ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಗೇ ಗೆಲವು ಖಚಿತ : ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ

KannadaprabhaNewsNetwork |  
Published : Aug 31, 2024, 01:45 AM ISTUpdated : Aug 31, 2024, 10:27 AM IST
ಪಟ್ಟಣದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಏರ್ಪಡಿಸಿದ್ದ ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಪೂರ್ವ ಭಾವಿ ಸಭೆಯ ಉದ್ಘಾಟನೆಯನ್ನು ನೆರವೇರಿಸಿದ ಗಣ್ಯರು | Kannada Prabha

ಸಾರಾಂಶ

ಮುಂಬರುವ ಜಿಪಂ, ಗ್ರಾಪಂ, ತಾಪಂ ಚುನಾವಣೆಗಳಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಲು ಸಂಘಟಿತ ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

 ಚನ್ನಗಿರಿ :  ಕ್ಷೇತ್ರದಲ್ಲಿ ಎಂ.ಪಿ., ಎಂ.ಎಲ್.ಎ., ಎಂ.ಎಲ್.ಸಿ. ನಾಯಕರ ಚುನಾವಣೆಗಳು ಈಗಾಗಲೇ ಮುಗಿದಿವೆ. ಮುಂದೆ ಬರಲಿರುವ ಎಲ್ಲ ಚುನಾವಣೆಗಳು ಕಾರ್ಯಕರ್ತರ ಚುನಾವಣೆಗಳಾಗಿವೆ. ಮುಂಬರುವ ಜಿಪಂ, ಗ್ರಾಪಂ, ತಾಪಂ ಚುನಾವಣೆಗಳಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಲು ಸಂಘಟಿತ ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಕ್ಷೇತ್ರದಲ್ಲಿ 55 ಸಾವಿರ ಬಿಜೆಪಿ ಸದಸ್ಯರ ನೋಂದಣಿ ಮಾಡಿಸಲಾಗಿದೆ. ಈ ಬಾರಿ 60 ಸಾವಿರ ನೋಂದಣಿ ಗುರಿ ಹೊಂದಲಾಗಿದೆ. ಗ್ರಾಪಂ ಚುನಾವಣೆಯಲ್ಲಿ ಕ್ಷೇತ್ರದ 45 ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತರೇ ಅಧ್ಯಕ್ಷರಾಗಲಿದ್ದಾರೆ. ತಾಲೂಕು ಪಂಚಾಯಿತಿ ಬಿಜೆಪಿ ವಶವಾಗಲಿದೆ. 8 ಜಿಪಂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು. ಕಾರ್ಯಕರ್ತರು ಸಂಘಟಿತ ಹೋರಾಟ ಮಾಡಲು ಮುಂದಾಗಿದ್ದಾರೆ ಎಂದರು.

ದಾವಣಗೆರೆ ವಿ.ವಿ. ಮಾಜಿ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಕ್ಷೇತ್ರದಲ್ಲಿ ತಂದೆಯವರ ಜನಪ್ರಿಯತೆ ಸಹಿಸದ ನಮ್ಮ ಪಕ್ಷದ ಕೆಲವು ನಾಯಕರು ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದರು. ಆದರೂ, ಕ್ಷೇತ್ರದ ಮತದಾರರು ಕಳೆದ ಚುನಾವಣೆಯಲ್ಲಿ 63 ಸಾವಿರ ಮತಗಳನ್ನು ನೀಡಿದ್ದಾರೆ. ನಿಮ್ಮಗಳ ಪ್ರೀತಿ- ವಿಶ್ವಾಸಕ್ಕೆ ಸದಾ ಚಿರಋಣಿಯಾಗಿದ್ದೇನೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಕ್ ಮಾತನಾಡಿ, ಚನ್ನಗಿರಿ ಕ್ಷೇತ್ರದಲ್ಲಿ ಯಾವುದೇ ಗೊಂದಲಗಳು ಇಲ್ಲ. ಪಕ್ಷದ ಅಧಿಕೃತ ಕಚೇರಿಯಲ್ಲಿ ನಡೆಯುತ್ತಿರುವ ಸದಸ್ಯತ್ವ ನೋಂದಣಿಯ ಪೂರ್ವಭಾವಿ ಸಭೆಯೇ ಅಧಿಕೃತ ಸಭೆಯಾಗಿದೆ. ಯಾರಲ್ಲಿಯೋ ಗೊಂದಲಗಳು ಬೇಡ ಎಂದರು.

ತಾಲೂಕು ಮುಖಂಡರಾದ ಕೆ.ಬಸವರಾಜ್, ಮಂಗೇನಹಳ್ಳಿ ಲೋಹಿತ್, ಮೆದಿಕೆರೆ ಸಿದ್ದೇಶ್, ಕೆ.ಆರ್.ಗೋಪಿ, ನಟರಾಜ ರಾಯ್ಕರ್, ದಿಗ್ಗೇನಹಳ್ಳಿ ನಾಗರಾಜ್, ಪಟ್ಲಿ ನಾಗರಾಜ್, ಸೋಮಲಾಪುರ ಶ್ರೀನಿವಾಸ್, ದೇವರಹಳ್ಳಿ ಎ.ಎಸ್. ಬಸವರಾಜಪ್ಪ, ಮಲಹಾಳ್ ಕುಮಾರಸ್ವಾಮಿ, ಗಂಗಗೊಂಡನಹಳ್ಳಿ ಜಗದೀಶ್, ಪಿ.ಬಿ. ನಾಯಕ, ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್, ಕಾರ್ಯಕರ್ತರು ಭಾಗವಹಿಸಿದ್ದರು. 

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ