ಅಧಿಕಾರಕ್ಕೊಸ್ಕರ ಬಿಜೆಪಿಯಿಂದಲೇ ಹಿಂದುಗಳ ಕೊಲೆ

KannadaprabhaNewsNetwork |  
Published : May 25, 2025, 01:40 AM IST
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಇಸ್ಮಾಂ ನಗರದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ  ಕಡಬ ದಿಂದ ಕೆ.ಜಿ.ಟೆಂಪಲ್ ಹೋಗುವ ರಸ್ತೆಯ 10 ಕೋಟಿ ರೂಗಳ ವೆಚ್ಚದ ಕಾಮಗಾರಿಗೆ ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್  ಗುದ್ದಲಿ ಪೂಜೆ ಶಾಸಕ ಎಸ್.ಆರ್.ಶ್ರೀನಿವಾಸ್. | Kannada Prabha

ಸಾರಾಂಶ

ಬಿಜೆಪಿಯವರು ಅಧಿಕಾರಕ್ಕೋಸ್ಕರ ಮಾಡಬಾರದ ಕೆಲಸವನ್ನು ಮಾಡುತ್ತಾ ಹಿಂದುಗಳನ್ನ ಇವರೇ ಕೊಲೆ ಮಾಡಿ ಮುಸ್ಲಿಮರು ಕೊಲೆ ಮಾಡಿದರು ಎಂದು ಶಾಂತಿ ಕದಾಡುತ್ತಿದ್ದಾರೆ. ಇಂತಹ ಕೆಲಸವನ್ನು ಯಾರು ಸಹ ಮಾಡಬಾರದು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಬಿಜೆಪಿಯವರು ಅಧಿಕಾರಕ್ಕೋಸ್ಕರ ಮಾಡಬಾರದ ಕೆಲಸವನ್ನು ಮಾಡುತ್ತಾ ಹಿಂದುಗಳನ್ನ ಇವರೇ ಕೊಲೆ ಮಾಡಿ ಮುಸ್ಲಿಮರು ಕೊಲೆ ಮಾಡಿದರು ಎಂದು ಶಾಂತಿ ಕದಾಡುತ್ತಿದ್ದಾರೆ. ಇಂತಹ ಕೆಲಸವನ್ನು ಯಾರು ಸಹ ಮಾಡಬಾರದು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಇಸ್ಮಾಂ ನಗರದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ 10 ಕೋಟಿ ರುಗಳ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರು ಮಾಡಬಾರದು. ಇದು ಅಕ್ಷಮ್ಯ ಅಪರಾಧವಾಗಿದೆ. ಎಲ್ಲರೂ ಸಮಾಜದ ಅಭಿವೃದ್ಧಿಗೆ ಚಿಂತಿಸಬೇಕು. ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವುದರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಸಮಾಜದಲ್ಲಿ ಎಲ್ಲರೂ ಸಹ ಬೆಳೆಯಬೇಕು ಅವರಲ್ಲೂ ಸಹ ವಿದ್ಯಾವಂತರಿದ್ದು ಸರ್ಕಾರ ಅಂಥವರ ಅಭಿವೃದ್ಧಿಗೆ ಸಹಕಾರವಾಗುತ್ತದೆ ಎನ್ನುವ ಮೂಲಕ ಸರ್ಕಾರವನ್ನು ಸಮರ್ಥಿಸಿಕೊಂಡರು.

ಗೃಹ ಸಚಿವ ಡಾ. ಜಿ.ಪರಮೇಶ್ವರ್ ರವರು ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷ ಹೋರಾಟ ಮಾಡಿಕೊಂಡು ಪಕ್ಷಕ್ಕೆ ದುಡಿದ್ದಿದ್ದಾರೆ. ಅವರ ನಾಯಕತ್ವವನ್ನು ಸಹಿಸದ ಬಿಜೆಪಿ ನಾಯಕರು ಇಡಿ ರೇಡ್ ಮಾಡಿಸಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಬೆಳವಣಿಯನ್ನು ಸಹಿಸದೆ ಡಿ.ಕೆ ಶಿವಕುಮಾರ್ ರವರಿಗೆ ಇನ್ ಕಮ್ ಟ್ಯಾಕ್ಸ್ ರೈಡ್ ಮಾಡಿಸಿ ಜೈಲಿಗೆ ಕಳಿಸಿದ್ದರು. ನಂತರ ಇಡಿ ರೇಡ್‌ ಮಾಡಿಸಿದರು. ಇದು ಕೆಟ್ಟ ರಾಜಕೀಯ ಎಂದರು. ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮಾಡುತ್ತಿರುವ ಬಗ್ಗೆ ನನಗೂ ವಿರೋಧವಿದೆ ಆದರೆ ನಾನೂ ಆಡಳಿತ ಪಕ್ಷದಲ್ಲಿ ಇರುವುದರಿಂದ ಬೀದಿಗಿಳಿದು ಹೋರಾಟ ಮಾಡಲು ಸಾಧ್ಯವಿಲ್ಲ ನಾವು ಎಲ್ಲಿ ಹೇಳಬೇಕು ಅಲ್ಲಿ ಹೇಳುತ್ತೇವೆ ಎಂದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಾಯಿ ಬಿಟ್ಟರೆ ಸಾಕು ಸುಳ್ಳಿನ ಸುರಿಮಳೆಯೇ ಬರುತ್ತದೆ. ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಯಾವತ್ತು ಸತ್ಯ ನುಡಿದಿದ್ದಾರೆ. ಅವರು ಸತ್ಯ ಹೇಳಿದ್ದರೆ ನಾನು ಬೇರೆ ಪಕ್ಷ ಸೇರುವ ಅವಶ್ಯಕತೆ ಇರಲಿಲ್ಲ.

ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಚಂದ್ರಕಾಂತ್ ಉಂಬಾರ್, ಕಾಂಗ್ರೆಸ್ ಮುಖಂಡ ಕೆ.ಆರ್. ವೆಂಕಟೇಶ್, ಲಿಂಗಮ್ಮನಹಳ್ಳಿ ರಾಜಣ್ಣ, ಇರ್ಫಾನ್, ಗ್ರಾಮ ಪಂಚಾಯತಿ ಸದಸ್ಯರಾದ ಅಸ್ಲಾಂ ಪಾಷ, ಶಫಿ, ಖಾಜ ಸಾಬ್, ಇಂಜಿನಿಯರ್ ಯೋಗೀಶ್, ಮುಖಂಡರಾದ ಪಟೇಲ್ ದೇವರಾಜು, ಶಂಕರನಂದ, ಚೇತನ್ ಕುಮಾರ್, ಲಕ್ಷ್ಮಿ ನಾರಾಯಣ, ರೆಹಮತ್,ಗುರು ಚನ್ನಬಸವಣ್ಣ, ಶಂಕರ್ ಕಡಬ, ರಂಗಸ್ವಾಮಿ ಇನ್ನಿತರರು ಇದ್ದರು. ಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!