ಲಿ ಮೂವತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ನಿಮ್ಮ ಮಾಜಿ ಮುಖ್ಯಮಂತ್ರಿಗಳು, ನಿಮ್ಮ ಮಹಾನ್ ನಾಯಕರುಗಳು ಇದೇ ಅಕ್ಕಿ ಕಳ್ಳನ ಪರ ಚುನಾವಣಾ ಪ್ರಚಾರ ಮಾಡಿದ್ದರಲ್ಲವೇ? ಬಡವರ ಅಕ್ಕಿಯನ್ನಷ್ಟೇ ಅಲ್ಲ, ಅಂಗನವಾಡಿ ಮಕ್ಕಳ ಪಾಲಿನ ಪೌಷ್ಟಿಕ ಆಹಾರವನ್ನೂ ದೋಚಿರುವ ನಿಮ್ಮ ಘನ ಅಭ್ಯರ್ಥಿ ಇತ್ತೀಚಿಗೆ ಎರಡು ತಿಂಗಳು ಜೈಲಿಗೆ ಹೋಗಿ ಬಂದಿದ್ದಾನಲ್ಲವೇ? ಎಂದೂ ಲೇವಡಿ ಮಾಡಿದ್ದಾರ

ಕಲಬುರಗಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆಯ ರೂವಾರಿಗಳು ಯಾರು ಎಂಬ ಪ್ರಶ್ನೆಗೆ ನಿಮ್ಮದೇ ಪಕ್ಷದ ಶಾಸಕನ ಬಳಿ ಉತ್ತರ ಕೇಳಿ ನೋಡಿ ಎಂದು ಛೇಡಿಸುವ ಮೂಲಕ ಬಿಜೆಪಿಯ ಹಾಲಿ ಶಾಸಕರತ್ತಲೇ ಬೆರಳು ತೋರಿಸುತ್ತ ಹೇಳಿಕೆಯಲ್ಲಿ ನೇರವಾಗಿ ಛೇಡಿಸಿದ್ದಾರೆ. ಪೊಲೀಸ್ ಪೇದೆಯ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿದ ಅಕ್ರಮ ಮರಳು ದಂಧೆಕೋರ ಬಿಜೆಪಿ ಕಾರ್ಯಕರ್ತ ಎಂಬ ಸತ್ಯವನ್ನು ಬಿಜೆಪಿ ಮರೆತಿದೆಯೇ ಅಥವಾ ಮರೆಸಲು ಪ್ರಯತ್ನಿಸುತ್ತಿದೆಯೇ? ಎಂದು ತಮ್ಮ ಮೇಲಿನ ಆರೋಪಗಳನ್ನು ಸಾರಾಸಾಗಾಟಿ ತಳ್ಳಿ ಹಾಕಿದ್ದಾರೆ.

ನಕಲಿ ಸ್ವಾಮಿಯೊಬ್ಬನನ್ನು ಮುಂದಿಟ್ಟುಕೊಂಡು ಕಲಬುರಗಿಯಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ದುರಾವಸ್ಥೆಗೆ ತಲುಪಿರುವ ಬಿಜೆಪಿ ಆರಾಜಕತೆ ಸೃಷ್ಟಿಸಿ ತಮ್ಮ ಬೇಳೆ ಬೇಯಿಸುವ ಪ್ರಯತ್ನದಲ್ಲಿದೆ ಎಂದಿರುವ ಪ್ರಿಯಾಂಕ್‌ ಖರ್ಗೆ ಕಲಬುರಗಿ ಎಂದಿಗೂ ಕಲ್ಯಾಣದ ನಾಡಾಗಿರುತ್ತದೆಯೇ ಹೊರತು ಬಿಜೆಪಿಯ ಗೂಂಡಾಗಿರಿಯ ಕೊಂಪೆಯಾಗಲು ಸಾಧ್ಯವಿಲ್ಲ. ಕಲಬುರಗಿಯ ಜನತೆ ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲವೆಂದು ಗುಡುಗಿದ್ದಾರೆ.ಪ್ರಿಯಾಂಕ್‌ ಬೆಂಬಲಕ್ಕೆ ನಿಂತ ಜಿಲ್ಲಾ ಕಾಂಗ್ರೆಸ್‌ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿಯವರು ರಾಜೀನಾಮೆ ಕೇಳುತ್ತಿರುವ ಸಂದರ್ಭದಲ್ಲೇ ಬಿಜೆಪಿಯ ಈ ನಡೆಯನ್ನು ಖಂಡಿಸಿರುವ ಜಿಲ್ಲಾ ಕಾಂಗ್ರೆಸ್‌ ಕಮಿಟಿ, ಮಾತೆತ್ತಿದರೆ ಪ್ರಿಯಾಂಕ್‌ ಮಂತ್ರ ಜಪಿಸುವ ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ಯಾರದ್ದೋ ಒಬ್ಬರ ರಾಜೀನಾಮೆಗೆ ಸದಾ ಯತ್ನಿಸುತ್ತಿರುತ್ತದೆ ಎಂದು ಜರಿದಿದೆ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಎಂಎಲ್‌ಸಿ ಜಗದೇವ ಗುತ್ತೇದಾರ ಕಾಳಗಿ, ಶಾಸಕರಾದ ಎಂ.ವಾಯ್. ಪಾಟೀಲ, ಅಲ್ಲಮಪ್ರಭು ಪಾಟೀಲ, ಎಂಎಲ್‌ಸಿ ತಿಪ್ಪಣ್ಣಪ್ಪ ಕಾಮಕನೂರ ಜಂಟಿಯಾಗಿ ತುರ್ತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತ ಸದಾ ಪ್ರಿಯಾಂಕ್‌ ಅವರನ್ನೇ ಟಾರ್ಗೆಟ್‌ ಮಾಡಿ ರಾಜೀನಾಮೆ ಕೇಳುವ ಬಿಜೆಪಿಯ ಧೋರಣೆ ಸರಿಯಲ್ಲ ಎಂದು ಟೀಕಿಸಿದರು.ರಾಜು ಕಪನೂರ್‌ ಕಾಂಗ್ರೆಸ್‌ ಕಾರ್ಯಕರ್ತ. ಅವರ ಸಹೋದರ ಪ್ರಕಾಶ ಕಾಂಗ್ರೆಸ್ಸಿಂದಲೇ ಪಾಲಿಕೆ ಸದಸ್ಯರಾಗಿದ್ದಾರೆ. ನಾವು ಅವರು ನಮ್ಮವರಲ್ಲ ಅಂತ ಹೇಳೋದಿಲ್ಲ. ಆದರೆ ಫೋಟೋದಲ್ಲಿದ್ದಾರೆಂಬ ಕಾರಣಕ್ಕೆ ಆಪ್ತರೆನ್ನಲಾಗದು. ಬಿಜೆಪಿ ಇಂತಹದ್ದನ್ನೇ ದೊಡ್ಡದಾಗಿ ಮಾಡುತ್ತಿದೆ. ಇದನ್ನು ಖಂಡಿಸುತ್ತೇವೆಂದು ಜಗದೇವ ಗುತ್ತೇದಾರ್‌ ಹೇಳಿದರು.ಮುಖಂಡರಾದ ರಾಜಗೋಪಾಲರೆಡ್ಡಿ ಮುದಿರಾಜ್‌, ಡಾ. ಕಿರಣ ದೇಶಮುಖ್‌, ಹೊನಗುಂಟಿ, ಈರಮ್ಣ ಝಳಕಿ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.ಬಿಜೆಪಿಯವರ ಕಾಲದಲ್ಲೇ ಗೂಂಡಾಗಳು ಹೆಚ್ಚು ಹುಟ್ಟಿಕೊಂಡದ್ದು. ಇದನ್ನು ಮೊದಲು ಬಿಜೆಪಿ ಅರಿತು ಬೇರೊಬ್ಬರತ್ತ ಬೆರಳು ತೋರಿಸಲಿ. ಖರ್ಗೆ ಕುಟುಂಬ ಎಲ್ಲರನ್ನು ಪ್ರೀತಿಸುತ್ತದೆ. ಈಗ ಬಿಜೆಪಿ ಬೀದರ್‌ನ ಗುತ್ತಿಗೆದಾರನ ಪ್ರಕರಣ ಹಿಡಿದುಕೊಂಡು ಆರೋಪ ಮಾಡುತ್ತಿದೆ. ಮೊದಲು ವಿಷಯ ಅರಿತು ಮಾತನಾಡಲಿ. ಪ್ರಿಯಾಂಕ್‌ ಖರ್ಗೆ ದೂರದೃಷ್ಟಿ ಇರುವ ನಾಯಕರಾಗಿ ಬೆಳೆಯುತ್ತಿರೋದಕ್ಕೆ ಬಿಜೆಪಿಗೆ ಹೊಟ್ಟೆಕಿಚ್ಚು. ಅದಕ್ಕೆಂದೇ ಸಲ್ಲದ ಆರೋಪ ಮಾಡುತ್ತಿದೆ.ತಿಪ್ಪಣ್ಣಪ್ಪ ಕಮಕನೂರ್‌, ಹಿರಿಯ ಎಂಎಲ್‌ಸಿ, ಕಲಬುರಗಿ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ