ವಿಶ್ವದಲ್ಲೇ ದೊಡ್ಡ ಪಕ್ಷ ಎನಿಸಿರುವ ಬಿಜೆಪಿ: ರೇಣುಕಾಚಾರ್ಯ

KannadaprabhaNewsNetwork |  
Published : Aug 31, 2024, 01:35 AM IST
ಹೊನ್ನಾಳಿ ಫೋಟೋ 30ಎಚ್.ಎಲ್.ಐ2.ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಬಿಜೆಪಿ ಪಕ್ಷದ  ಸದಸ್ಯತ್ವ ಅಭಿಯಾನ ಹಾಗೂ ಮಂಡಲ ಕಾರ್ಯಗಾರವನ್ನು ಉದ್ಘಾಟಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಮಾತನಾಡಿದರು. | Kannada Prabha

ಸಾರಾಂಶ

ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಬೂತ್ ಮಟ್ಟದಿಂದ ಸದಸ್ಯತ್ವ ಪ್ರಾರಂಭ ಆಗಬೇಕು. ಆಗ ಮಾತ್ರ ರಾಜ್ಯ ಬಿಜೆಪಿ ಘಟಕ ನೀಡಿರುವ ಗುರಿಯನ್ನು ತಲುಪಲು ಸಾಧ್ಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಬೂತ್ ಮಟ್ಟದಿಂದ ಸದಸ್ಯತ್ವ ಪ್ರಾರಂಭ ಆಗಬೇಕು. ಆಗ ಮಾತ್ರ ರಾಜ್ಯ ಬಿಜೆಪಿ ಘಟಕ ನೀಡಿರುವ ಗುರಿಯನ್ನು ತಲುಪಲು ಸಾಧ್ಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಗುರು ಭವನದಲ್ಲಿ ಶುಕ್ರವಾರ ಸದಸ್ಯತ್ವ ಅಭಿಯಾನ ಹಾಗೂ ಮಂಡಲ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೀನ್‍ದಯಾಳ್ ಉಪಾಧ್ಯಾಯ, ಶಾಂಪ್ರಸಾದ್ ಮುಖರ್ಜಿ, ಅಟಲ್‍ಜಿ, ಅದ್ವಾನಿ, ನರೇಂದ್ರ ಮೋದಿ, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಡಿ.ಎಚ್. ಶಂಕರಮೂರ್ತಿ ಸೇರಿದಂತೆ ರಾಮಚಂದ್ರ ಗೌಡ, ಜಗದೀಶ್‍ ಶೆಟ್ಟರ್, ಅಶೋಕ್, ರವೀಂದ್ರನಾಥ್ ಹೀಗೆ ಸಾಕಷ್ಟು ಮುಖಂಡರ ಶ್ರಮ ಪಕ್ಷ ಸಂಘಟನೆಗೆ ಇದೆ. ಪರಿಣಾಮ ರಾಜ್ಯದಲ್ಲಿ ಬಿಜೆಪಿ ಅತಿ ವೇಗದಲ್ಲಿ ಬೆಳೆಯಿತು ಹಾಗೂ ಅಧಿಕಾರಕ್ಕೂ ಬಂತು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪ್ರತಿ ಕ್ಷೇತ್ರಕ್ಕೆ ₹25 ಕೋಟಿ ಕೊಡುತ್ತೇವೆ ಎಂದು ಆದೇಶಿಸಿದ್ದದರು. ಆದರೆ, ಈವರೆವಿಗೂ ಕ್ಷೇತ್ರಕ್ಕೆ ಒಂದು ಪೈಸೆ ಬಂದಿಲ್ಲ. ಹೀಗಾದರೆ ಕ್ಷೇತ್ರ ಅಭಿವೃದ್ಧಿ ಹೇಗೆ ನಡೆಯಬೇಕು? ಪಕ್ಷ ಸಂಘಟನೆ ಮಾಡಿದ್ದರ ಪರಿಣಾಮ 3 ಬಾರಿ ಶಾಸಕನಾದೆ. ಪಕ್ಷವನ್ನು ಬಲವಾಗಿ ಸಂಘಟಿಸಿದರೆ, ಪಕ್ಷ ನಮಗೂ ಅಧಿಕಾರ ನೀಡುತ್ತದೆ ಎಂಬುದಕ್ಕೆ ನಾನೇ ಉದಾಹರಣೆ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಡ್ಲೆಬಾಳು ಧನಂಜಯ ಮಾತನಾಡಿ, ಪ್ರತಿ ಬೂತ್‍ನಿಂದ 300 ಹೊಸ ಸದಸ್ಯರ ಸದಸ್ಯತ್ವ ಮಾಡಬೇಕು. ಆಗ ಮಾತ್ರ ಪಕ್ಷ ಮತ್ತಷ್ಟು ಬಲವರ್ಧನೆಯಾಗಿ, ತಾಪಂ, ಜಿಪಂ ಹಾಗೂ ಮುಂದಿನ ವಿಧಾನಸಭಾ ಚುನಾವಣೆಗೆ ಸಹಕಾರಿಯಾಗಲಿದೆ ಎಂದರು.

ಹೊನ್ನಾಳಿ ಬಿಜೆಪಿ ಮಂಡಲ ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ಮುಖಂಡರಾದ ಶಾಂತರಾಜ್‍ ಪಾಟೀಲ್, ನೆಲಹೊನ್ನೆ ಮಂಜುನಾಥ್, ಸಾಮಾಜಿಕ ಜಾಲತಾಣ ಪ್ರಮುಖ್ ರುದ್ರೇಶ್ ಮಾತನಾಡಿದರು.

ಅರಕೆರೆ ನಾಗರಾಜ್, ದಿಡಗೂರು ಪಾಲಾಕ್ಷಪ್ಪ, ಸುರೇಂದ್ರ ನಾಯ್ಕ್, ಕುಳಗಟ್ಟೆ ರಂಗನಾಥ್, ತರಗನಹಳ್ಳಿ ರಮೇಶ್, ನ್ಯಾಮತಿ ರವಿಕುಮಾರ್, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

- - - -30ಎಚ್.ಎಲ್.ಐ2:

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್