ಬಿಜೆಪಿ ಭ್ರಷ್ಟಾಚಾರದ ಕೂಪವಿದ್ದಂತೆ

KannadaprabhaNewsNetwork |  
Published : Feb 24, 2026, 04:15 AM IST
ಬಿಜೆಪಿ ಬ್ರಷ್ಟಾಚಾರದ ಕೂಪವಿದ್ದಂತೆ: ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ | Kannada Prabha

ಸಾರಾಂಶ

ಕಾಂಗ್ರೆಸ್‌ ಬಗ್ಗೆ ಯಾವಾಗಲೂ ಭ್ರಷ್ಟಾಚಾರದ ಆರೋಪ ಹೊರಿಸುವ ಬಿಜೆಪಿ ಹುಟ್ಟಿದ್ದೇ ಭ್ರಷ್ಟಾಚಾರದಿಂದ. ಭ್ರಷ್ಟಾಚಾರದ ಹಣದಿಂದಲೇ ದೇಶಾದ್ಯಂತ ಬೃಹತ್ ಬಿಜೆಪಿ ಕಚೇರಿಗಳನ್ನು ಕಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾಂಗ್ರೆಸ್‌ ಬಗ್ಗೆ ಯಾವಾಗಲೂ ಭ್ರಷ್ಟಾಚಾರದ ಆರೋಪ ಹೊರಿಸುವ ಬಿಜೆಪಿ ಹುಟ್ಟಿದ್ದೇ ಭ್ರಷ್ಟಾಚಾರದಿಂದ. ಭ್ರಷ್ಟಾಚಾರದ ಹಣದಿಂದಲೇ ದೇಶಾದ್ಯಂತ ಬೃಹತ್ ಬಿಜೆಪಿ ಕಚೇರಿಗಳನ್ನು ಕಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆರೋಪಿಸಿದರು.

ನಗರದದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಟೀಕಿಸುವ ಬಿಜೆಪಿಗರು ಮೊದಲು ತಮ್ಮ ಪಕ್ಷದಲ್ಲಿನ ಭ್ರಷ್ಟರ ಬಗ್ಗೆ ತಿಳಿದುಕೊಳ್ಲಬೇಕು. ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಯವರು 5 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಅವರು ವೈದ್ಯರಾಗಿದ್ದಾಗಲೇ ಭ್ರಷ್ಟಾಚಾರ ಮಾಡಿದ್ದು ಗೊತ್ತಿದ್ದರೂ ಬಿಜೆಪಿಯವರು ಅವರನ್ನು ಕರೆದು ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ಇದು ಬಿಜೆಪಿಯ ಭ್ರಷ್ಟತನವಾಗಿದೆ. ಇದಲ್ಲದೇ ಈ ಹಿಂದೆ ಬಿಜೆಪಿಯ ಕೆ.ಜಿ.ಎಫ್ ಶಾಸಕ ವೈ.ಸಂಪಂಗಿ 11 ಲಕ್ಷ ಭ್ರಷ್ಟಾಚಾರದ ವ್ಯವಹಾರದಲ್ಲಿ ಸಿಕ್ಕಿಬಿದ್ದಿದ್ದರು, ಚೆನ್ನಗಿರಿ ಶಾಸಕ ಮಾಡಳು ವಿರುಪಾಕ್ಷಪ್ಪನವರು ಕಚೇರಿಯಲ್ಲಿ ₹40 ಲಕ್ಷ ಲಂಚ ಸ್ವೀಕರಿಸುವಾಗಲೇ ಪೊಲೀಸರ ಬಲೆಗೆ ಬಿದ್ದಿದ್ದರು. ಹಿಂದಿನ ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷ್ಮಣ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ನಿಧನರಾದ ಅಜೀತ್ ಪವಾರ ಅವರು ಕೋಟಿ ಕೋಟಿ ಹಗರಣ ಆರೋಪಿಸುತ್ತಿದ್ದರು. ರಾಜ್ಯದ ಸಿಎಂ ಆಗಿದ್ದ ಯಡಿಯೂರಪ್ಪನವರು ₹20 ಲಕ್ಷದ ಡಿಡಿ ಪಡೆದು ಮುಖ್ಯಮಂತ್ರಿಯಾಗಿದ್ದಾಗಲೇ ಬಂಧಿತರಾಗಿದ್ದರು. ಆದರೂ ಬಿಜೆಪಿಯವರು ನಾವು ಪ್ರಾಮಾಣಿಕರು ಎಂದು ಹೇಳಿಕೊಂಡು ತಿರುಗುತ್ತಾರೆ. ಇದು ಬಿಜೆಪಿಗರಿಗೆ ನಾಚಿಕೆಗೇಡಿನ ಸಂಗತಿ ಎಂದರು. ಬಿಜೆಪಿ ಖಾತೆಯಲ್ಲಿ ₹10 ಸಾವಿರ ಕೋಟಿ ಹಣವಿದೆ, ಇದು ಎಲ್ಲಿಂದ ಬಂತು?. ದೆಹಲಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬಿಜೆಪಿ ಕಚೇರಿ ಕಟ್ಟಲು ಹಣ ಎಲ್ಲಿಂದ ಬಂತು?. ಆರ್.ಎಸ್.ಎಸ್.ಕಚೇರಿ ಕಟ್ಟಲು ಹಣ ಎಲ್ಲಿಂದ ಬಂತು?. ಇದಕ್ಕೆಲ್ಲ ಬಿಜೆಪಿ ನಾಯಕರು ಉತ್ತರಿಸಬೇಕು. ಜೊತೆಗೆ ಎಲೆಕ್ಟ್ರಾಲ್ ಬಾಂಡ್ ಕಾಯ್ದೆ ಮಾಡಿ, ಕೋಟಿ ಕೋಟಿ ಹಣ ಸಂಗ್ರಹಿಸಿದ್ದು, ಸುಪ್ರೀಂ ಕೋರ್ಟ್ ಮೂಲಕ ಭ್ರಷ್ಟಾಚಾರ ಬಯಲಾಗಿದೆ. ಪ್ರಾಮಾಣಿಕರಿದ್ದರೆ ಪಿಎಂ ಕೇರ್‌ ಖಾತೆಯಲ್ಲಿ ಹಣವೆಷ್ಟಿದೆ, ಎಲ್ಲಿಂದ ಬಂದಿದೆ ಎಂದು ಬಿಡುಗಡೆ ಮಾಡಬೇಕು ಎಂದು ಸವಾಲು ಹಾಕಿದರು.ಕೆಪಿಸಿಸಿ ಮೆಡಿಕಲ್‌ ಸೆಲ್‌ನ ಡಾ.ರವಿಕುಮಾರ ಬಿರಾದಾರ ಮಾತನಾಡಿ, ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾಡಿರುವ ಕಾಮಗಾರಿಗಳು ಕಳಪೆಯಾಗಿವೆ. ದೊಡ್ಡ ದೊಡ್ಡ ಸೇತುವೆಗಳು ಉರುಳುತ್ತಿವೆ. ಇದಕ್ಕೆ ಕಾರಣ ಇವರ ಕಿಕ್ ಬ್ಯಾಕ್ ಎಂದು ಆರೋಪಿಸಿದರು. ಸಂಸತ್ ಭವನ, ರಾಮ ಮಂದಿರಗಳು ಸಹ ಸೋರಿವೆ.ನೆಲ್ಲದರಲ್ಲೂ ಭ್ರಷ್ಟಾಚಾರ ಎಸಗುವ ಬಿಜೆಪಿಯ ತಾಯಿ-ತಂದೆಯೇ ಭ್ರಷ್ಟಾಚಾರವಾಗಿದೆ. ಬಿಜೆಪಿಯವರು ಭ್ರಷ್ಟಾಚಾರಿಗಳು, ಅತ್ಯಾಚಾರಿಗಳಾಗಿದ್ದಾರೆ. ಇವರು ರಾಷ್ಟ್ರ ಭಕ್ತರಲ್ಲ, ಬಿಜೆಪಿ ಎಂದರೆ ಬ್ರಷ್ಟ ಜನತಾ ಪಾರ್ಟಿಯಾಗಿದೆ ಎಂದರು.ಗೋಷ್ಠಿಯಲ್ಲಿ ಮುಖಂಡರಾದ ನಾಗರಾಜ ಲಂಬು, ಫಯಾಜ್ ಕಲಾದಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ಉಳಿಯಲು ಎಲ್ಲ ಹಿಂದೂಗಳು ಗಟ್ಟಿಯಾಗಿ
ಶಾಸಕರಿಂದ ದಲಿತ ನಿಂದನೆಯಾಗಿಲ್ಲ: ಕಾಂಗ್ರೆಸ್ ಎಸ್‌ಸಿ ಘಟಕ ಸ್ಪಷ್ಟನೆ