ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ತಾಲೂಕಿನ ಚಳಗೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ಲೋಕಸಭಾ ಚುನಾವಣಾ ಪ್ರಚಾರ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಮಾತನಾಡಿದರು.
ಬಿಜೆಪಿ ಕೇವಲ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಆ ಪಕ್ಷಕ್ಕೆ ಜನರ ಬಳಿ ಮತ ಕೇಳಲು ಯಾವುದೇ ವಿಷಯಗಳಿಲ್ಲ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ್ದೇವೆ ಎಂದು ಬೀಗುತ್ತಿದೆ. ನಮ್ಮ ಕಾಂಗ್ರೆಸ್ ಪಕ್ಷದಲ್ಲೂ ರಾಮನ ಭಕ್ತರಿದ್ದಾರೆ. ಆದರೆ, ಅವರ‍್ಯಾರೂ ರಾಮನನ್ನು ರಾಜಕಾರಣಕ್ಕೆ ಬಳಸಿಕೊಳಲ್ಲ. ವಿಶೇಷವಾಗಿ, ಗ್ರಾಮದ ವಾಲ್ಮೀಕಿ, ಲಿಂಗಾಯತ, ಮರಾಠಾ, ಕುರುಬ ಮತ್ತು ಮುಸಲ್ಮಾನರು ಸಂಗ್ರಹಿಸಿದ ವಂತಿಗೆಯಿಂದ ರಾಮ ಮಂದಿರ ನಿರ್ಮಿಸಿ ನಮ್ಮ ನೆಲದ ಬಾವೈಕ್ಯ ಪ್ರದರ್ಶಿಸಿರುವುದು ನಾಡಿನ ಹೆಮ್ಮೆ. ಜೊತೆಗೆ ಕಾಂಗ್ರೆಸ್ ಪಕ್ಷವೂ ಸಹಿತ ಎಲ್ಲ ಸಮುದಾಯಗಳನ್ನು ಸಮಭಾವದಿಂದ ಕಾಣುತ್ತದೆ ಎಂದರು.ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಮ್ಮ ಬಳಿ ಬಂದು ಇದು ನನ್ನ ಕೊನೆಯ ಚುನಾವಣೆ. ದಯವಿಟ್ಟು ನನ್ನನ್ನು ಗೆಲ್ಲಿಸಿ ಎಂದು ಮಾತಿನ ಮೋಡಿ ಮಾಡಬಹುದು. ಅವರ ಮಾತಿಗೆ ಮರುಳಾಗದೇ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದೀರಿ ಎಂದು ಪ್ರಶ್ನಿಸಿರಿ. ಕೆ.ಎಸ್. ಈಶ್ವರಪ್ಪನವರ ಪುತ್ರ ಕಾಂತೇಶಗೆ ಲೋಕಸಭಾ ಚುನಾವಣೆಯ ಟಿಕೆಟ್ ತಪ್ಪಿಸಿದ್ದನ್ನು ಜನರು ಮರೆತಿಲ್ಲ. ಬೊಮ್ಮಾಯಿ ಅವರನ್ನು ಸೋಲಿಸಲೆಂದೇ ಆರ್. ಶಂಕರ್ ಮತ್ತು ನಾವು ಒಂದಾಗಿದ್ದೇವೆ. ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯನ್ನು ನಿರುದ್ಯೋಗ ಮುಕ್ತವನ್ನಾಗಿಸಲು ಉದ್ಯಮ ಸ್ಥಾಪಿಸಲಾಗುವುದು. ನನ್ನ ಕೈಬಲಪಡಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಹಾರೈಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶೇರುಖಾನ್ ಕಾಬೂಲಿ, ಮುಖಂಡರಾದ ವೆಂಕಪ್ಪ ಮಾದಾಪುರ, ರಾಜು ಪಾಟೀಲ, ಭೀಮರಡ್ಡಿ ಕೆಂಚರಡ್ಡಿ, ಗುಡಾನಸಾಬ ದೊಡ್ಡಮನಿ, ಚಂದ್ರಪ್ಪ ಬೆನಕನಕೊಂಡ, ನಾಗರಾಜ ಅಂಗಡಿ, ಉಜನಪ್ಪ ಗ್ಯಾನಗೌಡ್ರ, ಪುಟ್ಟಪ್ಪ ಮರಿಯಮ್ಮನವರ, ಪರಶುರಾಮ ಕೆಂಚರಡ್ಡಿ, ರಾಜು ತಗ್ಗಿನ ಇದ್ದರು.