ಕೊಡಗು-ಮೈಸೂರಿನಲ್ಲಿ ಬಿಜೆಪಿ ಹ್ಯಾಟ್ರಿಕ್‌ ವಿಜಯ: ಯದುವೀರ್ ಒಡೆಯರ್ ಅಭೂತವೂರ್ವ ಗೆಲವು

KannadaprabhaNewsNetwork |  
Published : Jun 05, 2024, 12:30 AM IST
32 | Kannada Prabha

ಸಾರಾಂಶ

ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ವಿರುದ್ಧ 1,39,262 ಮತಗಳ ಅಂತರದಿಂದ ಜಯ ಗಳಿಸಿದರು. ಆ ಮೂಲಕ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಗೆಲವು ಸಾಧಿಸಿ ತನ್ನ ಸ್ಥಾನ ಉಳಿಸಿಕೊಂಡಿದೆ.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 7,95,503 ಮತಗಳಿಂದ ಅಭೂತಪೂರ್ವ ಜಯ ದಾಖಲಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ವಿರುದ್ಧ 1,39,262 ಮತಗಳ ಅಂತರದಿಂದ ಜಯ ಗಳಿಸಿದರು. ಆ ಮೂಲಕ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಗೆಲವು ಸಾಧಿಸಿ ತನ್ನ ಸ್ಥಾನ ಉಳಿಸಿಕೊಂಡಿದೆ.

ಕಾಂಗ್ರೆಸ್‌ನ ಎಂ. ಲಕ್ಷ್ಮಣ್ 6,56,241 ಮತಪಡೆದು ಪರಾಭವಗೊಂಡರೆ, ಮೂರನೇ ಸ್ಥಾನದಲ್ಲಿ ನೋಟಾ ಮತ ಚಲಾವಣೆಯಾಗಿದೆ. ಒಟ್ಟಾರೆ 4,490 ಮಂದಿ ನೋಟ ಮತ ಚಲಾಯಿಸಿದ್ದಾರೆ.

ಹಾಲಿ ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ ಯದುವೀರ್ ಅವರಿಗೆ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆಯೇ ಲೆಕ್ಕಾಚಾರ ತಲೆ ಕೆಳಗಾಗಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯಾರು ಬೇಕಾದರೂ ಗೆಲ್ಲಬಹುದು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಆದರೆ ರಾಜಮನೆತನದ ಬಗ್ಗೆ ಗೌರವ ಮತ್ತು ಯುವ ಅಭ್ಯರ್ಥಿಯಾದ ಯದುವೀರ್‌ಗೆ ಮತದಾರರು ಬೆಂಬಲವಾಗಿ ನಿಂತರು. ಅಲ್ಲದೆ ಕಳೆದೆರಡು ಚುನಾವಣೆಗಳಲ್ಲಿ ಪರೋಕ್ಷವಾಗಿ ಬಿಜೆಪಿಯ ಪ್ರತಾಪ್ ಸಿಂಹ ಅವರನ್ನು ಬೆಂಬಲಿಸಿದ್ದ ಜೆಡಿಎಸ್ ಈ ಬಾರಿ ಮೈತ್ರಿ ಕಾರಣಕ್ಕಾಗಿ ನೇರವಾಗಿ ಬೆಂಬಲಿಸಿದ್ದು ಗೆಲವಿಗೆ ಪೂರಕವಾಗಿದೆ.

ನಂತರದ ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿ ಎಂ. ರಂಗಸ್ವಾಮಿ 4,306, ಎಂ. ರಾಮಮೂರ್ತಿ 3,605, ರಾಜು 1949, ಪ್ರಜಾಕೀಯ ಲೀಲಾ ಶಿವಕುಮಾರ್, ಟಿ.ಆರ್. ಸುನಿಲ್ 1,560, ಎಚ್.ಕೆ. ಕೃಷ್ಣ 1489, ಹರೀಶ್ ಗೌಡ 976, ಪಿ.ಎಸ್. ಯಡೂರಪ್ಪ 878, ಸಿ.ಜೆ. ಅಂಬೇಡ್ಕರ್ 835, ದರ್ಶನ್‌ ಕೆ. ಪೊನ್ನೇತಿ 764, ಎಂ.ಎಸ್. ಪ್ರವೀಣ್ 740, ಡಾ.ಎಚ್.ಎಂ. ಮಂಜುನಾಥಸ್ವಾಮಿ 523 ಮತ್ತು ಎ.ಜಿ. ರಾಮಚಂದ್ರರಾವ್ 490 ಮತ ಪಡೆದರು.ಕ್ಷೇತ್ರದಲ್ಲಿ ಒಟ್ಟಾರೆ 14,79,983 ಮತ ಚಲಾವಣೆಯಾಗಿದ್ದು, 833 ಮತ ತಿರಸ್ಕೃತಗೊಂಡಿವೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ