ಮಹೇಶ್‌ಶೆಟ್ಟಿ ತಿಮರೋಡಿ ಬೆಳೆಯಲು ಬಿಜೆಪಿಗರೇ ಕಾರಣ: ಪಿ.ರವಿಕುಮಾರ್ ವಾಗ್ದಾಳಿ

KannadaprabhaNewsNetwork |  
Published : Oct 06, 2025, 01:00 AM IST
5ಕೆಎಂಎನ್ ಡಿ19,20 | Kannada Prabha

ಸಾರಾಂಶ

ಶ್ರೀಮಂಜುನಾಥನ ಶಕ್ತಿ ಎಲ್ಲರಿಗೂ ತಿಳಿದಿದೆ. ಚಕ್ರವ್ಯೂಹ ಈಗ ಯಾವ ರೀತಿ ರಿವರ್ಸ್ ತಿರುಗಿಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ವಿರೋಧ ಪಕ್ಷದವರು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರ ಸರ್ಕಾರ ಇದ್ದಾಗ ಸರಿಯಾದ ನ್ಯಾಯ ಕೊಡಿಸಿಲ್ಲ. ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹೇಶ್‌ಶೆಟ್ಟಿ ತಿಮರೋಡಿ ಬಿಜೆಪಿಯ ಅಸೋಸಿಯೇಟ್. ಆತ ಬೆಳೆಯುವುದಕ್ಕೆ ಬಿಜೆಪಿಗರೇ ಕಾರಣ. ವೋಟ್‌ಗಾಗಿ ದೇವಸ್ಥಾನ, ಧರ್ಮವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ವಾಗ್ದಾಳಿ ನಡೆಸಿದರು.ನಗರದ ವಿವೇಕಾನಂದ ರಂಗಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ನಡೆದ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಸಂಘದಿಂದ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಸರ್ಕಾರ ಯಾರ ಪರವೂ ಅಲ್ಲ. ವಿರೋಧವೂ ಇಲ್ಲ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಹಾಗಾಗಿ ಧರ್ಮಸ್ಥಳ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ ಎಂದರು.

ಶ್ರೀಮಂಜುನಾಥನ ಶಕ್ತಿ ಎಲ್ಲರಿಗೂ ತಿಳಿದಿದೆ. ಚಕ್ರವ್ಯೂಹ ಈಗ ಯಾವ ರೀತಿ ರಿವರ್ಸ್ ತಿರುಗಿಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ವಿರೋಧ ಪಕ್ಷದವರು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರ ಸರ್ಕಾರ ಇದ್ದಾಗ ಸರಿಯಾದ ನ್ಯಾಯ ಕೊಡಿಸಿಲ್ಲ. ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾರು ಕುತಂತ್ರ ಮಾಡುತ್ತಿದ್ದಾರೆ ಎಂಬುದನ್ನು ಎಸ್‌ಐಟಿ ತನಿಖೆ ಮೂಲಕ ನಮ್ಮ ಸರ್ಕಾರ ತೋರಿಸುತ್ತಿದೆ. ಕೆಲವರನ್ನು ಗಡಿಪಾರು ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಅವರ ಪರ, ಇವರ ಪರ ಎಂದು ಸುಳ್ಳು ಅಪಪ್ರಚಾರ ಮಾಡಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯ ಅಸೋಸಿಯೇಟ್ ಮಹೇಶ್ ತಿಮ್ಮರೋಡಿ ಬೆಳೆಯುವುದಕ್ಕೆ ಅವರೇ ಕಾರಣ. ಧರ್ಮಸ್ಥಳ ಚಲೋ ಎಂಬ ಡ್ರಾಮಾ ಕ್ರಿಯೇಟ್ ಮಾಡುತ್ತಾರೆ. ಇದರಿಂದ ಧರ್ಮಸ್ಥಳ ಸಮಸ್ಯೆ ಬಗೆಹರಿಯುವುದಿಲ್ಲ. ತನಿಖೆ ಮಾಡಿದರಷ್ಟೇ ಸತ್ಯ ಹೊರಗೆ ಬರುತ್ತೆ ಎಂದರು.

ರಾಜಕೀಯಕ್ಕಾಗಿ ಸುಮ್ಮನೆ ಜೈಕಾರ ಹಾಕೋದಲ್ಲ. ಯಾರ್‍ಯಾರು ಪಿತೂರಿ ಮಾಡಿದ್ದರೋ ಅವರೆಲ್ಲರನ್ನೂ ಗಡೀಪಾರು ಮಾಡಲಾಗಿದೆ. ಸೌಜನ್ಯಗೂ ನ್ಯಾಯ ಸಿಗುತ್ತೆ. ಧರ್ಮಸ್ಥಳಕ್ಕೂ ನ್ಯಾಯ ಸಿಗುತ್ತೆ. ನಾವು ಎಲ್ಲರ ಪರ, ಬಡವರು, ಹೆಣ್ಣು ಮಕ್ಕಳ ಪರ ಇದ್ದೇವೆ. ವೋಟ್‌ಗಾಗಿ ದೇವಸ್ಥಾನ, ಧರ್ಮವನ್ನು ದುರುಪಯೋಗ ಮಾಡಿಕೊಳ್ಳುತ್ತಿಲ್ಲ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀನಿಶ್ಚಲಾನಂದನಾಥಸ್ವಾಮೀಜಿ ಮಾತನಾಡಿ, ಲಕ್ಷಾಂತರ ಭಕ್ತರಿಗೆ ಅನ್ನದಾಸೋಹ ಮಾಡಿ ಖ್ಯಾತಿಯಾಗಿರುವ ಧರ್ಮಸ್ಥಳ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡಿಸುವ ಕೆಲಸಗಳು ಸಾಗುತ್ತಿವೆ. ವೀರೇಂದ್ರ ಹೆಗ್ಗಡೆ ಅವರನ್ನು ಅವಮಾನಿಸುವ ಕೃತ್ಯಗಳೂ ನಡೆಯುತ್ತಿವೆ. ಇಂತಹ ದುಷ್ಠ ಮನಸ್ಸುಗಳು ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

PREV

Recommended Stories

ಹಸು ಕೊಂದಿದ್ದಕ್ಕೆ ಎಂ.ಎಂ.ಹಿಲ್ಸ್‌ ಹುಲಿಯ ಹತ್ಯೆಗೈದು ಪ್ರತೀಕಾರ!
ಅಫ್ಘಾನಿಸ್ತಾನದಲ್ಲೇ ಉತ್ತಮ ಕೆಲಸ : ಸರಿಯಾಗಿ ಗುಂಡಿ ಮುಚ್ಚದಕ್ಕೆ ಜನಾಕ್ರೋಶ